ಒಪೆಕ್ ಒಪ್ಪಂದದಿಂದ ಹಿಂದೆ ಸರಿದ ಮೆಕ್ಸಿಕೋ

 ಮಾಸ್ಕೋ, ಏ 10 ,ತೈಲ ರಫ್ತು ರಾಷ್ಟ್ರಗಳ ಸಂಘಟನೆಯೊಂದಿಗಿನ ಮಾತುಕತೆಯಿಂದ ಮೆಕ್ಸಿಕೋ ಹಿಂದೆ ಸರಿದಿದೆ. ತೈಲ ಕಡಿತದ ಹೊಸ ಒಪ್ಪಂದಕ್ಕೆ ಮೆಕ್ಸಿಕೋ ಸಹಿ ಹಾಕದೇ ಹಿಂದಕ್ಕೆ ಸರಿದಿದ್ದು ಇತರ ಲ್ಯಾಟಿನ್ ಅಮೆರಿಕನ್ ದೇಶಗಳೊಂದಿಗೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಮೆಕ್ಸಿಕೋ ನಿಯೋಗ ಮಾತುಕತೆಯಿಂದ ಹೊರನಡೆದಿದೆ ಎಂದು ಮೂಲವೊಂದು ತಿಳಿಸಿದ್ದು ಮತ್ತೊಂದು ಮೂಲದ ಮಾಹಿತಿ ಪ್ರಕಾರ ಮೆಕ್ಸಿಕೋ ಹೊಸ ತೈಲ ಕಡಿತ ಒಪ್ಪಂದಕ್ಕೆ ಸಮ್ಮತಿಸಿಲ್ಲ ಎಂದು ಹೇಳಿದೆ. ಇತರ ರಾಷ್ಟ್ರಗಳ ಮಾತುಕತೆ ವೇಳೆ ಕೆಲವು ನಿಯಮಗಳ ಕುರಿತಂತೆ ಮೆಕ್ಸಿಕೋಗೆ ಸಹಮತವಿಲ್ಲ ಎಂದು ತಿಳಿದುಬಂದಿದೆ.