ಟಿಎಪಿಸಿಎಮ್‌ಎಸ್ ಅಧ್ಯಕ್ಷರಾಗಿ ಮೇಟಿ ಉಪಾಧ್ಯಕ್ಷರಾಗಿ ಸೀತಿಮನಿ ಅವಿರೋಧ ಆಯ್ಕೆ
Meti elected unopposed as TAPCMS President, Seethimani as Vice President
ಮುದ್ದೇಬಿಹಾಳ 28: ಪಟ್ಟಣದ ಎಪಿಎಂಸಿಯಲ್ಲಿರುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆಯಲ್ಲಿ ರೈತ ಮನೋಹರ ಮೇಟಿ ಅವರು ಅಧ್ಯಕ್ಷರಾಗಿ, ಕೋಳೂರ ಎಲ್.ಟಿ.ಯ ಚಿದಾನಂದ ಸೀತಿಮನಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ರವೀಂದ್ರ ಎನ್ ಆಳೂರ ಅವರು ನಡೆಸಿದರು. ಚುನಾವಣೆ ಯಾವುದೇ ಗಲಾಟೆವಿಲ್ಲದೇ ಪ್ರಕ್ರಿಯೆ ಶಾಂತಿಯುತ ವಾತಾವರಣದಲ್ಲಿ ನಡೆಯಿತು. ಸಹಾಯಕ ಚುನಾವಣಾಧಿಕಾರಿ ರವೀಂದ್ರ ಆಳೂರ ಅವರ ಮೇಲ್ವಿಚಾರಣೆಯಲ್ಲಿ ನಾಮಪತ್ರ ಸಲ್ಲಿಕೆಯಿಂದ ಫಲಿತಾಂಶ ಘೋಷಣೆವರೆಗೆ ಎಲ್ಲಾ ಹಂತಗಳು ಪಾರದರ್ಶಕವಾಗಿ ನೆರವೇರಿದವು. ಯಾವುದೇ ಅಸಮಾಧಾನ ಅಥವಾ ಆರೋಪಗಳಿಲ್ಲದೆ, ರೈತರು ಸಹಕಾರದಿಂದ ನಡೆದುಕೊಂಡು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲು ಹಾಜರಿದ್ದ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ಸಹಕಾರಿ ಚಳುವಳಿ ಗ್ರಾಮೀಣ ಆರ್ಥಿಕತೆಯ ಹೃದಯವಾಗಿದೆ. ರೈತರ ಜೀವನೋನ್ನತಿಗೆ ಸಹಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಾರದರ್ಶಕ ಆಡಳಿತದ ಮೂಲಕ ರೈತರಿಗೆ ನ್ಯಾಯ ಒದಗಿಸುವಂತೆ ಹೊಸ ತಂಡದಿಂದ ನೀರೀಕ್ಷೆಯಿದೆ ಎಂದ ಅವರು ಇಂದಿನ ದಿನಗಳಲ್ಲಿ ಸಹಕಾರಿಗಳು ಕೇವಲ ವ್ಯಾಪಾರ ಕೇಂದ್ರಗಳಾಗದೆ, ರೈತರ ಸಾಮಾಜಿಕ ಸಬಲೀಕರಣಕ್ಕೂ ವೇದಿಕೆಯಾಗಿ ಕೆಲಸ ಮಾಡಬೇಕು. ಮುದ್ದೇಬಿಹಾಳದ ಒಕ್ಕಲುತನ ಸಂಘ ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದರು.
ಸಂಘದ ಹಿರಿಯ ಸದಸ್ಯರು ತಂಡದ ಆಯ್ಕೆಯನ್ನು ಸ್ವಾಗತಿಸಿ, ಸಂಘವು ಕಳೆದ ಕೆಲವು ವರ್ಷಗಳಿಂದ ಉತ್ತಮ ಆಡಳಿತದೊಂದಿಗೆ ರೈತರ ವಿಶ್ವಾಸ ಗಳಿಸಿದೆ. ಅಧ್ಯಕ್ಷ ಮನೋಹರ ಮೇಟಿ ಅವರು ಸೇವಾಭಾವದಿಂದ ಸಂಘವನ್ನು ಮುಂದಾಳತ್ವ ನೀಡುವರು ಎಂಬ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಮನೋಹರ ಮೇಟಿ ಅವರು ಮಾತನಾಡಿ, ಇದು ನಮ್ಮ ವೈಯಕ್ತಿಕ ಜಯವಲ್ಲ. ರೈತರ ವಿಶ್ವಾಸದ ಜಯ. ನಾವು ರೈತರ ಹಿತವನ್ನು ಮುಂಚೂಣಿಯಲ್ಲಿ ಇಟ್ಟು ಪಾರದರ್ಶಕ ಹಣಕಾಸು ನಿರ್ವಹಣೆ, ಧಾನ್ಯ ಖರೀದಿ ವ್ಯವಸ್ಥೆ ಹಾಗೂ ರೈತರ ಹಕ್ಕುಗಳ ಕಾಪಾಡುವತ್ತ ಕಟಿಬದ್ಧವಾಗಿದ್ದೇವೆ ಎಂದು ಅವರು ಅಭಿವೃದ್ಧಿಯ ಭರವಸೆ ನೀಡಿದರು.
ಉಪಾಧ್ಯಕ್ಷ ಚಿದಾನಂದ ಸೀತಿಮನಿ ಅವರು ಸಹಕಾರಿಯ ಉದ್ದೇಶ ರೈತರ ಹಿತಸಾಧನೆ. ನಮ್ಮ ತಂಡ ಎಲ್ಲ ಸದಸ್ಯರ ಸಲಹೆ ಪಡೆಯುತ್ತಾ ರೈತರ ಸಮಸ್ಯೆಗಳಿಗೆ ಬಲವಾದ ಧ್ವನಿಯಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ರಾಯನಗೌಡ ತಾತರಡ್ಡಿ, ಬಿಕೆ ಬಿರಾದಾರ, ಬಿ.ಎಸ್ ಪಾಟೀಲ್(ಯಾಳಗಿ), ಸಿ.ಬಿ. ಅಸ್ಕಿ, ಗುರಣ್ಣ ಹತ್ತೂರ, ವಿವೇಕಾನಂದ ದ್ಯಾಪೂರ, ರಾಜು ಕೊಂಗಿ, ಶ್ರೀಶೈಲ ಮರೂಳ, ಸಂಘದ ಕಾರ್ಯದರ್ಶಿ ಹಾಗೂ ಸದಸ್ಯರು, ಸಂಘದ ವ್ಯವಸ್ಥಾಪಕರಾದ ಜಿ.ಎಸ್ ಕೋನರೆಡ್ಡಿ, ಸಿಬ್ಬಂದಿ ಮಹಾಂತಗೌಡ ಪಾಟೀಲ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 