ಕ್ರೀಡೆಯಿಂದ ಮಾನಸಿಕ ಆರೋಗ್ಯ ಸಾಧ್ಯ: ಗುರುದತ್ತ ಭಟ್
ಕಾರವಾರ 27: ಕ್ರೀಡಾ ಸ್ಪಧರ್ೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗುವುದರ ಜತೆಗೆ ಸಮಾನತೆ ಮತ್ತು ಏಕತೆಯ ಭಾವ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಪತ್ರಕರ್ತ ಗುರುದತ್ತ ಭಟ್ ಅಭಿಪ್ರಾಯಪಟ್ಟರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡಾ ಸ್ಪಧರ್ೆಗಳಲ್ಲಿ ಬೇರೆ ಬೇರೆ ಊರು, ಜಾತಿ, ಧರ್ಮದ ಜನ ತಮ್ಮ ಭಿನ್ನತೆಯನ್ನು ಮರೆತು ಒಂದು ತಂಡವಾಗಿ ಪಾಲ್ಗೊಳ್ಳುತ್ತಾರೆ. ಇದು ಒಗ್ಗಟ್ಟನ್ನು ಮೂಡಿಸಲು ಸಹಕಾರಿಯಾಗುತ್ತದೆ. ಕ್ರೀಡಾ ಸ್ಪಧರ್ೆಗಳಲ್ಲಿ ಬಹುಮಾನ ಗೆಲ್ಲುವುದೇ ಮುಖ್ಯವಲ್ಲ. ನಿತ್ಯದ ಕೆಲಸದ ಒತ್ತಡ ಮರೆತು ಮನಸ್ಸನ್ನು ಚೇತೋಹಾರಿಯಾಗಿಸುವ ಕ್ರೀಡಾಕೂಟದ ಲಾಭವನ್ನು ಪ್ರತಿ ಸ್ಪಧರ್ಿಯೂ ಪಡೆಯಬೇಕು ಎಂದು ಆಶಿಸಿದರು. ಜಿಲ್ಲೆಯ ಗೃಹರಕ್ಷಕ ದಳದವರು ಶಿಸ್ತು ಪಾಲನೆ ಕರ್ತವ್ಯ ನಿರ್ವಹಣೆಯಲ್ಲಿ ಮಾದರಿಯಾಗಿದ್ದಾರೆ. ಹೊರ ರಾಜ್ಯದವರೂ ಇಲ್ಲಿನ ಹೋಂ ಗಾಡರ್್ಗಳ ಗುಣಮಟ್ಟದ ಸೇವೆಯನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠ ದೀಪಕ್ ಗೋಕರ್ಣ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಉತ್ತಮ ನಿರ್ವಹಣೆ ತೋರಿದ 35 ಕ್ರೀಡಾಪಟುಗಳನ್ನು ವಲಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಗೃಹರಕ್ಷಕ ಸಿಬ್ಬಂದಿಗೆ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಇದು ಉತ್ತಮ ಅವಕಾಶವಾಗಿದ್ದು ಎಲ್ಲ ಸ್ಪಧರ್ಿಗಳು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಗೃಹರಕ್ಷಕ ದಳದ ಚೆಂಡಿಯಾ ಘಟಕಾಧಿಕಾರಿ ರಾಘವೇಂದ್ರ ಗಾಂವ್ಕರ್ ಸ್ವಾಗತಿಸಿದರು. ಗೃಹರಕ್ಷಕ ದಳದ ಕಚೇರಿ ಸಿಬ್ಬಂದಿ ಮಧು, ಕಾರವಾರ ಘಟಕಾಧಿಕಾರಿ ಎಸ್. ಕೆ. ನಾಯ್ಕ ಹಾಗೂ ಮಲ್ಲಾಪುರ ಪ್ರಭಾರಿ ಘಟಕಾಧಿಕಾರಿ ಪ್ರಭು ಇದ್ದರು. ಸ್ಪಧರ್ೆಯ ನಿಣರ್ಾಯಕರಾಗಿ ದೈಹಿಕ ಶಿಕ್ಷಕರಾದ ರಾಜಾಸಾಬ ಡಂಗಣ್ಣವರ್, ಜಯಂತ ನಾಗೇಕರ್, ರಾಜೇಶ ಗುರವ್ ಹಾಗೂ ಮಹಾದೇವ ರಾಣೆ ಆಗಮಿಸಿದ್ದರು. ಬಳಿಕ ವಾಲಿಬಾಲ್, ಕಬ್ಬಡ್ಡಿ ಮತ್ತಿತರ ಗುಂಪು ಸ್ಪಧರ್ೆಗಳು ನಡೆದವು.