ಕ್ರೀಡಾಕೂಟದಲ್ಲಿ ಮೆಣಸಗಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

 ಕ್ರೀಡಾಕೂಟದಲ್ಲಿ ಮೆಣಸಗಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ Menasagi College students selected for state level in sports meet

ಲೋಕದರ್ಶನ ವರದಿ 

ಕ್ರೀಡಾಕೂಟದಲ್ಲಿ ಮೆಣಸಗಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ 

ಗದಗ 08: ಇತ್ತಿಚೆಗೆ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಮೈಲಾರ​‍್ಪ ಮೆಣಸಗಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಈ ಸಾಧನೆಗೆ ಆದಿಯೋಗಿ ಎಜುಕೇಷನಲ್ ಟ್ರಸ್ಟ್‌ ನ ಸಹ ಸಂಸ್ಥೆಯಾದ ಇನ್ಸೈಟ್ ಅಕಾಡೆಮಿ ಕಾರಣವಾಗಿದ್ದು, ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಿ ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಇನ್ಸ್‌ ಸೈಟ್ ಅಕಾಡೆಮಿಯ ಕಾರ್ಯ ಶ್ಲಾಘನೀಯ ಎಂದು ಮೈಲಾರ​‍್ಪ ಮೆಣಸಗಿ ಮೆಮೋರಿಯಲ್ ಟ್ರಸ್ಟ್‌ ಕಾರ್ಯಾಧ್ಯಕ್ಷ  ಡಾ. ಜಯದೇವ ಮೆಣಸಗಿ ಹೇಳಿದರು.  

ಅವರು ನಗರದ ಮೈಲಾರ​‍್ಪ ಮೆಣಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಕ್ರೀಡಾ ಸಾಧನೆ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು.  

ಮಕ್ಕಳಲ್ಲಿ ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡಿದಾಗ ಮಾತ್ರ ವಿದ್ಯಾರ್ಥಿ ಸರ್ವಾಂಗೀಣ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯ ಎಂದು ಹೇಳಿದರು.  

ಬಾಲಕರ ಮತ್ತು ಬಾಲಕೀಯರ ಶೆಟಲ್ ಬ್ಯಾಟ್ ಮಿಟನ್, ಈಜು, ಮತ್ತು ಬಾಲಕರ ಕರಾಟೆ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದು, ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ತೋರಲಿ ಎಂದು ಶುಭಹಾರೈಸಿದರು.  

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಿದ ಪ್ರಾದ್ಯಾಪಕ ಹಾಗೂ ಇನ್ ಸೈಟ್ ಅಕಾಡೆಮಿಯ ವಸಿಮ್ ರಾಜ್ ದೊಡ್ಡಮನಿ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  

ಈ ವೇಳೆ ಆದಿಯೋಗಿ ಎಜುಕೇಷನಲ್ ಟ್ರಸ್ಟ್‌ ಅಧ್ಯಕ್ಷ ಶ್ರೀಕಾಂತಗೌಡ ಪಾಟೀಲ್, ಪವನ್ ಕುಮಾರ್ ಶೇಠ್,  ಕುಮಾರ್ ರಾಥೋಡ್, ಎನ್‌.ಎಂ. ಮುಲ್ಲಾ, ನದೀಮ್ ಮುಲ್ಲಾ, ವಸೀಂ ರಾಜ್ ದೊಡ್ಡಮನಿ ಪ್ರಾಚಾರ್ಯ ಶರತ್ ಕುಮಾರ್ ವಿಜೇತ ವಿದ್ಯಾರ್ಥಿಗಳಿಗೆ  ಅಭಿನಂದಿಸಿದರು.