ಮಹಿಳೆಯ ಸಾಧನೆಗೆ ಪುರುಷರ ಸಹಕಾರ ಅಗತ್ಯ

ಗುಳೇದಗುಡ್ಡ,11: ಇಂದು ಮಹಿಳೆ ಎಲ್ಲ ರಂಗಗಳಲ್ಲಿ ತನ್ನ ಜಾಣ್ಮೆಯನ್ನು ತೋರಿಸಿದ್ದಾಳೆ. ಅವಳು ಮೊದಲಿನ ತರಹ ದುರ್ಬಲಳಾಗದೇ ಸಬಲೆಯಾಗುತ್ತಿದ್ದಾಳೆ.  ಮಹಿಳೆ ಇಲ್ಲದೇ ಜಗತ್ತಿನಲ್ಲಿ ಏನೂ ನಡಿಯಲ್ಲ.  ತಾಯಿ, ತಂಗಿ, ಹೆಂಡತಿ, ಮಗಳಾಗಿ ಎಲ್ಲ ಸೇವೆ ಮಾಡುತ್ತ ಗಂಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಬಂದ ತ್ಯಾಗಜೀವಿಯವಳು. ಅವಳಿಗೆ ಪುರುಷರ ಸಹಕಾರ ಕೂಡಾ ಅಷ್ಟೇ ಅಗತ್ಯವೆಂದು ಇಲ್ಲಿನ  ಯುವಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ದ್ರಾಕ್ಷಾಯಣಿ ಬಂಡಿ ಹೇಳಿದರು. 

   ಅವರು ರವಿವಾರ ಯುವಶಕ್ರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನೇಕಾರ ಸಾಧಕ ಮಹಿಳೆಯರಿಗೆ  ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆ ಕೇವಲ ಮಕ್ಕಳನ್ನು ಹೆರುವ ಯಂತ್ರವಲ್ಲ. ಆಟೋದಿಂದ ಹಿಡಿದು ಬಾಹ್ಯಾಕಾಶದಲ್ಲಿ ಹಾರುವಷ್ಟರ ಮಟ್ಟಿಗೆ ಬೆಳೆದಿದ್ದಾಳೆ.  ಮಹಿಳೆಯರ ಕಲ್ಯಾಣಕ್ಕಾಗಿ ಸಕರ್ಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳನ್ನು ಸದುಪಯೋಗ ಪಡೆದುಕೊಂಡು ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು. 

   ಸಕರ್ಾರಿ ಆಸ್ಪತ್ರೆಯ ಐಸಿಟಿಸಿ ಕೇಂಂದ್ರದ ಆಪ್ತ ಸಮಾಲೋಚಕಿ ಜಯಶ್ರೀ ಕಳಸಾ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಮಹಿಳೆ ಎಷ್ಟು ಆರೋಗ್ಯವಂತಳಾಗಿರುತ್ತಾಳೋ ಅಷ್ಟು ಆ ಮನೆ ಖುಷಿಯಾಗಿರುತ್ತದೆ. ಮಹಿಳೆಯರು ಹೆರಿಗೆ ಸಮಯದಲ್ಲಿ ಕಾಳಜಿವಹಿಸಬೇಕು ಎಂದರು. 

  ಸಂಸ್ಥೆಯ ಸಿಇಓ ಸಿದ್ದಪ್ಪ ಮಡಿವಾಳರ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಈ ವರ್ಷ  ಸುಮಾರು 1055ಜನ ಮಹಿಳೆಯರಿಗೆ ಕೇಂದ್ರ ಸರಕಾರದಿಂದ ನೇಕಾರಿಕೆ ತರಬೇತಿ ನೀಡಿದ್ದೇವೆ. ಮಹಿಳೆ ಎಲ್ಲ ರಂಗಗಳಲ್ಲಿ ಮುಂದೆ ಬರಬೇಕು ಎಂದು ಹೇಳಿದರು. 

ನೇಕಾರಿಕೆ ವೃತ್ತಿಯಲ್ಲಿ ಉತ್ತಮ ಸಾಧನೆಗೈದ ಮಹಿಳಾ ನೇಕಾರರಾದ ಲಕ್ಷ್ಮೀಬಾಯಿ ಲಂಡುನ್ನವರ, ನಿರ್ಮಲಾ ಅಲದಿ, ಮಂಜುಳಾ ಕನ್ನಾಳ, ಸುಗುಣಾ ಬಸವರಾಜ ಶೀಪ್ರಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದಶರ್ಿ ಬಸವರಾಜ ಯಂಡಿಗೇರಿ, ಖಜಾಂಚಿ ನಾಗರತ್ನಾ ಎಮ್ ಮಳಗಾವಿ, ಮಲ್ಲಿಕಾಜರ್ುನ ಕಲಕೇರಿ, ರಾಜು ಕಟಗೇರಿ, ಪ್ರಾಚಾರ್ಯ ಶ್ರೀಕಾಂತ ಜೋಶಿ, ನೀತಾ ಮುಳ್ಳಾನವರ, ಆದಪ್ಪ ಮುಳಗುಂದ, ಶಶಿಧರ ರಾಜನಾಳ, ಸುಮಿತ್ರಾ ಈಟಿ, ದಾಕ್ಷಾಯಣಿ ವಾಳದುಂಕಿ, ಅಮೃತಾ ಕೋಳಿ, ಮೋಹನ ರಾಸನಕರ, ಬೆನಕಪ್ಪ ಶೇಬಿನಕಟ್ಟಿ ಸೇರಿದಂತೆ ಇತರರು ಇದ್ದರು. ಶಿಲ್ಪಾ ಪರಗಿ ಸ್ವಾಗತಿಸಿದರು. ರೂಪಾ ಗಾಜಿ ನಿರೂಪಿಸಿದರು. ಪದ್ಮಾ ಮನಿ ವಂದಿಸಿದರು.