ಧಾರವಾಡ 29: ಇತಿಹಾಸದ ಕುರುಹುಗಳಾದ ಸ್ಮಾರಕ, ಶಾಸನಗಳು, ನಾಣ್ಯಗಳನ್ನು ಸಂರಕ್ಷಿಸದಿದ್ದರೆ ನಮ್ಮ ಮುಂದಿನ ಜನಾಂಗಕ್ಕೆ ಇತಿಹಾಸದ ಅರಿವಿಲ್ಲದೇ ಹೋಗಬಹುದು. ಸ್ಮಾರಕಗಳನ್ನು ವಿರೂಪಗೊಳಿಸುವುದು ಅಕ್ಷಮ್ಯ ಅಪರಾಧ ಎಂದು ಇತಿಹಾಸ ತಜ್ಞರಾದ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಕನರ್ಾಟಕ ಇತಿಹಾಸ ಅಕ್ಯಾಡಮಿ ಬೆಂಗಳೂರು ಮಾನವ ಹಕ್ಕುಗಳ ಘಟಕ ಹಾಗೂ ಎನ್.ಎಸ್.ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ "ಇತಿಹಾಸ ಪರಂಪರೆ ಉಳಿಸಿ" ಎಂಬ ಕಾರ್ಯಕ್ರಮವನ್ನು ಭಿತ್ತಿಪತ್ರ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ರಾಹ್ಮಿ ಲಿಪಿಯಿಂದಲೇ ಉಗಮವಾದ ಅನೇಕ ಲಿಪಿಗಳನ್ನು ಭಾರತೀಯರು ಬಳಸುತ್ತಿದ್ದರೂ ತಾವೇ ಬರೆದ ಬ್ರಾಹ್ಮಿ ಲಿಪಿಯನ್ನು ಓದಲಾರದೇ ಹೋದದ್ದು, ಅತಿ ಆಶ್ಚರ್ಯಕರವಾದ ಸಂಗತಿ. ಬ್ರಾಹ್ಮಿ ಲಿಪಿಯನ್ನು ಮೊಟ್ಟಮೊದಲ ಬಾರಿಗೆ ಓದಿದ ನೀತಿ ಜೇಮ್ಸ್ ಪ್ರಿನ್ಸೆಸ್ ಎಂಬ ವಿದ್ವಾಂಸನಿಗೆ ಸಲ್ಲುತ್ತದೆ. ಇದೇ ಭಾರತೀಯ ಲಿಪಿಶಾಸ್ತ್ರದ ಅಧ್ಯಯನಕ್ಕೆ ಕಾರಣವಾಯಿತು.
ವೀರೇಂದ್ರ ಹೆಗ್ಗಡೆಯವರು ಧಮರ್ೋತ್ಥಾನ ಟ್ರಸ್ಟನಿಂದ ಪುರಾತನ ದೇವಾಲಯಗಳನ್ನು ಸಂರಕ್ಷಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದು ಹೇಳಿದರು.
ನಿವೇದಿತಾ ಹಾಗೂ ಪ್ರಿಯಾಂಕಾ ಪ್ರಾಥರ್ಿಸಿದರು. ಅಶ್ವಿನಿ ಸ್ವಾಗತಿಸಿದರು. ಸಂಜಯ ಕರಾಡೆ ವಂದಿಸಿದರು. ಸೂರಜ್ ಜೈನ್, ಮಹಾವೀರ ಉಪಾದ್ಯೆ, ಬಿ.ಜೆ ಕುಂಬಾರ, ಆರ್.ವಿ ಚಿಟಗುಪ್ಪಿ ಉಪಸ್ಥಿತರಿದ್ದರು.