ಬಣಜಿಗರಿಗೆ 2ಎ ಮೀಸಲಾತಿ ಜಾರಿಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ
Memorandum submitted to the government demanding the implementation of 2A reservation for Banajigas
ಕೊಲ್ಹಾರ: ಬಣಜಿಗ ಸಮುದಾಯವನ್ನು ಉದ್ಯೋಗ ಮೀಸಲಾತಿ ಉದ್ದೇಶಕ್ಕಾಗಿ ಪ್ರವರ್ಗ 2ಎ ಅಡಿಯಲ್ಲಿಯೇ ಪರಿಗಣಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಬಣಜಿಗ ಸಮುದಾಯದ ಮುಖಂಡರಿಂದ ತಹಶ್ದೀಲ್ದಾರ ಸಂತೋಷ ಮ್ಯಾಗರಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ
ಮನವಿಯಲ್ಲಿ, ಮೈಸೂರು ಜಿಲ್ಲೆಯ ಕೊಳ್ಳೆಗಾಲದ ಶಿಕ್ಷಕಿ ಸುಮಿತ್ರಾ ಸಲ್ಲಿಸಿದ್ದ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು 2025ರ ಏಪ್ರಿಲ್ 9ರಂದು ನೀಡಿದ ತೀರ್ಿನಲ್ಲಿ, ಬಣಜಿಗ ಸಮುದಾಯವನ್ನು ಉದ್ಯೋಗಕ್ಕಾಗಿ ಪ್ರವರ್ಗ ಡಿ ಹಾಗೂ ಶಿಕ್ಷಣಕ್ಕಾಗಿ ಪ್ರವರ್ಗ ಬಿ ಅಡಿಯಲ್ಲಿ ವರ್ಗೀಕರಿಸಿರುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಸಂವಿಧಾನದ ಪರಿಚ್ಛೇದ 16(4)ರ ಅನ್ವಯ ಉದ್ಯೋಗ ಮೀಸಲಾತಿಗೂ ಪ್ರವರ್ಗ ಬಿ (ಪ್ರಸ್ತುತ 2ಎ) ಅಡಿಯಲ್ಲಿಯೇ ಪರಿಗಣಿಸುವಂತೆ ಮರು ವರ್ಗೀಕರಣಕ್ಕೆ ಆದೇಶ ನೀಡಿದೆ ಎಂದು ಉಲ್ಲೇಖಿಸಲಾಗಿದೆ.
ಬಣಜಿಗ ಸಮುದಾಯ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಕಾರಣ ಸರ್ಕಾರಿ ಉದ್ಯೋಗಗಳಲ್ಲಿ ಸಮರ್ಕ ಅವಕಾಶಗಳಿಂದ ವಂಚಿತವಾಗುತ್ತಿದೆ. ಹೀಗಾಗಿ ಉಚ್ಚ ನ್ಯಾಯಾಲಯದ ಆದೇಶವನ್ನು ತ್ವರಿತವಾಗಿ ಜಾರಿಗೆ ತಂದು, ಬಣಜಿಗ ಸಮುದಾಯಕ್ಕೆ ಉದ್ಯೋಗ ಮೀಸಲಾತಿಯಲ್ಲಿ ಪ್ರವರ್ಗ 2ಎ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ಶಿವಾನಂದ ಶೀಲವಂತ, ಸಿದ್ರಾಮಪ್ಪ ಬಾಗಿ, ರಾಜಶೇಖರ ಶೀಲವಂತ, ಬಸವರಾಜ ಹುಲ್ಯಾಳ, ರಾಚಪ್ಪ ಎಸ್ ಕೊಟ್ಟಗಿ, ಈರಣ್ಣ ಎಂ ಕೊಟ್ಟಗಿ, ಬಸವರಾಜ ಕೋರಿ, ಚನಮಲ್ಲಪ್ಪ ಕೊಕಟನೂರ, ಸಂಗಪ್ಪ ತುಪ್ಪದ, ರಾಜಶೇಖರ್ ತಿಮ್ಮಶೆಟ್ಟಿ,ಶರಣಪ್ಪ ಅನಗಡಿ, ಸಿದ್ದು ಕಲಾದಗಿ ಸೇರಿದಂತೆ ಇತರರು ಇದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 