ನಗರದ 24ನೇ ವಾಡರ್ಿನಲ್ಲಿ ಸದಸ್ಯತ್ವ ಅಭಿಯಾನ ಆರಂಭ

ಲೋಕದರ್ಶನವರದಿ

ರಾಣೇಬೆನ್ನೂರು-ಜು.26: ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಪಕ್ಷವು ಕಂಕಣಬದ್ಧವಾಗಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗುವ ಮೂಲಕ ಬಿಜೆಪಿ ಪಕ್ಷದ ಸದಸ್ಯತ್ವವನ್ನು ಹೊಂದಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ||  ಬಸವರಾಜ ಕೇಲಗಾರ ಹೇಳಿದರು.

    ಅವರು ನಗರದ 24 ನೇ ವಾಡರ್ಿನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.  ಪ್ರಧಾನಿ ನರೇಂದ್ರ ಮೋದಿಯವರ ಪಾರದರ್ಶಕ ಆಡಳಿತದಿಂದಾಗಿ 2 ನೇ ಬಾರಿ ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷವು ಅತ್ಯಂತ ಶಿಸ್ತಿನ ಪಕ್ಷವಾಗಿದ್ದು ಪ್ರತೀ ಗ್ರಾಮ ಮಟ್ಟದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಜನರ ಮನಸಿಗೆ ಮುಟ್ಟುವಂತೆ ಪ್ರಚಾರ ಪಡಿಸಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದರು.

     ಕಳೆದ 5 ವರ್ಷದ ಅವಧಿಯಲ್ಲಿ ನರೇಂದ್ರ ಮೋದಿಜಿ ನಾಯಕತ್ವದಲ್ಲಿ ದೇಶದಲ್ಲಿ ಹಲವಾರು ಅಭಿವೃದ್ಧಿ ಪರ್ವವೇ ಶುರುವಾಗಿದೆ. 

ಬಡವರ, ದೀನ ದಲಿತರ, ರೈತರ ಶ್ರೇಯೋಭಿವೃದ್ದಿಗೆ ಕಂಕಣ ಬದ್ಧವಾಗಿರುವ ಬಿಜೆಪಿ ಪಕ್ಷಕ್ಕೆ ಇಂದಿನ ಯುವಕರ ಕೊಡುಗೆ ಅಮೂಲಾಗ್ರವಾಗಿದ್ದು ಪ್ರತಿಯೊಬ್ಬ ಯುವಕರು ಬಿಜೆಪಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಸದಸ್ಯತ್ವ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 

       ನಗರಸಭೆ ಸದಸ್ಯೆ ಮಂಜುಳಾ ಹತ್ತಿ, ಎ.ಬಿ.ಪಾಟೀಲ, ಸತೀಶ ಕಲಾಲ, ವಿಕಾಸ, ಸೋಮಶೇಖರ ಹಲಗೇರಿ, ಚನ್ನಮ್ಮ ಗುರುಪಾದೇವರಮಠ, ಮುತ್ತಣ್ಣ ಕಾಕೋಳ, ಪ್ರಕಾಶ ಚಿನ್ನಿಕಟ್ಟಿ, ಕಿರಣ ಅಂಗಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.