ಮುಸ್ಲಿಮ್ ಬ್ಯಾಂಕ್ ಅಧ್ಯಕ್ಷರಾಗಿ ಮಹಬೂಬ ಕೆಂಭಾವಿ ಅವಿರೋಧ ಆಯ್ಕೆ
Mehbooba Kembhavi elected unopposed as Muslim Bank Chairman
ತಾಳಿಕೋಟಿ, 11 : ಪಟ್ಟಣದ ಮುಸ್ಲಿಂ ಸಮಾಜದ ಪ್ರತಿಷ್ಠಿತ ದಿ.ಮುಸ್ಲಿಮ್ ಕೋ- ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ನೂತನ ಅಧ್ಯಕ್ಷರಾಗಿ ಮಹಬೂಬ ಹಜರೇಸಾಬ ಕೆಂಭಾವಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಚಂದಾಹುಸೇನ ಖಾಂಜಾದೆ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಹಬೂಬ ಹಜರೇಸಾಬ ಕೆಂಭಾವಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆ ನಡೆಯಿತು. 12 ನಿರ್ದೇಶಕರ ಬಲ ಹೊಂದಿರುವ ಮುಸ್ಲಿಂ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ 7 ನಿರ್ದೇಶಕರು ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ, ಸಹಾಯಕರಾಗಿ ಬ್ಯಾಂಕನ ವ್ಯವಸ್ಥಾಪಕ ಎಲ್.ಆರ್.ನಾಗೂರ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ರಫೀಕ ಬೇಪಾರಿ, ನಿರ್ದೇಶಕರಾದ ಚಂದಾಹುಸೇನ ಖಾಂಜಾದೆ, ಮಹ್ಮದ ಇಸ್ಮಾಯಿಲ(ತನವೀರ)ಮನಗೂಳಿ, ದಾದೇಪೀರ ಚೌದ್ರಿ, ಮುರ್ತುಜಾ(ಮುನ್ನಾ )ಅರ್ಜುಣಗಿ, ಸಕೀನಾಬಿ ಚಂದಾಸಾಬ ಲಾಹೋರಿ ಇದ್ದರು.
ವಿಜಯೋತ್ಸವ: ಮುಸ್ಲಿಂ ಬ್ಯಾಂಕ್ ಅಧ್ಯಕ್ಷರಾಗಿ ಮಹಬೂಬ ಕೆಂಭಾವಿ ಅವಿರೋಧ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಹಾಗೂ ಮುಖಂಡರುಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮಹಬೂಬ ಕೆಂಭಾವಿ ಅವರು ಮಾತನಾಡಿ ನನ್ನ ಮೇಲೆ ವಿಶ್ವಾಸ ಇಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅವರೆಲ್ಲರನ್ನು ಒಗ್ಗೂಡಿಸಿಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸಮಾಜದ ಗಣ್ಯರಾದ ಮಾಸೂಮಸಾಬ ಕೆಂಭಾವಿ, ಅಬ್ದುಲ್ ಗನಿಸಾಬ ಲಾಹೋರಿ, ಮುರ್ತುಜಾಸಾಬ ಜಮಾದಾರ, ಅಬ್ದುಲ್ ರೆಹಮಾನಸಾಬ ಎಕೀನ, ಹೈದರಶಾ ಮಕಾಂದಾರ, ಖಾಜಾಹುಸೇನ ಸಗರ, ಹಸನಸಾಬ ಮನಗೂಳಿ, ಆದಮಸಾಬ ಕೊಡೆಕಲ್ಲ, ಇಬ್ರಾಹಿಂ ಆರಬೋಳ, ಎನ್.ಎ.ಖಾಜಿ, ಅಬ್ಬಾಸಲಿ ನಿಡಗುಂದಿ, ರಫೀಕ ಬೇಪಾರಿ, ಆಸೀಫ ಕೆಂಭಾವಿ, ಲಾಡ್ಲೇಮಶಾಕ ಮುರಾಳ, ಹುಸೇನಸಾಬ ಕೆಂಭಾವಿ, ದಸ್ತಗೀರ ಕೆಂಭಾವಿ, ಮಹಮದ್ ಕೆಂಭಾವಿ, ಮೂಸಾ ಕೆಂಭಾವಿ, ಬಸೀರ ಎಕ್ಕೇಲಿ, ಸಂಜೀವ ಬರದೇನಾಳ, ರಾಮಣ್ಣ ಕಟ್ಟಿಮನಿ, ಹಾಗೂ ಅಭಿಮಾನಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 