ಅಂಕಲಿ ಗ್ರಾಮದ ಕೆಲ್‌ಇ ಸಂಸ್ಥೆಯ ಐತಿಹಾಸಿಕ ಯಶಸ್ಸಿನ ಮೆಗಾ ಉದ್ಯೋಗ ಮೇಳ!

ಅಂಕಲಿ ಗ್ರಾಮದ ಕೆಲ್‌ಇ ಸಂಸ್ಥೆಯ ಐತಿಹಾಸಿಕ ಯಶಸ್ಸಿನ ಮೆಗಾ ಉದ್ಯೋಗ ಮೇಳ! Mega job fair of KEL Institute in Ankali village is a historic success!

ಲೋಕದರ್ಶನ ವರದಿ 

ಮಾಂಜರಿ 17 : ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ   ಕೆ ಲ್‌ಇ  ಸಂಸ್ಥೆಯ ಬಿಸಿಎ ಮತ್ತು ಬಿಬಿಎ ಮಹಾವಿದ್ಯಾಲದಲ್ಲಿ ಬುಧವಾರರಂದು  ಆಯೋಜಿಸಲಾಗಿದ್ದ ಮೆಗಾ ಉದ್ಯೋಗ ಮೇಳ ಐತಿಹಾಸಿಕ ಯಶಸ್ಸನ್ನು ಕಂಡಿತು. ಈ ಉದ್ಯೋಗ ಮೇಳದಲ್ಲಿ ಎಎಂಜಿ ಟೀಮ್ಸ್‌, ಡ್ಯಾಶ್ ಲಾಕ್, ಟಾಟಾ ಎಲೆಕ್ಟ್ರಾನಿಕ್ಸ್‌,  ಇಂಡೋಮಿಮ್, ಫೋಕ್ಸ್ಕಾನ್, ಎಥರ್, ಒಮೆಗಾ, ಸ್ನೈಡರ್, ಶ್ಯಾಪ್ಲರ್, ಬ್ಲಿಂಕಿಟ್, ಸ್ವಿಗ್ಗಿ, ಡೆಂಜೋ, ಝೇಮ್ಯಾಟೋ, 24.7 ಎಐ ಸೇರಿದಂತೆ 15 ಕಂಪನಿಗಳು ಆಗಮಿಸಿದ್ದವು.  

630  ಅಭ್ಯರ್ಥಿಗಳು ಆನ್ಲೈನ್ ರಿಜಿಸ್ಟರ್ ಮಾಡಿದ್ದರೆ, 430 ಅಭ್ಯರ್ಥಿಗಳು ಆಫ್ಲೈನ್ ರಿಜಿಸ್ಟರ್ ಮಾಡಿದ್ದರು. ಇವರಲ್ಲಿ 250ಕ್ಕೂ ಹೆಚ್ಚು ಅಭ್ಯರ್ಥಿಗಳು ಇವತ್ತು ನೇರವಾಗಿ ತಮ್ಮ ಉದ್ಯೋಗವನ್ನು ಕಲ್ಪಿಸಿಕೊಂಡರೆ, ಇನ್ನೂ ಕೆಲವು ಅಭ್ಯರ್ಥಿಗಳು ಅವರು ನೀಡಿದ ಸಂದರ್ಶನದ ಆಧಾರದ ಮೇಲೆ ಮುಂದಿನ ಕೆಲವು ದಿನಗಳಲ್ಲಿ ಕಂಪನಿಗಳಿಂದ ಕರೆ ಅಥವಾ ಇ-ಮೇಲ್ ಗಳ ಮುಖಾಂತರ ತಮ್ಮ ಉದ್ಯೋಗವನ್ನು ಪಡೆದುಕೊಳ್ಳಲಿದ್ದಾರೆ. ಹೀಗೆ ಒಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ನೊಂದಾಯಿತರಾಗಿ ಮತ್ತು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಈ ಉದ್ಯೋಗ ಮೇಳವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದ್ದಕ್ಕೆ ಮಹಾವಿದ್ಯಾಲಯದ ಆಡಳಿತ ಮಂಡಳಿಯವರು ಹಾಗೂ ಪ್ರಾಚಾರ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.