ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದೆಂದು ರೈತ ಮುಖಂಡರೊಂದಿಗೆ ಸಭೆ

ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದೆಂದು ರೈತ ಮುಖಂಡರೊಂದಿಗೆ ಸಭೆ  Meeting with farmer leaders to not grant electricity distribution license to Tata Power Company

ಲಕ್ಷ್ಮೇಶ್ವರ" 17 : ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಬೆಂಗಳೂರು ಕಚೇರಿಗೆ ಟಾಟಾ ಪವರ್ ಕಂಪನಿ ಲಿಮಿಟೆಡ್ ಸಂಸ್ಥೆಯ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿರುವ ಹಿನ್ನೆಲೆ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಹೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಹೆಸ್ಕಾಂ ವಿದ್ಯುತ್ ಸರಬರಾಜು ಗದಗ ವಿಭಾಗ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಕಲ್ಯಾಣಗಟ್ಟಿ ಅವರ ನೇತೃತ್ವದಲ್ಲಿ ರೈತ ಸಂಘಟನೆಯ ಮುಖಂಡರು ಸಾರ್ವಜನಿಕ ರೊಂದಿಗೆ ಸಭೆ ನಡೆಯಿತು ಸಭೆಯನ್ನು ಉದ್ದೇಶಿಸಿ ಹೆಸ್ಕಾಂ ಗದಗ ವಿಭಾಗ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಕಲ್ಯಾಣಗಟ್ಟಿ ಅವರು ಮಾತನಾಡಿ ಹೆಸ್ಕಾಂ ವಿದ್ಯುತ್ ಸಂಸ್ಥೆಯ ಅಸ್ತಿತ್ವ ರೈತರ ಹಾಗೂ ಸಾರ್ವಜನಿಕ ಗ್ರಾಹಕರ ಹಿತರಕ್ಷಣೆ ಹಾಗೂ ವಿದ್ಯುತ್ ವಲಯದ ನೌಕರರ ಭವಿಷ್ಯದ ಹಿತ ದೃಷ್ಟಿಯಿಂದ ಕರ್ನಾಟಕ ವಿದ್ಯುಚಕ್ತಿ ನಿಯಂತ್ರಣ ಆಯೋಗದ ಅಧಿಕಾರಿಗಳಿಗಳು ಯಾವುದೇ ಕಾರಣಕ್ಕೂ ಟಾಟಾ ಪವರ್ ಕಂಪನಿಗೆ ಹೆಸ್ಕಾಂ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಕೇವಲ ತಮ್ಮ ಲಾಭಕ್ಕಾಗಿ ಮಾತ್ರ ಖಾಸಗಿ ಸಂಸ್ಥೆ ಕಣ್ಣು ಹಾಕಿದ್ದು ಇದರಿಂದ ರೈತರಿಗೆ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಲಕ್ಷಣಗಳು ಇವೆ.

ಇದರಿಂದ ಯಾವುದೇ ಕಾರಣಕ್ಕೂ ಟಾಟಾ ಕಂಪನಿಯವರಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದರು ರೈತ ಸಂಘಟನೆಯ ಮುಖಂಡರಾದ ಟಾಕಪ್ಪ ಸಾತ್ಪತಿ ಬಸವರಾಜ್ ಟೂಕೂಳಿ ಸುರೇಶ್ ಸ್ವಾದಿ ದರ್ಗಾ ಕಮಿಟಿ ಅಧ್ಯಕ್ಷರಾದ ಸುಲೇಮಾನ್ ಸಾಬ ಕಣಿಕೆ ಚಂಬಣ್ಣ ಬಾಳಿಕಾಯಿ ಅಂಜುಮನ್ ಕಮಿಟಿ ಅಧ್ಯಕ್ಷರಾದ ಮುತ್ಯಾರ ಗದಗ ಲಕ್ಷ್ಮೇಶ್ವರ ಕೆಇಬಿಯ ಕಾರ್ಯನಿರ್ವಾಹಕ ಇಂಜಿನಿಯರ್‌ಅಂಜನೇಪ್ಪ ಬಿ ಅವರುಗಳು ಮಾತನಾಡಿ ಯಾವುದೇ ಕಾರಣಕ್ಕೂ ಟಾಟಾ ಕಂಪನಿಗೆ ಹೆಸ್ಕಾಂ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದು ತಮ್ಮ ಆಕ್ಷೇಪಣೆಯವನ್ನು ವ್ಯಕ್ತಪಡಿಸಿದರು  ಈ ಸಮಯದಲ್ಲಿ ಹೆಸ್ಕಾಂ ಇಲಾಖೆಯ ಕಿರಣಕುಮಾರ್ ಪಮ್ಮಾರ ರಘುಪತಿ ನಾಯಕ ಸಂತೋಷ ನಾಯಕ ಅಂಬರೀಶ ಹುಲಗೂರ ಬಸವರಾಜ ಬಿ ವಿಜಯಕುಮಾರ ಈಶನಗೌಡ ಮಂಜುನಾಥ ಸಂಗೋಳ್ಳಿ ಆಸಿಫ್ ಮಕಾಂದರ ಮಾಂತೇಶ್ ಇಟಗಿ ಚಂದ್ರಗೌಡ ಪಾಟೀಲ್ ಸೇರಿದಂತೆ ಅನೇಕ ರೈತ ಮುಖಂಡರು ಸಾರ್ವಜನಿಕರು ಹೆಸ್ಕಾಂ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.