ರೈತರ ಹೆಚ್ಚುವರಿ ಭೂ ಪರಿಹಾರದ ಕುರಿತು ಸಭೆ
Meeting on additional land compensation for farmers
ರಾಣೇಬೆನ್ನೂರು 18 : ಇಲ್ಲಿನ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ರೈತರ ಹೆಚ್ಚುವರಿ ಭೂ ಪರಿಹಾರದ ಕುರಿತು ಸಭೆ ನಡೆಯಿತು. ಹಾವೇರಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಪರಿಹಾರ ಕುರಿತು ಬಹು ಚರ್ಚೆ ನಡೆಯಿತು. ರೈತರು ಮತ್ತು ರೈತ ಸಂಘದವರು ಮಂಡಿಸಿದ ಪರಿಹಾರ ಬೇಡಿಕೆಗಳನ್ನು ಸೂಕ್ಷ್ಮವಾಗಿ ಆಲಿಸಿದ ಉಪವಿಭಾಗಾಧಿಕಾರಿಗಳು ಅತೀ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು , ಪರಿಹಾರ ಕುರಿತಂತೆ ಚರ್ಚಿಸಿ, ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ರೈತ ಮುಖಂಡರಾದ ಜಗದೀಶ್ ಕೆರೂಡಿ, ಚೆನ್ನಬಸಪ್ಪ ಗುಗ್ಗರಿ, ಸತೀಶ್ ಹೊಳಬಾಗಿಲು, ಇಕ್ಬಾಲ್ ಸಾಬ್ ರಾಣೇಬೆನ್ನೂರು, ಹನುಮಂತಪ್ಪ ಗೋಡೆಮ್ನನವರ್, ಹನುಮಂತಪ್ಪ ದೊಡ್ಮನಿ, ಗೋವಿಂದಪ್ಪ ಲಮಾಣಿ, ಜಯಪ್ಪ ಲಮಾಣಿ, ಹನುಮಂತ್ ದೊಡ್ಮನಿ, ಸಿದ್ದಪ್ಪ ಚಳಗೇರಿ, ಅಶೋಕ್ ಕೊಪ್ಪದ, ಸೇರಿದಂತೆ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 