ಬಿಆರ್‌ಟಿಎಸ್ ಸಮಸ್ಯೆ, ವಿವಿದ ಸಭಿವೃದ್ದಿ ಕಾರ್ಯಗಳ ಕುರಿತು ಸಭೆ
Meeting on BRTS issue, various development works
ಧಾರವಾಡ : ಅವಳಿ ನಗರ ಮಧ್ಯೆದ ಬಿಆರ್‌ಟಿಎಸ್ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಧಾರವಾಡ ಧ್ವನಿ ಪದಾಧಿಕಾರಿಗಳ ಜಿಲ್ಲಾ ಉಸ್ತುವಾರಿ ಸಚಿವರು ನಗರದ ಸಕ್ರೂ-್ಯಟ್ ಹೌಸ್ ನಲ್ಲಿ ಸೋಮವಾರ ವಿಸ್ಕೃತ ಚರ್ಚೆ ನಡೆಸಿದರು.
ಸಚಿವ ಸಂತೋಷ ಲಾಡ್ ಅವರು, ಪ್ರಮುಖವಾಗಿ ಆಯ್ದ ಕೆಲವು ಕಡೆ ಮಿಶ್ರವಾಹನ ಸಂಚಾರಕ್ಕೆ ಅನುಕೂಲ, ಪಾದಚಾರಿಗಳು ಮತ್ತು ಲಘು ವಾಹನಗಳು ದಾಟಲು ಮಾರ್ಗ ನಿರ್ಮಾಣ, ಬಿಆರ್‌ಟಿಎಸ್ ಜಂಕ್ಷನ್‌ಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ, ರಸ್ತೆಯಲ್ಲಿ ನೀರು ನಿಲುಗಡೆಯಿಂದ ಆಗುವ ಅಡಚಣಿ, ನವಲೂರ ಮತ್ತು ಉಣಕಲ್ಲ ಬಳಿಯ ಸೇತುವೆಗಳ ದುರಸ್ತಿ, ಹುಬ್ಬಳ್ಳಿ ರೇಲ್ವೆ ನಿಲ್ದಾಣದಿಂದ ಬೆಳಗ್ಗೆ ಬಸ್ ಸೌಲಭ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಚಿವರು ಚರ್ಚಿಸಿದರು.
ಈಗಿರುವ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಅನೂಕೂಲ ಒದಗಿಸಲು ಬೇಕಿರುವ ಮಾರ್ಗೋಪಾಯಗಳು, ಅವಶ್ಯವಿರುವ ಸೌಲಭ್ಯ, ಆರ್ಥಿಕ ನೆರವು ಮತ್ತು ಸರಕಾರದ ಹಂತದಲ್ಲಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಸೆ.6 ರಂದು ಖುದ್ದಾಗಿ ತಾವೇ ಹುಬ್ಬಳ್ಳಿಯಿಂದ ಧಾರವಾಡದವರೆಗಿನ ಬಿಆರ್‌ಟಿಎಸ್ ಮಾರ್ಗದಲ್ಲಿ ಸಂಚರಿಸಿ ಸಮಸ್ಯೆಗಳ ವಾಸ್ತವತೆಯನ್ನು ಪರೀಶೀಲಿಸುವುದಾಗಿ ಭರವಸೆ ನೀಿಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ., ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಮುಖಂಡರಾದ ದೀಪಕ ಚಿಂಚೋರೆ, ಗುರುರಾಜ ಹುಣಶಿಮರದ, ಪಾಲಿಕೆ ಸದಸ್ಯೆ ಡಾ.ಮಯೂರ ಮೋರೆ, ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ಮತ್ತು ಪದಾಧಿಕಾರಿಗಳು ಸಭೆಯಲ್ಲಿದ್ದರು.
ಮನವಿ: ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಮತ್ತು ಸರಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡುವ ಂತ ಆಗ್ರಹಿಸಿ ಧಾರವಾಡ ಧ್ವನಿ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಸತತ ಮಳೆಯಿಂದ ರೈತರ ಹೊಲದಲ್ಲಿನ ಮುಂಗಾರಿ ಹಂಗಾಮಿನ ಬೆಳೆಗಳು ನಾಶವಾಗಿವೆ. ಜಿಲ್ಲೆಯ ರೈತರ ಹೊಲದಲ್ಲಿನ ಬಹುತೇಕ ಬೆಳೆಗಳಲ್ಲಿ ಹೆಸರು, ಸೋಯಾಬಿನ್ ಮತ್ತು ಉದ್ದು ಪ್ರಮುಖವಾಗಿ ಹಾನಿಗೊಳಗಾಗಿವೆ. ಕಳೆದ ವಾರ ತಾವು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಿರುವ ಬೆಳೆ ಹಾನಿಯ ಸಮಗ್ರ ಮಾಹಿತಿ ಇದೆ ಎಂದು ಭಾವಿಸಿದ್ದೇವೆ.ಈ ಸಂಕಷ್ಟದ ನಡುವೆಯೂ ರೈತರ ಹೊಲದಲ್ಲಿನ ಅಲ್ಪಸ್ವಲ್ಪ ಬೆಳೆಗಳ ಕಟಾವು ನಡೆದಿದೆ. ಆದರೆ, ರೈತರಿಗೆ ನೀರೀಕ್ಷಿತ ಪ್ರಮಾಣದ ಇಳುವರಿ ಸಿಗದಂತಾಗಿದೆ.
ಆದ್ದರಿಂದ ತುರ್ತಾಗಿ ಹೆಸರು, ಸೋಯಾಬಿನ್ ಮತ್ತು ಉದ್ದು ಬೆಳೆಗಳನ್ನು ಖರೀಸಲು ಜಿಲ್ಲೆಯಾದ್ಯಂತ ಖರೀದಿ ಕೇಂದ್ರಗಳನ್ನು ತೆರೆಯಲು ಮುಂದಾಗಬೇಕು. ಜೊತೆಗೆ ಸರಕಾರದವತಿಯಿಂದ ಕೂಡಲೇ ಪರಿಹಾರ ಬಿಡುಗಡೆ ಮಾಡುವ ಮುಖಾಂತರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ವೆಂಕಟೇಶ ರಾಯ್ಕರ್, ಸಂತೋಷ ಪಟ್ಟಣಶೆಟ್ಟಿ, ಮಂಜುನಾಥ ಭೋವಿ, ಪುಂಡಲೀಕ ತಳವಾರ, ಸುರೇಖಾ ಪೂಜಾರ, ಬಸವರಾಜ ಪೊಮೋಜಿ, ರಾಜೇಶ ಮನಗುಂಡಿ, ಬಿ.ಎಂ.ಕೇದಾರನಾಥ, ಪುಂಡಲೀಕ ಹಡಪದ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 