ಜುಲೈ 20 ರಂದು ಹಾವೇರಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಭೆ
Meeting of the Federation of Private Educational Institutions in Haveri on July 20
ರಾಣೆಬೆನ್ನೂರು 19 : ಜಿಲ್ಲಾ ಕೇಂದ್ರ ಹಾವೇರಿಯ ಹುಕ್ಕೇರಿ ಮಠದ ಸಭಾಂಗಣದಲ್ಲಿ ಇತ್ತೀಚೆಗೆ ಹಾವೇರಿ ಜಿಲ್ಲಾ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಭೆಯು ನಡೆಯಿತು. ಅತ್ಯಂತ ಮಹತ್ವ ಪೂರ್ಣವಾಗಿ ನಡೆದ ಸಭೆಯಲ್ಲಿ ಇತ್ತೀಚೆಗೆ ಸರ್ಕಾರದ ಶಾಲಾ-ಕಾಲೇಜುಗಳಲ್ಲಿ 2016 ರಿಂದ 2020ರ ವರೆಗೆ ನಿವೃತ್ತಿ, ನಿಧನ, ರಾಜಿನಾಮೆ ಮತ್ತಿತರ ಕಾರಣಗಳಿಂದ ಖಾಲಿಯಾಗಿರುವ ಬೋಧಕರ ಹುದ್ದೆಗಳನ್ನು ನಿಯಮಾನುಸಾರ ತುಂಬಲು ಅನುಮತಿ ನೀಡಿರುವುದನ್ನು ಕೋ ಕೋಲಂಕುಶವಾಗಿ ಚರ್ಚಿಸಿ, ಶಿಕ್ಷಣ ಇಲಾಖೆಯಿಂದ ಹೇಗೆ ಅನುಮತಿ ಪಡೆಯಬೇಕೆಂದು ಸುಧೀರ್ಘವಾಗಿ ಚರ್ಚಿಸಿದ ಡಾ. ಆರ್.ಎಂ. ಕುಬೇರ್ಪ ನವರು ಈ ಬಗ್ಗೆ ಸರ್ಕಾರ ಆದೇಶಗಳನ್ನು ಜಾರಿಗೊಳಿಸುವ ಬಗ್ಗೆ ಖಾಸಗೀ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ವಿವರಣೆ ನೀಡಿದರು.
ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಖಾಸಗೀ ಶಿಕ್ಷಣ ಸಂಸ್ಥೆಗಳು, ಪ್ರೌಢ ಶಾಲೆಗಳ ಹುದ್ದೆಗಳನ್ನು ತುಂಬಲು ಆನ್ಲೈನ್ ನಲ್ಲಿ ನೇರವಾಗಿ ಆಯುಕ್ತರಿಗೆ ಮಾಹಿತಿ ಕಳಿಸಬೇಕಾಗಿರುವುದರಿಂದ ಸಂಬಂಧಪಟ್ಟ ಲಿಂಕ್ ಪಡೆದು, ಆನ್ಲೈನ್ ನಲ್ಲಿ ಹುದ್ದೆಗಳ ಮಾಹಿತಿ ಕಳುಹಿಸಲು ವಿನಂತಿ ಮಾಡಲಾಗಿದೆ, ಹೀಗೆ ಆಯುಕ್ತರಿಗೆ ಕಳುಹಿಸಿದ ಮಾಹಿತಿಯೊಂದಿಗೆ ಜಿಲ್ಲಾ ಆಡಳಿತ ಮಂಡಳಿ ಮುಖ್ಯಸ್ಥರು ಜುಲೈ 20, 2026 ರಂದು ಹಾವೇರಿ ನಗರದ ಹುಕ್ಕೇರಿ ಮಠದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭೆಯಲ್ಲಿ ತಪ್ಪದೇ ಹಾಜರಿರಬೇಕೆಂದು ಕೋರಲಾಗಿದೆ.
ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಎ.ಎಸ್. ಬಳ್ಳಾರಿ, ಕಾರ್ಯದರ್ಶಿ ಬಸವರಾಜ್ ಹಾದಿಮನಿ, ಡಾಕ್ಟರ್ ಆರ್. ಎನ್. ಕುಬೇರ್ಪ, ನ್ಯಾಯವಾದಿಗಳಾದ ತಿಪ್ಪಣ್ಣನವರ, ಅಕ್ಕಿಹೊಳಿ, ವಾಸು ಸಾವಕಾರ, ವೀರಭದ್ರಯ್ಯ, ಕಲ್ಲೇರ, ಮುಷ್ಟಿ, ಮಾಜಿ ಶಾಸಕ ಶಿವರಾಜ ಸಜ್ಜನ,, ಎಸ್. ಟಿ. ಮುಗದೂರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಸಿಬ್ಬಂದಿಯವರಿಗೆ ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸಲು ಆಗ್ರಹಿಸಿ ಸರ್ಕಾರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 