ರೈಲ್ವೆ ಮಾರ್ಗ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆ
Meeting of Railway Line Action Committee Office-Bearers
ತಾಳಿಕೋಟಿ 30 : ಆಲಮಟ್ಟಿಯಿಂದ ಯಾದಗಿರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಆರಂಭಿಸಲು ಅಸ್ತಿತ್ವದಲ್ಲಿ ಬಂದ ತಾಳಿಕೋಟಿ ರೈಲ್ವೆ ಮಾರ್ಗ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ಬುಧವಾರ ವಿಠಲ್ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ಖ್ಯಾತ ರೈಲ್ವೆ ಮಾರ್ಗ ಹೋರಾಟಗಾರರಾದ ಇಂಜಿನಿಯರ್ ಭೀಮಾಶಂಕರ್ ಪತ್ತಾರ ಅವರು ಭಾಗವಹಿಸಿ ಮುಂದಿನ ಹೋರಾಟದ ರೂಪರೇಷಗಳ ಕುರಿತು ಮಹತ್ವದ ವಿಷಯಗಳನ್ನು ತಿಳಿಸಿ ಮಾರ್ಗದರ್ಶನ ಮಾಡಿದರು. ಈಗಾಗಲೇ ಕೇಂದ್ರ ಸರ್ಕಾರದಿಂದ ಜುಲೈ 10ರಂದು ಅಂತಿಮ ಸ್ಥಳ ಸಮೀಕ್ಷೆ ಹಾಗೂ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದ್ದು ಈ ಕಾರ್ಯವು ಪ್ರಗತಿ ಹಂತದಲ್ಲಿದ್ದು ಇದನ್ನು ಆದಷ್ಟು ಬೇಗ ಮುಕ್ತಾಯಗೊಳಿಸುವಂತಾಗಲು ಮುಂದಿನ ಕಾರ್ಯತಂತ್ರದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಮಹತ್ವದ ಸಭೆಯಲ್ಲಿ ಭಾಗವಹಿಸಿ ತಮ್ಮ ಉಪಯುಕ್ತವಾದ ಸಲಹೆ ಸೂಚನೆಗಳನ್ನು ನೀಡಿದ ಖ್ಯಾತ ರೈಲ್ವೆ ಹೋರಾಟಗಾರರಾದ ಭೀಮಾಶಂಕರ ಪತ್ತಾರ ಇವರನ್ನು ಹೋರಾಟ ಸಮಿತಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆರಿ್ವ. ಜಾಲವಾದಿ, ಸಂಚಾಲಕ ಮಹಾಂತೇಶ ಮುರಾಳ, ಪದಾಧಿಕಾರಿಗಳಾದ ಶ್ರೀಕಾಂತ ಪತ್ತಾರ, ಪ್ರಕಾಶ ಹಜೇರಿ, ವಾಸುದೇವ ಹೆಬಸೂರ, ಬಸವರಾಜ ಕುಂಬಾರ, ಜಗದೀಶ ಬಿಳೇಭಾವಿ, ಅಶೋಕ ಚಿನಗುಡಿ, ವಜ್ರಕಾಂತ್ ಪ್ರಥಮಶೆಟ್ಟಿ, ಶ್ರೀನಿವಾಸ ಸೋನಾರ, ಸಿದ್ದು ಬೋಳಶಟ್ಟಿ, ರಾಜು ಸಜ್ಜನ, ರವಿಕಾಂತ ಚಂದುಕರ, ಅಣ್ಣಪ್ಪ ಹುಬ್ಬಳ್ಳಿ, ದತ್ತಾತ್ರೇಯ ಉಭಾಳೆ ಮತ್ತಿತರರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 