ಕೇಬಲ್ ನೆಟ್ವಕರ್್ ಜಿಲ್ಲಾ ಸಮಿತಿಯಲ್ಲಿ ಜಿಲ್ಲಾಧಿಕಾರಿ ಕಡಕ್ ಸೂಚನೆ;
ಮಾಧ್ಯಮ ಸ್ವಾತಂತ್ರ್ಯ ಮಾರಾಟಕ್ಕಲ್ಲ: ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್
ಕಾರವಾರ : ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮಾಧ್ಯಮ ಸ್ವಾತಂತ್ರ್ಯ ಮಾರಾಟವಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಹೇಳಿದರು.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕೇಬಲ್ಟೆಲಿವಿಷನ್ ನೆಟ್ವಕರ್್ ನಿರ್ವಹಣಾ ಸಮಿತಿ ಹಾಗೂ ದೂರು ಕೋಶದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾಧ್ಯಮಗಳು ತಮಗೆ ಸಿಕ್ಕಿರುವ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆದು ಸ್ವಾರ್ಥಕ್ಕಾಗಿ ಮಾರಾಟ ಮಾಡಿಕೊಳ್ಳಬಾರದು. ಸ್ವೇಚ್ಛಾಚಾರದ ಸ್ವಾತಂತ್ರ್ಯವನ್ನು ಕಾನೂನು ಸಹಿಸುವುದಿಲ್ಲ ಎಂದರು.
ಕೇಬಲ್ ಮತ್ತು ಟಿವಿ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಚೋನಾತ್ಮಕ ಸುದ್ದಿಗಳಿಂದ ಜನರನ್ನು ತಪ್ಪು ದರಿಗೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ. ಅದು ಸರಿಯಾದ ಕ್ರಮವಲ್ಲ ಎಂದ ಅವರು, ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಮಾಧ್ಯಮ ಪ್ರಸಾರ ಮಾಡಿದರೆ ಸಾರ್ವಜನಿಕರು ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ಗೆ ಅಥವಾ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿರುವ ಕೇಬಲ್ ಟಿಲಿವಿಷನ್ ನೆಟ್ವಕರ್್ ದೂರುಕೋಶಕ್ಕೆ ದೂರು ನೀಡಬಹುದಾಗಿದೆ ಎಂದರು.
ನಿಷ್ಪಕ್ಷವಾದ ವರದಿಗಾರಿಕೆಗೆ ಯಾರ ಅಭ್ಯಂತರವೂ ಇಲ್ಲ ಮತ್ತು ಕಾನೂನಿನ ಸಹಕಾರವಿರುತ್ತದೆ. ಆದರೆ ಬೆದರಿಕೆ ತಂತ್ರಗಳ ವರದಿಗಾರಿಕೆ ಅಥವಾ ಕೋಮು ಸೌಹಾರ್ಧವನ್ನು ಕದಡುವ ಪ್ರಯತ್ನಗಳಿಗೆ ಸಹಕಾರ ಸಿಗುವುದಿಲ್ಲ. ಅಂತಹ ಕಾರಣಗಳಿಗೆ ದೂರು ಬಂದರೆ ತಕ್ಷಣ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಇಂತಹ ವಿಷಯಗಳನ್ನು ಚಚರ್ಿಸಬೇಕಿದೆ. ಸಮಿತಿಯ ಸದಸ್ಯರು ತಮಗೆ ನೇರವಾಗಿ ಬರುವ ದೂರುಗಳು ಅಥವಾ ತಾವು ವಿವಿಧ ಕೇಬಲ್ ಟಿವಿಗಳಲ್ಲಿ ಬರುವ ಸುದ್ದಿ ಅಥವಾ ಕೇಬಲ್ ಆಪರೇಟರ್ಗಳಿಂದಾಗುವ ತೊಂದರೆಗಳಿಗೆ ಸಂಬಂಧಿಸಿದ ದೂರುಗಳನ್ನು ಸಭೆಯಲ್ಲಿ ಚಚರ್ಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಸಂಬಂಧ ಸಲಹೆಗಳನ್ನು ನೀಡಬೇಕು. ಜಿಲ್ಲಾ ಮಟ್ಟದ ಸಮಿತಿ ಕ್ರಮ ವಹಿಸಬಹುದಾದ ಪ್ರಕರಣಗಳಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಇಲ್ಲವೆ, ರಾಜ್ಯ ಮಟ್ಟದ ಸಮಿತಿಗೆ ಅಥವಾ ಕೇಂದ್ರ ವಾತರ್ಾ ಮತ್ತು ಪ್ರಸಾರ ಮಂತ್ರಾಲಯಕ್ಕೆ ದೂರಿನ ಬಗ್ಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕೇಬಲ್ ಟೆಲಿವಿಷನ್ ನೆಟ್ವಕರ್್ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಮತ್ತು ದೂರು ಕೋಶ, ಸಹಾಯಕ ನಿದರ್ೇಶಕರ ಕಚೇರಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಭವನ, ಕಾರವಾರ-508301 ದೂರವಾಣಿ 08382-226344 ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ ಸಹಾಯವಾಣಿ 1950, ವಾಟ್ಸ್ಆಪ್ ಸಂಖ್ಯೆ 9483511015 ಇಲ್ಲಿಗೆ ದೂರು ದಾಖಲಿಸಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಶಿರಸಿಯ ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ್ ರಾಮಶೆಟ್ಟಿ, ಕುಮಟಾ ಎ.ವಿ.ಬಾಳಿಗ ಕಾಲೇಜಿನ ಮನಶಾಸ್ತ್ರ ಉಪನ್ಯಾಸಕ ಪ್ರಮೋದ ನಾಯ್ಕ್, ಕಾರವಾರದ ಕರುಣಾ ಸಂಸ್ಥೆಯ ಅನು ಕಳಸ ಹಾಗೂ ಸಮಿತಿ ಸದಸ್ಯ ಕಾರ್ಯದಶರ್ಿ ವಾತರ್ಾ ಮತ್ತು ಸಾರ್ವಜಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಹಿಮಂತರಾಜು ಜಿ. ಉಪಸ್ಥಿತರಿದ್ದರು.