ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ವೈಭವವನ್ನು ಕಟ್ಟಿಕೊಡುವ ಸಮ್ಮೇಳನವು ಅರ್ಥಪೂರ್ಣವಾಗಿ ಜರುಗಲಿ : ವಿನಯಕುಮಾರ ದೇಸಾಯಿ
May the conference that builds the Kannada language, art, literature and cultural glory be held mean
ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ವೈಭವವನ್ನು ಕಟ್ಟಿಕೊಡುವ ಸಮ್ಮೇಳನವು ಅರ್ಥಪೂರ್ಣವಾಗಿ ಜರುಗಲಿ : ವಿನಯಕುಮಾರ ದೇಸಾಯಿ
ಯರಗಟ್ಟಿ 04: ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ವೈಭವವನ್ನು ಕಟ್ಟಿಕೊಡುವ ಸಮ್ಮೇಳನವು ಅರ್ಥಪೂರ್ಣವಾಗಿ ಜರುಗಲಿ ಎಂದು ತಾಪಂ ಮಾಜಿ ಅಧ್ಯಕ್ಷ ಶ್ರೀಮಂತ ವಿನಯಕುಮಾರ ದೇಸಾಯಿ ಹೇಳಿದರು. ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾ ಭವನದಲ್ಲಿ ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತತ್ತಿನ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕಾ ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಇತಿಹಾಸ ಪರಂಪರೆ ಹಾಗೂ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಾಗಲಿ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷರಾದ ಟಿ.ಎಂ.ಕಾಮಣ್ಣವರ ಅವರು ಸಮ್ಮೇಳನದ ಸಿದ್ಧತೆಯ ಕುರಿತು ಮಾಹಿತಿ ನೀಡಿ, ಸಮ್ಮೇಳನದ ಯಶಸ್ವಿ ಸಂಘಟನೆಗೆ ಪೂರಕವಾಗಿ ಬೇಕಾದ ವಿವಿಧ ಉಪ ಸಮಿತಿಗಳನ್ನು ರಚಿಸುವ ಮೂಲಕ ಪೂರ್ವ ತಯಾರಿ ನಡೆಸುವ ಕುರಿತು ಚರ್ಚಿಸಿ, ಸಮ್ಮೇಳನವನ್ನು ಯಶಸ್ವಿಯಾಗಿಸಲು ಯರಗಟ್ಟಿ ತಾಲೂಕಿನ ಹಾಗೂ ತಲ್ಲೂರು ಭಾಗದ ಜನತೆ ಈ ಸಮ್ಮೇಳನಕ್ಕೆ ಆಗಮಿಸಿ ಯಶಸ್ವಿ ಗೊಳಿಸುವಂತೆ ಕೋರಿದರು. ಪಿಕೆಪಿಎಸ್ ಅಧ್ಯಕ್ಷ ಮಾಹಾರುದ್ರ್ಪ ಉಪ್ಪಿನ, ಮುಖಂಡ ಶಂಕರಗೌಡ ಪಾಟೀಲ,ಈರಣ್ಣ ಹುದ್ದಾರ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಎಸ್.ಎಸ್.ಕುರುಬಗಟ್ಟಿಮಠ, ಆರ್.ಎಲ್.ಜೂಗನವರ, ಎನ್. ಕೆ ಹುಚ್ಚರೆಡ್ಡಿ, ಎಚ್. ಎಲ್. ವಜ್ರ ಮುಟ್ಟಿ, ದೇವೇಂದ್ರ ಕಮ್ಮಾರ, ಡಾ. ವಿಶ್ವನಾಥ ತಾವಂಶಿ, ರಾಜೇಂದ್ರ ವಾಲಿ, ಡಾ. ರಾಜಶೇಖರ ಬಿರಾದಾರ, ಡಾ. ಕುಮಾರ ದಾಸರ, ಕುಮಾರ ಜಕಾತಿ, ಪಿಡಿಒ ವಿಜಯಕುಮಾರ ಅಂಗಡಿ, ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ಎ.ವಿ.ಇಂಗಳೆ, ಯು.ಡಿ.ತಲ್ಲೂರ, ಮಹಾಂತೇಶ ಸರದಾರ, ಮಹಾಂತೇಶ ಉಪ್ಪಿನ, ರವಿಕುಮಾರ ಅಣ್ಣಿಗೇರಿ, ಆರ್.ಎಸ್.ಕಲ್ಲನ್ನವರ, ಬಸನಗೌಡ ಅಣ್ಣಿಗೇರಿ, ಬಾಸ್ಕರ ಹಿರೇಮೆತ್ರಿ, ಎಂ. ಎಂ. ವಿರಕ್ತಮಠ, ಕೆ. ಎಫ್. ನದಾಫ, ಶಿವಾನಂದ ಬಳಿಗಾರ ಹಾಗೂ ಶಿಕ್ಷಕರು, ಕನ್ನಡಪರ ಸಂಘಟನೆಗಳು ಮತ್ತಿತರಿದ್ದರು.04 ಯರಗಟ್ಟಿ 02ಪೋಟೊ ಶೀರ್ಷಿಕೆಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾ ಭವನದಲ್ಲಿ ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತತ್ತಿನ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕಾ ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಜರುಗಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 