ಲಡಾಯಿ ಕಟ್ಟೆ ಸ್ಮಾರಕವಾಗಿ ಸದಾ ಜೀವಂತಿಕೆ ಆಗಿರಲಿ
May the battle line remain alive as a memorial forever
ಕೊಪ್ಪಳ 17: ಲಡಾಯಿ ಕಟ್ಟೆ ಸ್ಮಾರಕವಾಗಿ ಸದಾ ಜೀವಂತಿಕೆ ಆಗಿರಲಿ ಶ್ರಿ ಪಿ.ಜಿ.ಆರ್. ತಿಳಿಯಲಾರದವರು ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ . ಸ್ವಾತಂತ್ರ್ಯಕ್ಕಾಗಿ ಹಾಗೂ ಹೈದ್ರಬಾದ ಕರ್ನಾಟಕ ವಿಮೋಚನೆ ಹೋರಾಟಕ್ಕಾಗಿ ಪ್ರಾಣ ಬಲಿದಾನ ಮಾಡಿದ ಮಹನೀಯರು ಸದಾ ಸ್ಮರಣೀಯರಾಗಿರ ಬೇಕು . ಆ ಕಾರಣಕ್ಕಾಗಿ ಮುಂಬಯಿ ಹಾಗೂ ಹೈದ್ರಾಬಾದ ಕರ್ನಾಟಕದ ಮಧ್ಯಭಾಗದಲ್ಲಿ ಲಡಾಯಿ ಪ್ರಾರಂಭವಾದಾಗ ಕೆಲವರು ಆ ಯುದ್ಧದಲ್ಲಿ ಮಡದಿದ್ದಾರೆ ಅವರ ಸ್ಮರಣಾರ್ಥ ಲಡಾಯಿ ಸ್ಮಾರಕಮಾಡಿ ಅದನನ್ನು ಜೀವಂತಿಕೆ ಇಡಬೇಕಾದ ಅವಶ್ಯಕತೆ ತುರ್ತಾಗಿ ಆಕಬೇಕಾಗಿದೆ ಎಂದು ಕರ್ನಾಟಕ ಸರಕಾರದ ಮಾಜಿ ಗ್ರಹ ಸಚಿವರುಹಾಗೂ ರಾಜ್ಯ ಸ್ಕೌಟ್ ಹಾಗೂ ಗೈಡ್ಸದ ರಾಜ್ಯಾಯುಕ್ತರಾದ ಪಿ.ಜಿ.ಆರ್. ಸಿಂಧ್ಯಾರವರು ಹೇಳಿದರು. ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣಾಭಿವ್ರದ್ಧಿ ಟ್ರಸ್ಟ ವತಿಯಿಂದ ತಾಲೂಕಿನ ಕರಮುಡಿ ಗ್ರಾಮದಲ್ಲಿ 78 ನೇ ಕಲ್ಯಾಣ ಕರ್ನಾಟಕ ವಿಮೋಚನಾ ಧ್ವಜಾರೋಹಣಗೈದು ಮಾತನಾಡಿದ ಅವರು ಲಡಾಯಿ ಸ್ಮಾರಕ ನಿರ್ಮಿಸಲು ಮುಖ್ಯಮಂತ್ರಿ ಹಾಗೂ ಸ್ಥಳೀಯ ಶಾಸಕರಾದ ಬಸವರಾಜ ರಾಯರಡ್ದಿ ರವರ ಸ್ವಾಮಿರಮಾನಂದ ತೀರ್ಥರವರ ನೇತ್ರತ್ವದಲ್ಲಿ ಈ ಭಾಗದಲ್ಲಿ ವಿಮೋಚನಾ ಹೋರಾಟ ತೀವ್ರಗತಿಯಲ್ಲಿ ನಡೆದಾಗ ಮೈಸೂರ ಪ್ರಾಂತ್ಯದಲ್ಲಿ ವೀಲೀನಗೊಳ್ಳಲು ಆಗಿನ ಗ್ರಹಸಚಿವರಾದ ಸರ್ದಾರ ವಲ್ಲಾಭಾಯಿ ಪಟೇಲ್ ರವರ ಇಚ್ಛಾಶಕ್ತಿನುಗುಣವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 13 ತಿಂಗಳು 2 ದಿನದ ನಂತರ ಈ ಭಾಗಕ್ಕೆ ಸ್ವಾತಂತ್ರ್ಯ ಸಿಗುತ್ತದೆ ಆ ಹಿನ್ನೆಲೆಯಲ್ಲಿ ಇಂದು ಈ ಭಾಗದವರು ಸಂಭ್ರಮಿಸುತ್ತಿದ್ದಾರೆ.ಅಳವಂಡಿ ಶಿವಮೂರ್ತಿಸ್ವಾಮಿಗಳು ? ರಾಮಚಂದ್ರ ವೀರ್ಪ ? ವಿಶ್ವನಾಥರೆಡ್ಡಿ ಮುದ್ನಾಳ ? ಮುರಡಿ ಭೀಮಜ್ಜ ?ಮಲ್ಲಿಕಾರ್ಜುನ ಖರ್ಗೆ ?ಭೀಮಣ್ಣ ಖಂಡ್ರೆ? ಬಾಪುಗೌಡ ದರ್ಶಾನಾಪುರ ? ಕೋಳೂರು ಮಲ್ಲಪ್ಪನಂತವರು ರಜಾಕಾರರ ಹಾವಳಿ ವಿರುದ್ಧ ಹೋರಾಟ ಮಾಡಿದ ರೊಮಾಂಚನಾ ಘಳಿಗೆಗಳನ್ನು ಸ್ಮರಿಸಿದರು ಅವರ ಹೆಜ್ಜೆಯಲ್ಲಿ ಯರಾಶಿ ಶಂಕ್ರ್ಪ ನಂತಹ ಸ್ವಾತಂತ್ರ್ಯಯೋಧರ ನುಡಿಗಳು ವೇದವ್ಯಾಕ್ಯವಾಗಿದ್ದವು . ಆ ಹಿನ್ನೆಲೆಯಲ್ಲಿ ಕರಮುಡಿ ಗ್ರಾಮದ ಶಂಕ್ರ್ಪ ವೀರ್ಪ ನಿಂಗೋಜಿ ಹಾಗೂ ವೀರ್ಪ ಮಲ್ಲಪ್ಪ ಮಾನಶೆಟ್ಟಿರವರು ಹಾಗೂ ಅನೇಕ ಸ್ಥಳೀಯರು ಸ್ವಾತಂತ್ರ್ಯ ಸಂಗ್ರಾಮ ಹಾಗೂ ಹೈದ್ರಾಬಾದ ವಿಮೋಚನಾ ಹೋರಾಟಕ್ಕಾಗಿ ತಮ್ಮ ಜೀವನವನ್ನೆ ಸವೆಸಿದ್ದಾರೆ ಎಂದು ಇತಿಹಾಸದ ಮೂಲದಿಂದ ತಿಳಿದು ಬರುತ್ತದೆ ಎಂದರು. ಹೈದ್ರಾಬಾದ ಸಂಸ್ಥಾನದ ನಿಜಾಮರು ಇತರೆ 560 ರಾಜರು ಒಪ್ಪಿದಂತೆ ಭಾರತೀಯ ಒಕ್ಕೂಟ ಸೇರಲು ಒಪ್ಪಬೇಕಾಗಿತ್ತು ಎಂದರು.ನಾವು ಭಾರತೀಯರು ಎನ್ನುವ ಅಭಿಮಾನ ಎಲ್ಲರಲ್ಲಿಯೂ ಒಡಮೂಡಬೇಕು.
ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಬೇಕೆ ವಿನಹ ಪ್ರಚೋದನೆಗೆ ಯಾರು ಅವಕಾಶವನ್ನು ಕೊಡಬಾರದು ಎಂದು ಸೂಚ್ಯವಾಗಿ ಹೇಳಿದರು.ರಜಾಕಾರರನ್ನು ಮುಸ್ಲಿಂಜನಾಂಗಕ್ಕೆ ತಳಕು ಹಾಕಬಾರದು ಯಾರೋ ಒಬ್ಬರು ತಪ್ಪು ಮಾಡಿದರೆ ಆ ಜನಾಂಗವನ್ನೆ ನಿಂದಿಸುವ ಕೆಲಸ ಅಕ್ಷಮ್ಯ ಅಪರಾಧ ಎಂದರು . ಕ.ಕ.ಭಾಗದ ಏಳು ಜಿಲ್ಲೆಗಳು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ , ರಾಜಕೀಯವಾಗಿ ಬಲಿಷ್ಠರಾಗಬೇಕಾಗಿದ ಆ ಶಕ್ತಿ ಸಾಮಥ್ರ್ಯಗಳು ಈ ಭಾಗದ ಜನರಲ್ಲಿವೆ ಎಂದರು. ರಾಜ್ಯದಲ್ಲಿ ಸುಮಾರು 8 ಲಕ್ಷ ಜನರು 150 ರಾಷ್ಟ್ರಾದ್ಯಾಂತ ಸ್ಕೌಟ್ ಹಾಗೂ ಗೈಡ್ಸನಲ್ಲಿ ಇದ್ದಾರೆ ಅಂತಹ ಸಂಸ್ಥೆಗೆ ರಾಜ್ಯ ಮುಖ್ಯ ಆಯುಕ್ತನಾಗಿರುವದು ನನ್ನ ಭಾಗ್ಯ ಎಂದರು . ಆಕಸ್ಮಿಕವಾಗಿ ಕೆಲವೊಂದು ಅವಕಾಶಗಳು ಎಲ್ಲರ ಜೀವನದಲ್ಲಿಯೂ ಬರುತ್ತವೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ಇಂತಹ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಿದ ನಿಂಗೋಜಿ ಶಿಕ್ಷಣ ಸಂಸ್ಥೆಗೆ ಮನಪೂರ್ವಕವಾಗಿ ಕ್ರತಜ್ಞತೆಯನ್ನು ಸಲ್ಲಿಸುತ್ತೆನೆ ಎಂದರು.ಜಿ.ಪಂ.ಮಾಜಿ ಸದಸ್ಯರು ಹಾಗೂ ಸ್ಕೌಟ್ ಹಾಗೂ ಗೈಡ್ಸದ ಜಿಲ್ಲಾಆಯುಕ್ತರಾದ ಎಚ್.ಎಂ.ಸಿದ್ರಾಮಸ್ವಾಮಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಎಲ್ಲಾ ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ನಿಂಗೋಜಿ ಕುಟುಂಬ ಆದರೀಣಿಯವಾಗಿದೆ ಎಂದರು.
ಶಿಕ್ಷಕ ಬಸವರಾಜ ಕೊಂಡಗುರಿ, ಸಂಪನ್ಮೂಲ ವ್ಯಕ್ತಿ ಭೀಮಪ್ಪ ಹವಳಿ ಮಾತನಾಡಿ ಐತಿಹಾಸಿಕ ಹಾಗೂ ಸಾಮಾಜಿಕವಾಗಿ ಕೆಲವೊಂದು ವಿಷಯಗಳು ಮರೆಮಾಚುವ ಪ್ರಸಂಗವಿದೆ . ಇತಿಹಾಸವನ್ನು ತಿಳಿದವ ಚರಿತ್ರೆಯನ್ನು ನಿರ್ಮಿಸಬಲ್ಲ ಎಂದರು.ಹಾಗೂ ಹೈ.ಕ.ವಿಮೋಚನೆಗೆ ಶ್ರಮಿಸಿದವರ ಇತಿಹಾಸವನ್ನು ತಿಳಿಸಿದರು. ಗ್ರಾ.ಪಂ.ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ದಿ ಅಧ್ಯಕ್ಷತೆ ವಹಿಸಿದ್ದರು.ಸ್ಕೌಟ್ ಹಾಗೂ ಗೈಡ್ಸದ ರಾಜ್ಯಸಂಘಟನಾ ಆಯುಕ್ತರಾದ ಸಿ.ಮಂಜುಳಾ . ಕಲ್ಯಾಣ ಕರ್ನಾಟಕದ ಉಸ್ತುವಾರಿಗಳಾದ ಮಲ್ಲೆಶ್ವರಿ,ಮಲ್ಲಿಕಾರ್ಜುನ ಚೌಕಿಮಠ , ನಿಂಗೋಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಶಿಕಾಂತ ನಿಂಗೋಜಿ,ಬಿ.ಎಸ್.ವೀರಾಪುರ ,ರಾಮಣ್ಣ ಪ್ರಭಣ್ಣವರ , ಕೆ.ಎಸ್.ಕುರಿ, ಸ.ಶರಣಪ್ಪ ಪಾಟೀಲ,ಬಸವವಾಜ ಕಿಳ್ಳಿಕ್ಯಾತರ ,ಶಿವಪುತ್ರ್ಪ ಮಲಿಗೋಡದ,ನಿಖಿಲ್ ಗೊಂಗಡಶೆಟ್ಟಿ, ಎಸ್.ವಿ.ಪೋ.ಪಾಟೀಲ,ಗೌಡಪ್ಪ ಬಲಕುಂದಿ ,ರಾಮಣ್ಣ ಮಾನಶೆಟ್ಟಿ .ಗಂಗಪ್ಪ ಹವಳಿ, ಪರಸಪ್ಪ ಲಮಾಣಿ , ರಾಮಣ್ಣ ಹೊಕ್ಕಳದ ,ಬಸವರಾಜ ಕುಕನೂರ, ಬಸಪ್ಪ ಗೌಡಪ್ಪನವರ, ಡಾ. ಪ್ರಕಾಶ ಡಾ.ರವಿ ನಿಂಗೋಜಿ, ವೀರೇಶ್ ಪತ್ತಾರ,ವೀರೇಶ್ ಹೊನ್ನೂರ ,ಷಣ್ಮುಖಪ್ಪ ಕೋರಿ ಇನ್ನು ಮುಂತಾದವರು ಉಪಸ್ತಿತರಿದ್ದರು. ಶ್ವೇತಾ ನವಲಗುಂದ ನಿರೂಪಿಸಿದರು, ನಜಮಾ ಬೇಗಂ ಸ್ವಾಗತಿಸಿದರು.ಫ್ರೋ. ಡಾ. ವೀರಣ್ಣ ಎ. ನಿಂಗೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು?ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 