ಮಾಕ್ಸರ್್ವಾದ ಇಂದಿಗೂ ಪ್ರಸ್ತುತ: ಡಾ. ಸಿದ್ಧನಗೌಡ ಪಾಟೀಲ


ಲೋಕದರ್ಶನ ವರದಿ

ಧಾರವಾಡ 30: ಮಾಕ್ಸರ್್ವಾದ ಪ್ರಸ್ತುತ ಬಹುತೇಕ ಸಮಸ್ಯೆಗಳಿಗೆ ಪರಿಹಾರವನ್ನ ಸೂಚಿಸಿ 150 ವರ್ಷಗಳಾದವು ಕಾಲರ್್ಮಾಕ್ಸರ್್ ಜನಿಸಿ 200 ವರ್ಷವಾದರೆ ಅವರ ಪ್ರಸಿದ್ದ ಕೃತಿ 'ಕ್ಯಾಪಿಟಲ್ ರಚನೆಯಾಗಿ 150 ವರ್ಷಗಳಾದವು.  ಪ್ರಸ್ತುತ ಸಂದರ್ಭದ ಜಾಗತಿಕ ಆಥರ್ಿಕ ಮುಗ್ಗಟ್ಟುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತಡೆಯಲು ಇಂದಿನ ಕಾರ್ಪೋರೇಟ್ ಕಂಪನಿಗಳ ತಜ್ಞರು ಸಹಿತ ಮಾಕ್ಸರ್್ ಚಿಂತನೆಗಳನ್ನು ಪುನರ್ ಅಧ್ಯಯನಮಾಡಬೇಕಾದ ಒತ್ತಡಕ್ಕೆ ಒಳಗಾಗಿದ್ದಾರೆ. ಬಂಡವಾಳ ಶಾಹಿ ಮತ್ತು ಸಾಮ್ರಜ್ಯಶಾಯಿಯ ಬೆಳವಣಿಗೆಗೆ ಇರುವ ತೊಂದರೆಗಳನ್ನು ಮತ್ತು ದುಡಿಯುವ ವರ್ಗ ಪ್ರಭುತ್ವವನ್ನು ಕೈವಶ ಮಾಡಿಕೊಳ್ಳುವ ಮಾರ್ಗಗಳನ್ನು ಮಾಕ್ಸರ್್ ಹೇಳಿದ್ದಾರೆ. ಭಾರತ ಮತ್ತು ವಿಶ್ವ ಜಾಗತಿಕರಣದ ನೀತಿಗಳು ಬಂದ ನಂತರ ಬೀಕರವಾದ ಸಂಮಸ್ಯೆಗಳನ್ನು ಎದುರಿಸುತ್ತಿದೆ. ಸಮಾಜವಾದಕ್ಕೆ ಬಂಡವಾಳವಾದ ಪರ್ಯಾಯವಲ್ಲ ಎಂಬುದು ಸಾಬಿತಾಗಿದೆ. ಸಮಾಜವಾದವೇ ಜನರ ಮೂಲಬೂತ ಸಮಸ್ಯೆಗಳ ಪರಿಹಾರಕ್ಕೆ ಇರುವ ಏಕೈಕ ಸಿದ್ದಾಂತ ಎಂದು ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ ಹೇಳಿದರು. ಕಾರ್ಲ ಮಾಕ್ಸರ್್ 200 ಮತ್ತು ದಾಸ್ ಕ್ಯಾಪಿಟಲ್ 150 ಎಂಬ ಘೋಷಣೆಯಡಿ  ನವಕನರ್ಾಟಕ ಹಾಗೂ ಕ್ರೀಯಾ ಪ್ರಕಾಶನಗಳಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಲ ಮಾಕ್ಸರ್್ರವರ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಭಾರತದ ಕುರಿತು ಕಾರ್ಲ ಮಾಕ್ಸರ್್, 'ರಾಜಕೀಯ ಅರ್ಥಶಾಸ್ತ್ರದ ವಿಮರ್ಶಗೆ ಕೊಡುಗೆ' ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಿದ ಹಿರಿಯ ಚಿಂತಕ ಡಾ. ಜಿ.  ರಾಮಕೃಷ್ಣ ಅವರು ಮಾಕ್ಸರ್್ ತಮ್ಮ ಮಹತ್ವದ ಕೃತಿಗಳಾದ ಪ್ರಣಾಳಿಕೆ ಮತ್ತು ಕ್ಯಾಪಿಟಲ್ ಕೃತಿಗಳನ್ನು ಪ್ರಕಟಿಸಿದ ದಿನದಿಂದಲೇ ಸಮಾಜವಾದಿ, ಮಾಕ್ಸರ್್ವಾದಿ ಚಿಂತನೆಗಳಮೇಲೆ ದಾಳಿ ನಡೆಸಿದ ಬಂಡವಾಳಗಾರರು ಹಾಗೂ ಅವರ ಪರ ಚಿಂತಕರು ಅಂದಿನಿಂದಲೇ ಮಾಕ್ಸರ್್ವಾದ ಸತ್ತಿದೆ ಎಂದು ಬಡಬಡಿಸುತ್ತಿದ್ದಾರೆ. ಒಂದು ಸಿದ್ದಾಂತವನ್ನು ಮೇಲಿಂದ ಮೇಲೆ ಸತ್ತಿದೆ ಎಂದು ಹೇಳುತ್ತಿರುವ ರೀತಿಯೇ ತೋರಿಸುತ್ತದೆ ಮಾಕ್ಸರ್್ವಾದ ನಿರಂತರವಾಗಿ ಜೀವಂತವಾಗಿದೆ ಎಂದು. ಅಭಿಪ್ರಾಯಗಳನ್ನು ಬಿನ್ನ ಅಭಿಪ್ರಾಯಗಳನ್ನು ಸದೆಬಡೆಯುತ್ತಿರುವ ಇಂದಿನ ಪ್ರಭುತ್ವಗಳಿಗೆ ದೊಡ್ಡ ಭಯವಿರುವುದು ಮಾಕ್ಸರ್್ವಾದಿ ಸಮಾಜವಾದಿ ಚಿಂತನೆಗಳಿಂದ. ಇಂದು ವಿಚಾರವಾದಿಗಳು ಪ್ರಗತಿಪರರು ಎಂದರೆ ಬಯಬೀಳುವ ಕೋಮುವಾದಿಗಳು ಬಿನ್ನ ಬಿನ್ನ ಅಭಿಪ್ರಾಯಗಳಿಂದಲೇ ಸಮಾಜ ವಿಕಾಸವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಇಂದು ಸಾಮಾಜಿಕವಾಗಿ ಬೆಳೆಯುತ್ತಿರವ ಅಸಹಿಷ್ಣತೆಯ ವಿರುದ್ದ ಕಿಡಿಕಾರಿದರು.

ಎರಡೂ ಅನುವಾದ ಕೃತಿಗಳ ಕುರಿತು ಡಾ. ಜಗದೀಶ ಕೊಪ್ಪ ಹಾಗೂ ಡಾ. ಸದಾಶಿವ ಮಜರ್ಿ ಮಾತನಾಡಿದರು. ಭಾರತದ ಐತಿಹಾಸಿಕ ವಾಸ್ತವಿಕ ವಿದ್ಯಮಾನಗಳನ್ನು ಸರಿಯಾಗಿ ಗ್ರಹಿಸಿದ್ದ ಮಾಕ್ಸರ್್ ತಮಗೆ ಲಬ್ಯವಿದ್ದ ಸಂಪನ್ಮೂಲಕವೇ ಭಾರತವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರು. ಭಾರತದ ಕುರಿತ ಅವರ ಚಿಂತನೆಗಳು ಇಂದಿಗು ಪ್ರಸ್ತುತವಾಗಿವೆ ಎಂದು ಡಾ. ಸದಾಶಿವ ಮಜರ್ಿ ಅಭಿಪ್ರಾಯ ಪಟ್ಟರು ರಾಜಕೀಯ ಅರ್ಥಶಾಸ್ತ್ರದ ಕುರಿತು ವಿಶ್ವದ ಆಥರ್ಿಕತೆಯ ವಿಭಿನ್ನ ಹಾಗೂ ಜನಪರ ಚಿಂತನೆಗಳಿಗೆ ಕಾರ್ಲ ಮಾಕ್ಸರ್್ ಹೊಸ ನೋಟವನ್ನು ಅಂದು ಕಟ್ಟಿಕೊಟ್ಟರು ಇಂದಿಗೂ ಅವರ ಚಿಂತನೆ ಹೆಚ್ಚು ಪ್ರಸ್ತುತವಾಗಿದೆ ಎಂದು ಡಾ. ಜಗದೀಶ ಕೊಪ್ಪ ಅಭಿಪ್ರಾಯ ಪಟ್ಟರು

ಇದೇ ಸಂದರ್ಭದಲ್ಲಿ ಮಾಕ್ಸರ್್ವಾದ ಮತ್ತು ಸಾಹಿತ್ಯ ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು ಡಾ. ಎಂ.ಜಿ. ಹೆಗಡೆ ಉಪನ್ಯಾಸ ಮಾಡಿದರು ಡಾ. ಅಶೋಕ ಶೆಟ್ಟರ ತಮ್ಮ ಚಿಂತನೆಗಳನ್ನು ಮಂಡಿಸಿದರು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಹಮತ್ ತರಿಕೇರೆ ಅಧ್ಯಕ್ಷತೆ ವಹಿಸಿದ್ದರು ಬಿ.ಎನ್. ಪೂಜಾರ ಹಾಗೂ ಶಂಕರ ಹಲಗತ್ತಿ ಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಆಲೂರು ವೆಂಕಟರಾವ ಸಭಾ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ. ಎಂ.ಡಿ. ವಕ್ಕುಂದ, ಡಾ. ರಾಜೇಂದ್ರ ಪೋದ್ದಾರ್, ಬಿ.ಎಸ್. ಸೊಪ್ಪಿನ, ಬಸವರಾಜ ಸೂಳಿಭಾವಿ, ಶಶಿದರ ತೋಡ್ಕರ್, ಶಿವಶಂಕರ ಹಿರೇಮಠ, ಬಿ.ಐ.ಈಳಿಗೇರ, ಪಿ.ವ್ಹಿ. ಹಿರೇಮಠ, ಅನಸೂಯಾ ಕಾಂಬಳೇ, ಬಿ. ಮಾರುತಿ, ಸನ್ಮತಿ ಅಂಗಡಿ, ವಸಂತರಾಜ, ಬಸವರಾಜ ಮ್ಯಾಗೇರಿ ಮುಂತಾದವರು ಭಾಗವಹಿಸಿದ್ದರು.