ಮೌಲಾನ ಅಜಾದ ಶಾಲೆ ಮಕ್ಕಳ ಗೋಳು ಕೇಳುವರಾರು ?ಸುಧಾಕರ ದೈವಜ್ಞ
ಶಿಗ್ಗಾವಿ 19 : ತಾಲೂಕಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನ ಅಜಾದ ಮಾದರಿ ಶಿಗ್ಗಾವಿ, ಬಂಕಾಪೂರ, ತಡಸ ಶಾಲೆಗಳಿಗೆ ಸರ್ಜರಿ ಯಾವಾಗ ಕಾಯ್ದನೋಡೋಣ ? ಪಟ್ಟಣದಲ್ಲಿರುವ ಅಲ್ಪಸಂಖ್ಯಾತ ಮಕ್ಕಳಿಗೆ ಎಂದು ನಿರ್ಮಿಸಲಾದ ಮೌಲಾನ ಅಜಾದ ಶಾಲೆಗಳಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳಿಗೆ ಪರಿಹಾರ ಕಂಡು ಕೊಳ್ಳುತ್ತಾರೆಯೇ ಶಾಸಕ ಯಾಶೀರಖಾನ ಪಠಾಣ ಕಾಯ್ದನೋಡ ಬೇಕಾಗಿದೆ.ಈ ಮೂರು ಶಾಲೆಗಳಲ್ಲಿ ಕಾಯಂ ನೌಕರರಿಲ್ಲ ಇಲ್ಲ ಶಿಗ್ಗಾವಿ ಶಾಲೆಯಲ್ಲು ಸಹಿತ ಸವಣೂರಿನ ಕಾಯಂ ನೌಕರ ವಾರಕ್ಕೊಮ್ಮೆ ಬರುತ್ತಾರೆ ಹೊರತು ಇಲ್ಲಿಯೂ ಸಹಿತ ಉಳಿದ ಎಲ್ಲ ನೌಕರರು ಗುತ್ತಿಗೆ ಆಧಾರದ ಸಿಬ್ಬಂದಿಗಳು ಆದರೆ ಇವರಿಗೆ ಹೆಚ್ಚಿನ ಜವಾಬ್ದಾರಿ ಇರುವುದಿಲ್ಲ ಆದ್ದರಿಂದ ಆದಷ್ಟು ಬೇಗ ಕಾಯಂ ನೌಕರ ಬಂದರೆ ಶೇ 80 ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಮೊದಲಿಗೆ ಈ ಶಾಲೆ ಉರ್ದು ಹೈಸ್ಕೂಲಿನ ಹತ್ತಿರ ಕಾರ್ಯನಿರ್ವಹಿಸುತ್ತಿರುವ ಕಾರಣ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಇಲ್ಲಿಯೇ ಮಾಡಲಾಗುತ್ತಿತ್ತು ಈಗ ಮೌಲಾನ ಅಜಾದ ಶಾಲೆ ಮಕ್ಕಳು ಊಟಕ್ಕೆ ಬರಬೇಕಾದರೆ 1 ಕಿಮೀ ನಡೆದುಕೊಂಡು ಬರಬೇಕು ಮತ್ತು 2 ಗಂಟೆ ಸಮಯ ವ್ಯರ್ಥ ಅಲ್ಲದೇ ಇಲ್ಲಿ ಹೆಣ್ಣು ಮಕ್ಕಳು ಊಟಕ್ಕೆ ಬರುವಾಗ ದಾರಿ ಹೋಕರು ಹಾಗೂ ಪಡ್ಡೆ ಹುಡುಗರು ಅವರನ್ನು ಪೀಡಿಸುತ್ತಿದ್ದಾರೆ ಇದಕ್ಕೆ ಪರಿಹಾರ ? ಮೌಲಾನ ಅಜಾದ ಶಾಲೆಯಲ್ಲಿ ಒಟ್ಟು 281 ರಲ್ಲಿ 110 ಬಾಲಕರು, 171 ಬಾಲಕೀಯರು ವ್ಯಾಸಂಗ ಮಾಡುತ್ತಿದ್ದು ಶೌಚಾಲಯ ಸ್ವಚ್ಚತೆ ತಿಂಗಳಿಗೊಮ್ಮೆ ಹಾಗಾದರೆ ವಿಧ್ಯಾರ್ಥಿಗಳ ಆರೋಗ್ಯ ಕಾಪಾಡುವರು ಯಾರು ಯಕ್ಷ ಪ್ರಶ್ನೆಯಾಗಿದೆ. ಶಾಲೆಯ ಅವಧಿ ಮುಗಿದ ನಂತರ ಶಾಲೆಯಲ್ಲಿ ಕಿಟಕಿ ಗ್ಲಾಸ ಒಡೆಯುವುದು, ಬೀಡಿ, ಸೀಗರೇಟ, ಮಧ್ಯಪಾನದಂತಹ ಅಹಿತಕರ ಘಟನೆಗಳು ನಡೆಯುತ್ತವೆ ಈಗಾಗಬಾರದು ಎಂದರೆ ಇದರ ಜವಾಬ್ದಾರಿ ಯಾರದು ಪರಿಹಾರ ಕಂಡುಕೊಳ್ಳಬೇಕಾಗಿದೆ. ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲು ಸರ್ಕಾರದ ಆದೇಶ ತೊಂದರೆಯಾಗಿದೆ ಅಂದರೆ ಈ ಶಾಲೆ ಅಲ್ಪಸಂಖ್ಯಾತ ಇಲಾಖೆಯಡಿಯಲ್ಲಿ ಬರುವ ಕಾರಣ ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಮಾಡಲು ಬರುವುದಿಲ್ಲ ಇದಕ್ಕೆ ಶಾಸಕರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬಹುದು ಏಕೆಂದರೆ ಈ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲು ಎಲ್ಲ ವ್ಯವಸ್ಥೆ ಇದೆ ಎನ್ನುತ್ತಾರೆ ಪಾಲಕರು. ಾಕ್ಸ ಸುದ್ದಿ : ಮೌಲಾನ ಅಜಾದ ಶಾಲೆಯು ಅಲ್ಪಸಂಖ್ಯಾತ ಇಲಾಖೆಗೆ ಒಳಪಡುತ್ತದೆ, ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಮಕ್ಕಳಾಗಿರುವ ಕಾರಣ ಮಕ್ಕಳ ಮೇಲ್ವಿಚಾರಣೆ ಮಾಡುತ್ತೇನೆ. ಎಂ.ಬಿ.ಅಂಬಿಗೇರಕ್ಷೇತ್ರ ಶಿಕ್ಷಣಾಧಿಕಾರಿ ಶಿಗ್ಗಾವಿ ಭಾಕ್ಸ ಸುದ್ದಿ : ಈ ಶಾಲೆ ವಸತಿ ಶಾಲೆಯಲ್ಲದ ಕಾರಣ ಹಾಗೂ ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಬರುವ ಕಾರಣ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕ ಆದೇಶ ಬಂದರೆ ಇಲ್ಲಿಯೇ ಊಟದ ವ್ಯವಸ್ಥೆ ಮಾಡಬಹುದು.ಮಂಜುನಾಥ ಸಾಳಂಕೆಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಶಿಗ್ಗಾವಿ. ಭಾಕ್ಸ ಸುದ್ದಿ : ಮೌಲಾನ ಅಜಾದ ಶಾಲೆ ಮಕ್ಕಳ ಪ್ರಕ್ರಿಯೆ ಸರಕಾರದ ಹಂತದಲ್ಲಿ ನಡೆದಿದೆ ಆದರೆ ಯಾವುದೇ ಆದೇಶ ಬಂದಿಲ್ಲ, ಡಿ.ಡಿ.ಓ ಕೋಡ್ ಬಂದಿಲ್ಲ ಬಂದ ನಂತರ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಅಲ್ಲದೇ ಶಿಗ್ಗಾವಿ ಮೌಲಾನ ಅಜಾದ ಶಾಲೆಗೆ 15 ದಿನಗಳ ಹಿಂದೆ ಬೇಟಿ ನೀಡಿ ಮಕ್ಕಳಿಗೆ ಊಟಕ್ಕೆ ತೊಂದರೆ ಆಗದಂತೆ ಶಿಕ್ಷಕರಿಗೆ ಜವಾಬ್ದಾರಿವಹಿಸಿ ಬಂದಿದ್ದೇನೆ.