ಬಸವ ಪಬ್ಲಿಕ್ ಶಾಲೆಯಲ್ಲಿ ಮಾತೃ ವಂದನೆ
Matru Vandana at Basava Public School
ಆಲಮೇಲ 24: ಇಂದಿನ ಆಧುನಿಕ ಯುದಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯದ ಶಿಕ್ಷಣ, ಸಂಸ್ಕಾರದ ಅವಶ್ಯಕತೆ ಇದೆ ಎಂದು ಹಿರೇಮಠ ಚಂದ್ರಶೇಖರ-ಶಿವಾಚಾರ್ಯರು ಹೇಳಿದರು.
ಶನಿವಾರ ಪಟ್ಟಣ ಗ್ರಾಮೀಣ ಅಭಿವೃದ್ಧಿ ವಿದ್ಯಾವರ್ಧಕ ಸಂಸ್ಥೆಯ ಬಸವ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾತೃ ವಂದನಾ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಬೆಳೆದಂತೆ ಅಕ್ಷರ ಜ್ಞಾನದ ಶಿಕ್ಷಣದ ವ್ಯಾಮೋಹದಿಂದ ನಮ್ಮ ಪುರಾತನ ಸಂಪ್ರದಾಯ ಸಂಸ್ಕಾರ ಮರೆಯಾಗುತ್ತಿದೆ. ವೃದಾಶ್ರಕ್ಕೆ ದೂಡವ ಪ್ರವೃತ್ತಿ ಹೊಗಲಾಡಿಸಲು ತಾಯಂದರು ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು. ಸಂಸ್ಥೆ ಅಧ್ಯಕ್ಷ ಶಿವುಕುಮಾರ ಗುಂದಗಿ, ರಾಂಪುರ ಆರೂಢಮಠದ ನಿತ್ಯಾನಂದ ಮಹಾಜರು, ನಾಗರತ್ನ ಮನಗೂಳಿ, ಡಾಽ ಶಾರಾದಾ ಪಾಟೀಲ ಮಾತನಾಡಿದರು.
ಶಾಲಾ ಮಕ್ಕಳಿಂದ ಅವರ ತಾಯಿಗೆ ಪಾದಪೂಜೆ ಮಾಡಿಸುವ ಮೂಲಕ ಮಾತೃ ವಂದನಾ ಕಾರ್ಯಕ್ರಮ ನಡೆಯಿತು. ಸಂಸ್ಥೆ ನಿರ್ದೇಶಕರಾದ ಸಿದ್ದು ಕೊಳಾರಿ, ಸಂಜೀವಕುಮಾರ ಗುಂದಗಿ, ಶಿಕ್ಷಣ ಸಂಯೋಜಕ ಎಂ.ಪಿ. ಬಿಸ್ಸೆ ಅತಿಥಿಗಳಾದ “ಬಾಬು ಉಪ್ಪಿನ, ಕೇದಾರ ಕತ್ತಿ, ಕೆ.ಡಿ. ಖಾನಗೌಡ, ಪಾಲಕ ಪ್ರತಿನಿಧಿಗಳಾದ ಧರೆಪ್ಪ ಮುದೋಡಗಿ, ಶಿವಾನಂದ ದುದ್ದಣಗಿ, ಸಂತೋಷ ಚಾವೂರ, ಅನಂತ ಮೋರಟಗಿ, ಶಾಲೆ ವ್ಯವಸ್ಥಾಪಕ ರಾಜಶೇಖರ ಬಿರಾದಾರ, ಮುಖ್ಯಶಿಕ್ಷಕ ದಯಾನಂದ ಕುಳೆಕುಮಟಗಿ, ಜಿ.ಕೆ. ಅಂಬೂರೆ ಸೇರಿದಂತೆ ಸಂಸ್ಥೆಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 