ಮಟ್ಕಾ ಜೂಜಾಟ: ಪೊಲೀಸರ ದಾಳಿ, ಇಬ್ಬರ ಬಂಧನ
Matka gambling: Police raid, two arrested
ಬೆಳಗಾವಿ 12: ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಕಲ್ಯಾಣ ಮಟ್ಕಾ ಓಸಿ ಎಂ ಜೂಜಾಟ ಆಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಅವರಿಂದ ಒಟ್ಟು ರೂ. 1,100 ನಗದು ಹಣ, ಮತ್ತು ಎರಡು ಕೀ ಪ್ಯಾಡ ಮೊಬೈಲ್‌ಗಳು ಅಕಿಃ 1,300 ರೂ ಹಾಗೂ ಮಟಕಾ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಬೆಳಗುಂದಿ ಕಲ್ಮೇಶ್ವರ ಗಲ್ಲಿ ನಿವಾಸಿ ಸುಭಾಷ ಗಾವಡು ಬಾಗಿಳಗೇಕರ(60) ಮಾರಿಹಾಳ ನೊಇವಾಸಿ ರಾಜೇಸಾಬ ಅಮೀನಸಾಬ ಕಿಲ್ಲೇದಾರ(58) ಬಂಧಿತ ಆರೋಪಿಗಳಾಗಿದ್ದಾರೆ.
ಬೆಳಗುಂದಿ ಗ್ರಾಮದ ಭೀಜಗರ್ಣಿ ರಸ್ತೆಯ ಬದಿಗೆ, ಕಾಜು ಭಾಗದ ಖುಲ್ಲಾ ಜಾಗೆಯಲ್ಲಿ ಮಟ್ಕಾ ಓಸಿ ಆಡುತ್ತಿದ್ದಾಗ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಎಲ್. ಎಸ್. ಜೋಡಟ್ಟಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ರೂ. 1,100 ನಗದು ಹಣ, ಮತ್ತು ಎರಡು ಕೀ ಪ್ಯಾಡ ಮೊಬೈಲ್‌ಗಳನ್ನು ಮತ್ತು ಹಾಗೂ ಮಟಕಾ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 