ಮಠಗಳು ಸಮಾಜ ಸಂಸ್ಕೃತಿಯ ಕೇಂದ್ರಗಳಾಗಿವೆ: ರುದ್ರ್ಪ ಲಮಾಣಿ
ಹಾವೇರಿ 26:ಸಮಾಜ ಸೇವೆಯಲ್ಲಿ ಮಠಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಮಠಗಳು ಜನಸ ಮುದಾಯದ ಕ್ಷೇಮವನ್ನು ನೋಡಿಕೊಂಡು ಬಂದಿವೆ, ಅವು ಸಮಾಜ ಸಂಸ್ಕೃತಿಯ ಕೇಂದ್ರಗಳಾಗಿ ಸೇವೆ ಸಲ್ಲಿಸಿವೆ ಎಂದು ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷ ರುದ್ರ್ಪ ಲಮಾಣಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಅಕ್ಕಿಮಠದಲ್ಲಿ ಲಿಂ.ಮುಪ್ಪಯ್ಯ ಶಿವಯೋಗಿಗಳ 58ನೇ ಹಾಗೂ ಲಿಂ.ಚನ್ನಬಸವ ಶಿವಯೋಗಿಗಳವರ 11ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಆರು ದಿನಗಳ ಶರಣ ಸಂಸ್ಕೃತಿ ಉತ್ಸವ ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಕಿ ಮಠದ ಪೂಜ್ಯರು ಏರಿ್ಡಸಿರುವ ಈ ಮಹೋತ್ಸವ ವೈವಿಧ್ಯತೆಯಿಂದ ಹಾಗೂ ಅರ್ಥಪೂರ್ಣವಾಗಿ ನಡೆ0ುಲಿದೆ. ಅವರ ಸಮಾಜಮುಖಿ ಸೇವೆ ಅನನ್ಯ ಎಂದು ಲಮಾಣಿ ತಿಳಿಸಿದರು.
ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಮಾತನಾಡಿ ಮಠಗಳು ಅಂತರಂಗ ಬಾಹ್ಯರಂಗದ ಕಣ್ಣುಗಳು. ಶರಣರ ಅನು ಶಾಸನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸಕಲ ಜೀವಾತ್ಮರಿಗೆ ಲೇಸ ಬಯಸುವ ಮಠಗಳು ದುಶ್ಚಟ, ದುರ್ವಸನಗಳ ಮುಕ್ತ ಹಾಗೂ ಮೌಢ್ಯಾಚರಣೆ ಮುಕ್ತ ಸಮಾಜ ನಿರ್ಮಾಣ ಮಾಡುತ್ತಿವೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ಶಿಕ್ಷಣ, ಸಂಸ್ಕೃತಿಗೆ ವೀರಶೈವ ಮಠಗಳು ಕೊಡುಗೆ ಅಪಾರ, ಜಾತಿ-ಧರ್ಮಗಳ ಸಮಾಜದ ಸಂಬಂಧಿ ಸಂಘರ್ಷದಲ್ಲಿ ಸಮಾಜ ನಲುಗುತ್ತಿದೆ. ಪೂಜ್ಯರ ಪರಿಸರ ಕಾಳಜಿ ಪ್ರಗತಿಪರ ಚಿಂತನೆಗಳು ಅನುಕರಣೆ0ು ಎಂದು ತಿಳಿಸಿ ಸ್ವರಚಿತ ಕಟ್ಟತೇವ ಕ್ರಾಂತಿ ಗೀತೆ ಹಾಡಿದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಜಾಗತೀಕರಣದ ದುಷ್ಪರಿಣಾಮಕ್ಕೆ ತತ್ತರಿಸಿದ ಸಮಾಜಕ್ಕೆ ಶರಣ ಸಂಸ್ಕೃತಿ ಕಾ0ುಕಲ್ಪವಾಗಬೇಕಿದೆ, ಮಠಗಳು ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ ಮತ್ತು ಸಂಸ್ಕೃತಿಕ ಕೇಂದ್ರಗಳಂತೆ ಕೆಲಸ ಮಾಡಬೇಕಿದೆ ಎಂದರು.
ಜಾನಪದ ವಿಶ್ವವಿದ್ಯಾಲಯದ ್ರಾ.ಚಂದ್ರ್ಪ ಸೊಬಟಿ ಮಾತನಾಡಿ ಜಾತ್ರೆ, ಉತ್ಸವಗಳ ಜನರಲ್ಲಿ ಜಾಗೃತಿ ಮೂಡಿಸುವಂತಾಗಬೇಕು ಎಂದರು.ಉಡುಪಿ0ು ಪ್ರಶಾಂತ್ ಪೂಜಾರ್ ಮಾತನಾಡಿ ನಮ್ಮ ಆಹಾರವೇ ಓಷಧಿ 0ಾದರೆ ಗೃಹಣಿಯರೇ ವೈದ್ಯರು. ಅತಿಯಾದ ಮೊಬೈಲ್ ಬಳಕೆಯಿಂದ ಬಂಜೆತನ ಹಾಗೂ ಆ0ುಸ್ಸು ಕ್ಷೀಣಿಸುವುದು ಎಂದು ಎಚ್ಚರಿಸಿದರು. ಹಿರಿಯ ನ್ಯಾಯವಾದಿ ನಾಗರಾಜ ಕುಡುಪಲಿ ಸಂಗೊಳ್ಳಿ ರಾಯಣ್ಣನ ನಟನೆಯನ್ನು ಪ್ರದರ್ಶಿಸಿಮಾತನಾಡಿದರು.
ಹತ್ತಿಮತ್ತೂರಿನ ನಿಜಗುಣ ಶಿವಯೋಗಿಗಳು, ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ,ಹನುಮನಹಳ್ಳಿ ಹಾಲಸ್ವಾಮೀಜಿ ಹಾಗೂ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಿಳಾ ಒಕ್ಕೂಟದ 756 ಮಹಿಳೆಯರನ್ನು ಗೌರವಿಸಿದ್ದು ವಿಶೇಷವಾಗಿತ್ತು.
ಎಲ್ಲಮ್ಮ ಶ್ಯಾವಿ,ಶಿವಬಸಪ್ಪ ಬಸೇಗೆಣ್ಣಿ, ನಾಗರಾಜ್ ಬಾರ್ಕಿ, ಮಲ್ಲಿಕಾರ್ಜುನ್ ಮಣ್ಣೂರು,ಮಂಜಯ್ಯ ಹಿರೇಮಠ, ಆಂಜನೇಯ ಈಳಗೇರ,ಹೇಮಂತ ಬಸೇಗೆಣ್ಣಿ ಉಪಸ್ಥಿತರಿದ್ದರು.ಆರಂಭದಲ್ಲಿ ಗ್ರಾಮದ ಸದ್ಭಾವನಾ ಧರ್ಮ ಜಾಗೃತಿ ಪಾದಯಾತ್ರೆಗೆ ಗುಡ್ಡದ ಮಲ್ಲಾಪುರದ ಮುಖಪ್ಪ ಶಿವಯೋಗಿಗಳ ಸಾನಿಧ್ಯದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು.
ಐಶ್ವರ್ಯ ನಿರ್ವಾಣಿಮಠ ಸ್ವಾಗತಿಸಿದೆರು.ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಪ್ರಸ್ತಾಪವಾಗಿ ಮಾತನಾಡಿದರು.ಉಪನ್ಯಾಸಕ ಗುಡ್ಡಪ್ಪ ಚಟ್ರಮ್ಮನವರ ನಿರೂಪಿಸಿದರು. ಸತೀಶ ಈಳಗೇರ ವಂದಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-1 ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.