80ನೇ ಸ್ವಾತಂತ್ರ್ಯೋತ್ಸವ: ಪತ್ರಕರ್ತರಿಗೆ ಸನ್ಮಾನ

80ನೇ ಸ್ವಾತಂತ್ರ್ಯೋತ್ಸವ: ಪತ್ರಕರ್ತರಿಗೆ ಸನ್ಮಾನ  80th Independence Day: Journalists Honoured


ರಾಣೆಬೆನ್ನೂರು, ಆ.17: ನಗರದ ನಗರಸಭೆ ಕ್ರೀಡಾಂಗಣದಲ್ಲಿ ಶನಿವಾರ ಭಾರತ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.  

ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಹಿರಿಯ ಪತ್ರಕರ್ತ ಹಾಗೂ ಬೆಳಗಾವಿ ಲೋಕದರ್ಶನ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ವರದಿಗಾರ ಕೆ.ಎಸ್‌. ನಾಗರಾಜ್ ಅವರು 42 ವರ್ಷಗಳಿಂದ ಸಲ್ಲಿಸುತ್ತಿರುವ ಸುದೀರ್ಘ ಸೇವೆಯನ್ನು ಗುರುತಿಸಿ ಸಾರ್ವಜನಿಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಹಾವೇರಿ ಮೂಡಣ ದಿನಪತ್ರಿಕೆಯ ಯುವ ವರದಿಗಾರ ವಿಶ್ವನಾಥ ಕುಂಬಳೂರು ಅವರನ್ನೂ ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ, ಡಿವೈಎಸ್ಪಿ ಜೆ. ಲೋಕೇಶ್, ತಹಸೀಲ್ದಾರ್ ಆರ್‌.ಎಚ್‌. ಭಗವಾನ್, ನಗರಸಭೆ ಪೌರಾಯುಕ್ತ ಫಕೀರ​‍್ಪ ಇಂಗಳಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.  

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೊಟಗಿ, ಮಾಜಿ ಅಧ್ಯಕ್ಷ ಪಿ.ಜೆ. ಮರಿಯಮ್ಮನವರ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸುಗೂರು, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಪ್ಪ ಕೆಂಚರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಹೇಶ್ ಕಂಬಳಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಮಂಜಪ್ಪ ಹಲವಾಗಲ, ತಾಲೂಕು ಸ.ನೌ. ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ವಿ.ಕೆ., ನಗರಸಭೆ ಗುತ್ತಿಗೆದಾರ ಮಧು ಕೋಳಿವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.