10 ಲಕ್ಷ ರೈತರೊಂದಿಗೆ ಬೃಹತ್ ಹೋರಾಟ - 1 ಲಕ್ಷ ಕೋಟಿ ರೈತರಿಗೆ ಮೀಸಲಿಡಲು ಆಗ್ರಹ

10 ಲಕ್ಷ ರೈತರೊಂದಿಗೆ ಬೃಹತ್ ಹೋರಾಟ - 1 ಲಕ್ಷ ಕೋಟಿ ರೈತರಿಗೆ ಮೀಸಲಿಡಲು ಆಗ್ರಹ Massive struggle with 10 lakh farmers - Demand to set aside 1 lakh crore for farmers

            ವಿಜಯಪುರ 06: ಡಿಸೆಂಬರ್ 8-19 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಚುನ್ನಪ್ಪಾ ಪೂಜೇರಿ, ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ಡಿಸೆಂಬರ್‌- 11, 12 ರಂದು ಇಡೀ ರಾಜ್ಯದ 31 ಜಿಲ್ಲೆ, ತಾಲೂಕ, ಹೋಬಳಿ ಹಾಗೂ ಗ್ರಾಮಗಳ ಮನೆ ಮನೆಯಿಂದ ಲಕ್ಷಾಂತರ ರೈತರು ಬೆಳಗಾವಿ ಚಲೋ ಎಂಬ ಬೃಹತ್ ಹೋರಾಟಕ್ಕೆ ಕರೆ ನೀಡಿದ್ದಾರೆ, 

ಈ ಹೋರಾಟದ ನಿಮಿತ್ಯವಾಗಿ ವಿಜಯಪುರ ಜಿಲ್ಲೆಯ 13 ತಾಲೂಕು ಅಧ್ಯಕ್ಷರುಗಳು ತಮ್ಮ ವ್ಯಾಪ್ತಿಯ ಎಲ್ಲಾ ಹೋಬಳಿ, ಹಾಗೂ ಗ್ರಾಮಗಳಿಗೆ ತೆರಳಿ ರೈತರನ್ನು ಜಾಗೃತಗೊಳಿಸಿ ರೈತರೆಲ್ಲರು ಜಾಗೃತವಾದರೆ ಮಾತ್ರ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ರೈತ ಉಳಿಯಲು ಸಾಧ್ಯ ಇದಕ್ಕೆ ಇತ್ತಿಚಿಗೆ ನಡೆದ ಗುರ್ಲಾಪುರ ಕಬ್ಬಿನ ಹೋರಾಟವೇ ಸಾಕ್ಷಿ ಎಂದು ಮನೆ ಮನೆಯಿಂದ ರೈತರೆಲ್ಲರೂ ಬೆಳಗಾವಿಗೆ ಬರುವಂತೆ ಕರೆ ನೀಡಿದರು 

ಈ ವೇಳೆ ಆಹೇರಿ, ಜಂಬಗಿ, ಅಂಕಲಗಿ, ಕವಲಗಿ, ಹೊನ್ನುಟಗಿ, ಕಗ್ಗೊಡ, ಬುರಣಾಪುರ, ಸೆರಿದಂತೆ ಹಲವಾರು ಗ್ರಾಮಗಳಿಗೆ ಬೇಟಿ ನೀಡಿ ಸಂಘದ ಪದಾಧಿಗಳಿಗೆ ಹಾಗೂ ರೈತರಿಗೆ, ರೈತ ಮಹಿಳೆಯರಿಗೆ, ರೈತ ಕಾರ್ಮಿಕರಿಗೆ ಬರುವಂತೆ ಕರೆ ಮನವಿ ಮಾಡಲಾಯಿತು.  

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ವಿಜಯಪುರ ಜಿಲ್ಲೆಯಲ್ಲಿ ಕೂಡಾ ರೈತರಿಗೆ ನೂರಾರು ಸಮಸ್ಯೆಗಳು ತಾಂಡವವಾಡುತ್ತಿವೆ, ಅದರಲ್ಲಿ ಮುಖ್ಯವಾಗಿ ಆಲಿಮಟ್ಟಿಯ ಜಲಾಶಯದ ಅಡಿಗಲು 1964 ರಲ್ಲಿ ಆಗಿ 60 ವರ್ಷಗಳೆ ಕಳೆದರು ಇಲ್ಲಿಯವರೆಗೆ ಆಗಿಲ್ಲ, ಇದಕ್ಕೆಲ್ಲ ನೇರ ಹೋಣೆಗಾರರು ನಾವೂ ಮತದಾನ ಮಾಡಿ ಕಳಿಸಿರುವ ನಮ್ಮ ಜನ ಪ್ರತಿನಿಧಿಗಳು, ಹಗಲಿನಲ್ಲಿ 12 ಘಂಟೆ ತ್ರಿಫೆಸ್ ಕರೆಂಟ್ ಮತ್ತು ರಾತ್ರಿ ಸಿಂಗಲ ಫೆಸ್ ಕರೆಂಟ ಕೊಡಬೇಕು, ವಿದ್ಯುತ್ ಖಾಸಗಿಕರಣ ಕೈಬೀಡಬೇಕು, 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 5000 ಪಿಂಚಣಿ ಕೊಡಬೇಕು, ರೈತರಿಗೆ ಸಂಬಂಧಿಸಿದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೇ ಇಲಾಖೆಗಳಲ್ಲಿ ಬಹುತೇಕ 70 ಪ್ರತಿಷತ್ ಹುದ್ದೆಗಳು ಖಾಲಿ ಇವೆ, ಅವುಗಳನ್ನು ಭರ್ತಿ ಮಾಡಬೇಕು,  

ರೈತರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಲ್ಲಿ ಮೊದಲಿನಂತೆ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು ಮತ್ತು ಹೊಸ ಹೊಸ ತಂತ್ರಜ್ಞಾನಗಳ ಮೂಲಕ ರೈತರ ಆದಾಯವನ್ನು ದ್ವೀಗುಣ ಮಾಡುವುದು, ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಬೆಳಗಾವಿಗೆ ಹೊರಟ್ಟಿದ್ದೆವ, ಅಂದಾಜು ವಿಜಯಪುರ ಜಿಲ್ಲಯಿಂದ 50000 ರೈತರೂ ಬರುವ ನೀರೀಕ್ಷೆ ಇದೆ, ತಾವೇಲ್ಲರೂ ಬನ್ನಿ ಎಂದು ಕರೆ ನೀಡಿದರು.  

ಜಿಲ್ಲಾ ಕಾರ್ಯಧ್ಯಕ್ಷರಾದ ಪ್ರಕಾಶ ತೇಲಿ ಅವರು ಮಾತನಾಡುತ್ತಾ ಎಲ್ಲಿಯವರೆಗೆ ರೈತರೆಲ್ಲರೂ ಜಾತಿ, ಮತ, ಪಕ್ಷ ಪಂಗಡ ಎನ್ನದೇ ಒಂದಾಗುವುದಿಲ್ಲವೋ ಅಲ್ಲಿಯವರೆಗೆ ರೈತರಿಗೆ ತಾಪತ್ರಯಗಳು ತ್ಪಿದಲ್ಲ ಎಂದರು, ಎಲ್ಲಾ ರೈತರು ಸಂಘಟಿತರಾಗಿ ಕೂಡಿ ಅನುಭವ ಹಂಚಿಕೊಂಡು, ತರಬೇತಿ, ಕಾರ್ಯಾಗಾರಗಳ ಮೂಲಕ ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬೇಕು, ಅದಕ್ಕಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ರೈತರ ಬೇಡಿಕೆಗಾಗಿ ನಾವೆಲ್ಲರೂ ಎನೆ ಕೆಲಸ ಕಾರ್ಯಗಳು ಇದ್ದರು ನೆಪ ಹೇಳದೆ ತಯಾರಿಗಿ ಎಂದರು  

ಈ ವೇಳೆ ವಿಜಯಪುರ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ ಮಾತನಾಡುತ್ತಾ ರೈತ ಸಂಘಟನೆಯಿಂದ ಇಡೀ ರಾಜ್ಯದಲ್ಲಿ ಹಲವಾರು ಹೋರಾಟಗಳನ್ನು ಮಾಡುತ್ತಾ ಯಶಸ್ವಿಯಾಗಿ ಗೆದ್ದಿದ್ದೆವೆ, ಅದರಲ್ಲಿ ಕಬ್ಬಿನ ಹೋರಾಟ, ದ್ರಾಕ್ಷಿ ವಿಮೆಹೋರಾಟ, ಹತ್ತಿ ಹೋರಾಟ, ವಿದ್ಯುತ್, ತೊಗರಿ ಮತ್ತು ಮೆಕ್ಕೆಜೋಳ ಸೇರಿದಂತೆ ಅನೇಕ ಸೌಳಿಯ ಹೋರಾಟಗಳನ್ನು ಮಾಡಿ ಯಶಸ್ವಿಯಾಗಿ ರೈತರಿಗೆ ನ್ಯಾಯ ಕೊಡಿಸಲಾಗಿದೆ ಎಂದರು.  

ಈ ವೇಳೆ ನಾಗಠಾಣ ಹೋಬಳಿ ಅಧ್ಯಕ್ಷರಾದ ರಾಮಸಿಂಗ ರಜಪೂತ, ಮುಖಂಡರಾದ ಗೋರಕನಾಥ ಗೆರಡೆ, ಶಂಕರಗೌಡ ಬಿರಾದಾರ, ಆತ್ಮಾನಂದ ಭೈರೊಡಗಿ, ಬಸಗೊಂಡಪ್ಪ ತೇಲಿ, ಸಂಗು ಕೋಣಸಿರಸಗಿ, ಬಸವರಾಜ ಮಸೂತಿ, ಬಸವರಾಜ ತೇಲಿ, ಸುಭಾಸ ಹಿಟ್ನಳ್ಳಿ, ಚನ್ನು ಜಮಖಂಡಿ, ರಾಜು ಪವಾರ, ಸತ್ತು ಜಾಧವ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.