ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ ವಿರೋಧಿಸಿ ದಿ, 27 ರಂದು ಬೃಹತ್ ಪ್ರತಿಭಟನೆ
Massive protest on 27th against unscientific reservation of Scheduled Castes
ಕೊಪ್ಪಳ 23: ಮಾದಿಗ ಸಂಘಟನೆ ಗಳ ಒಕ್ಕೂಟ ರಾಜ್ಯ ಸಮಿತಿ ವತಿಯಿಂದ ಪರಿಶಿಷ್ಟ ಜಾತಿಗಳ ಆ ವೈಜ್ಞಾನಿಕ ಒಳ ಮೀಸಲಾತಿ ವಿರೋಧಿಸಿ ದಿ, 27 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟದ ಸಮಿತಿಯ ರಾಜ್ಯ ಸಂಚಾಲಕ ಬಿ, ಹುಸೇನಪ್ಪ ಸ್ವಾಮಿ ಮಾದಿಗ ರವರು ತಿಳಿಸಿದರು, ಅವರು ಶನಿವಾರ ಇಲ್ಲಿನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು, ಮುಂದುವರಿದು ಮಾತನಾಡಿಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರೋಸ್ಟರ್ ಬಿಂದು ಮಾರಿ್ಡಸಲು, ಬಡ್ತಿ, ಮುಂಬಡ್ತಿ, ಎಸ್ಸಿ ಎಸ್ ಪಿ ಟಿಎಸ್ ಪಿ ಹಾಗೂ ಮೀಸಲಾತಿ ಇರುವ ಕಡೆ ಗಳೆಲ್ಲ ಒಳಮೀಸಲಾತಿ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಮಾದಿಗರು ಬಹುಸಂಖ್ಯಾತರಾಗಿರುವ 150 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು,
ಇದೆ ದಿ, 27-ರಂದು ಸಮಯ: ಬೆಳಿಗ್ಗೆ 10 ಗಂಟೆಗೆ ಸ್ಥಳ: ಫ್ರೀಡಂ ಪಾರ್ಕ, ಬೆಂಗಳೂರು ನಲ್ಲಿ ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳೊಂದಿಗೆ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಮಿತಿಯ ರಾಜ್ಯ ಸಂಚಾಲಕ ಬಿ ಹುಸೇನಪ್ಪ ಸ್ವಾಮಿ ಮಾದಿಗ ರವರು ತಿಳಿಸಿದರು,ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಹುಲಗಪ್ಪ ಹಿರೇಮನಿ ಬೇವೂರು , ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗುರ್ದಪ್ಪ ಭಂಗಿ , ಪದಾಧಿಕಾರಿಗಳಾದ ಪುಂಡಪ್ಪಾ ಹೊಸಮನಿ, ರಾಮಣ್ಣ ಗುಡಿ ಮುಕೇಶ್ ಕಟ್ಟಿಮನಿ, ಯಮನೂರ್ಪ ಗೋನಾಳ, ಪೂಜಪ್ಪ ಮಾದಿನಾಳ, ಕನಕಪ್ಪ ಗಂಗಾವತಿ, ಮಹೇಶ್ ಚೌಡಕಿ ಹುಲಿಗಿ, ಮಜರ್ಪ ಹೊಸಮನಿ, ಭೀಮೇಶ್ ಯಡಿಯಾಪುರ, ಪ್ರಭುರಾಜ್ ಕಡೆಮನಿ ಶರಣಪ್ಪ ಗುಂಡಪ್ಪ ಕನಕಗಿರಿ ಭೋಜಪ್ಪ ಚಿಕ್ಕ ಮ್ಯಾಗೇರಿ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಜಿಲ್ಲೆಯ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 