ಶಾಸಕ ಹಿಟ್ನಾಳ ಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಬೆಂಬಲಿಗರ ಬೃಹತ್ ಪ್ರತಿಭಟನೆ
Massive protest by supporters demanding that MLA Hitnal be given ministerial berth
ಕೊಪ್ಪಳ 08: ಜಿಲ್ಲಾ ಕೇಂದ್ರವಾದ ಕೊಪ್ಪಳ ಸ್ಥಳೀಯ ವಿಧಾನಸಭಾ ಕ್ಷೇತ್ರ ದಲ್ಲಿ ಸತತ ಮೂರನೇ ಬಾರಿಗೆ ಭಾರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿರುವ ಹಾಗೂ ಕೊಪ್ಪಳ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಫಣತೊಟ್ಟು ಶ್ರಮಿಸುತ್ತಿರುವ ಶಾಸಕ ಕೆ ರಾಘವೇಂದ್ರ ಹಿಟ್ನಾಳರವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಕೊಪ್ಪಳದಲ್ಲಿ ಸೋಮವಾರದಂದು ಬೃಹತ್ ಭಾರಿ ಪ್ರಮಾಣದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಹೈಕಮಾಡಗೆ ಒತ್ತಾಯಿಸಿದರು,
ನಗರದ ಬನ್ನಿಕಟ್ಟಿ ಹತ್ತಿರದಿಂದ ಪ್ರಮುಖ ಹೆದ್ದಾರಿಯಲ್ಲಿ ಭವ್ಯ ಮೆರವಣಿಗೆ ಮೂಲಕ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರ ಭಾವಚಿತ್ರವನ್ನು ಹಿಡಿದು ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಸೇರಿ ಮೆರವಣಿಗೆ ನಡೆಸಿ ಅಶೋಕ್ ಸರ್ಕಲ್ ವರೆಗೆ ಬಂದು ಅಲ್ಲಿ ಸರ್ಕಾರಕ್ಕೆ ಮನವಿ ಪತ್ರ ಅರ್ಿಸಿದರು,ಶಾಸಕ ಕೆ ರಾಘವೇಂದ್ರ. ಹಿಟ್ನಾಳ ರವರು ಹ್ಯಾಟ್ರಿಕ್ ಗೆಲುವು ಸಾಧಿಸಿರುವುದಲ್ಲದೆ ಇತಿಹಾಸದಲ್ಲಿಯೇ ಕೊಪ್ಪಳ ಕ್ಷೇತ್ರದವರು ಇನ್ನುವರಿಗೆ ಸಚಿವರಾಗಿಲ್ಲ ಈ ಬಾರಿ ಇವರಿಗೆ ಸಚಿವ ಸ್ಥಾನ ನೀಡಿ ಹೊಸ ಇತಿಹಾಸವನ್ನು ನಿರ್ಮಿಸುವಲ್ಲಿ ಕಾಂಗ್ರೆಸ್ ಹೈಕಮಾಡು ಶ್ರಮಿಸಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಮುಖಂಡರು ಮಾತನಾಡಿ ಒತ್ತಾಯಿಸಿದರು,
ಪ್ರತಿಭಟನೆಯಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ ಗಲಬಿ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಮುಖಂಡ ಕೃಷ್ಣ ಇಟ್ಟಂಗಿ ಅನೇಕರು ಮಾತನಾಡಿದರು, ನಗರ ಘಟಕ ಅಧ್ಯಕ್ಷ ಎಂ ಪಾಷ ಕಾಟನ್ , ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಮಾಜಿ ಅಧ್ಯಕ್ಷ ಶ್ರೀನಿವಾಸ್ ಗುಪ್ತ ,ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ್ ಹ್ಯಾಟಿ ,ಮುಖಂಡರಾದ ಕೆಎಂ ಸೈಯದ್, ಬಾಶು ಸಾಬ್ ಖತೀಬ್ , ಅಕ್ಬರ್ ಪಾಷಾ ಪಲ್ಟನ್, ಅಜಿಮುದ್ದೀನ್ ಅತ್ತಾರ್, ಮುತ್ತುರಾಜ್ ಕುಷ್ಟಗಿ ,ಮಹಿಳಾ ಮುಖಂಡರಾದ ಕಿಶೋರಿ ಬುದೂರ್, ಜ್ಯೋತಿ ಗೊಂಡಬಾಳ, ರೇಣುಕಾ ಅಲ್ಲದೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ ,ಎಂಡಿ ಜಹೀರ ಅಲಿ ,ಮುನೀರ್ ಸಿದ್ದಿಕಿ ಕೋತ್ವಾಲ್ , ಹುಸೇನ್ ಪೀರಾ ಮುಜಾವರ್, ಮಾನ್ವಿ ಪಾಷಾ, ಸೈಯದ್ ಎಜದಾನಿ ಪಾಷಾ ಖಾದ್ರಿ, ಸೇರಿದಂತೆ ಅನೇಕ ಜನ ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 