ಕಬ್ಬು ಬೆಳೆಗಾರರಿಂದ ಬೃಹತ್ ಪ್ರತಿಭಟನೆ
Massive protest by sugarcane growers
ಜಮಖಂಡಿ 07: ನಗರದ ಎ,ಜಿ,ದೇಸಾಯಿ ಸರ್ಕಲ್‌ನಲ್ಲಿ ರೈತ ಸಂಘಟನೆ, ಕಬ್ಬು ಬೆಳೆಗಾರರ ಸಂಘ, ಎಬಿವಿಪಿ, ಕರವೇ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಒಂದು ಟನ್ ಕಬ್ಬಿಗೆ 3500,ರೂಗಳ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆಯನ್ನು ನಡೆಸಿ. ತಹಶೀಲ್ದಾರ ಅನೀಲ ಬಡಿಗೇರ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲಿಸಿದರು.
ರೈತ ಮುಖಂಡ ಸುರೇಶ ಹಂಚನಾಳ ಮಾತನಾಡಿ, ರಾಜಕೀಯ ಮುಖಂಡರು ನಮ್ಮ ಜೊತೆ ಸೇರಿ ರಸ್ತೆಯಲ್ಲಿ ಹೋರಾಟ ಮಾಡಿದರು. ಇವಾಗ ರಾಜಕಾರಣಿಗಳಾಗಿ ದೊಡ್ದ ಸಕ್ಕರೆ ಕಾರ್ಖಾನೆಯ ಮಾಲಿಕರಾಗಿದ್ದಾರೆ. ಇಂತಹ ಶ್ರೀಮಂತ, ದುಷ್ಠರಿಗೆ ಮತವನ್ನು ಹಾಕುವಾಗ ಸರಿಯಾಗಿ ಯೋಚನೆ ಮಾಡಿ ಮತ ನೀಡಬೇಕು. ಕೃಷಿ ಈ ದೇಶದ ಬೆನ್ನಲಬು ಆದರೆ ರೈತನ್ನು ತುಳಿಯುವ ಕೆಲಸ ಸರಕಾರ ಮಾಡುತ್ತಿದೆ. ಕಾಲೇಜುಗಳಲ್ಲಿ ಡೋನೆಷನ್ ಹೆಚ್ಚಳ ಮಾಡುತ್ತಿದ್ದಾರೆ. ಎಲ್ಲ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ರೈತರ ಮಕ್ಕಳಿಗೆ ಶಿಕ್ಷಣ ಕಲಿಸಬೇಕಾದರೆ ಲಕ್ಷಾಂತರ ಡೋನೆಷನ್ ಕೇಳುತ್ತಾರೆ ಹೀಗಾಗಿ ರೈತರ ಮಕ್ಕಳಿಗೆ ವಂಚನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ರಸ್ತೆಗಳನ್ನು ಬಂದ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವ ಜೊತೆಗೆ ರೈತ ಬೇಡಿಕೆ ಈಡೇರಿಸುವರೆಗೆ ಬೆಂಬಲ ನೀಡಿ ಎಂದರು.
ವಿದ್ಯಾರ್ಥಿನಿ ಪ್ರೀಯಾಂಕ ಮಾತನಾಡಿ, ರಾಜ್ಯದಲ್ಲಿ ರೈತರಿಗೆ ದ್ರೋಹವಾಗುತ್ತಿದೆ. ಕಬ್ಬು ಬೆಳೆದ ಬೆಳೆಗೆ ಪರಿಹಾರ ಸಿಗದೆ. ಬೆಂಬಲ ಬೆಲೆ ನೀಡದ ಕಾರಣ ರೈತರ ಮಕ್ಕಳ ಮದುವೆ, ಮುಂಜೆಗೆ ಹಣ ತೊಂದರೆಯಿಂದ ಅನುಭವಿಸುವ ಪರಿಸ್ಥಿತಿ ಬಂದಿದೆ. ರೈತರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ಕರವೇ ಸಂಘಟನೆ ಪದಾಧಿಕಾರಿ ಕಾಂಬಳೆ ಮಾತನಾಡಿ, ರೈತರ ಬೆಳೆದ ಬೆಲೆಗೆ ಸರಿಯಾದ ರೀತಿಯಲ್ಲಿ 3500 ರೂ, ಗಳನ್ನು ನೀಡಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮತ ಕೇಳಲು ಬಂದ ರಾಜಕಾರಣಿಗಳಿಗೆ ಬಾರುಕೋಳಿನಿಂದ ಚಾಟಿ ಎಟ್ಟು ಬೀಸಬೇಕು ಎಂದರು.
ರೈತ ಮುಖಂಡ ರಾಜು ನಧಾಪ ಮಾತನಾಡಿ, ಒಂದು ಟನ್ ಕಬ್ಬಿಗೆ 3500 ರೂ,ಗಳ ಬೆಂಬಲ ಬೆಲೆಯನ್ನು ನೀಡಬೇಕೆಂದು ರಾಜ್ಯಾದಾಂತ್ಯ ಹೋರಾಟ ನಡೆಯುತ್ತಿದೆ. ಕಾರ್ಖಾನೆ ಮಾಲಿಕರು ಬೆಂಬಲ ಬೆಲೆ ನೀಡಲು ನಿರಾಕರಿಸುತ್ತಿದ್ದಾರೆ. ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಿ. ರಾಜ್ಯದ ಜನತೆಗೆ ಸಿಎಂ, ಅವರು ಅನ್ನರಾಮಯ್ಯ ಆಗಿದ್ದಾರೆ. ಇವಾಗ ರೈತರಾಮಯ್ಯ ಎಂದು ಹೆಸರು ತೆಗೆದುಕೊಳ್ಳಬೇಕು. ರಾಜ್ಯದಲ್ಲಿ 5 ಕೋಟಿ ಹಂಗಾಮು ಕಬ್ಬು ನುರಿಸಿದ್ದಾರೆ. ಇವಾಗ 2 ಕೋಟಿ ಕಬ್ಬು ನುರಿಸುತ್ತಿದ್ದಾರೆ. ಪಂಚಗ್ಯಾರಂಟಿ ಯೋಜನೆ ಮಾಡಿ ಸಾಕಷ್ಟು ಹಣವನ್ನು ಬಳಸಿ ಖಜಾನೆ ಖಾಲಿ ಮಾಡುತ್ತಿರಿ. ಅದೇ ರೀತಿಯಾಗಿ ಕಬ್ಬು ಬೆಳಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದರು.
ವಿದ್ಯಾರ್ಥಿ ಪರುಶರಾಮ ಈಟಿ, ಪ್ರದೀಪ ಮೆಟ್ಟಗುಡ, ಅಜೇಯ ಕುಲಕರ್ಣಿ ಮಾತನಾಡಿದರು.
ಎ,ಜಿ, ದೇಸಾಯಿ ಸರ್ಕಲ್‌ನಲ್ಲಿ ನೂರಾರು ಎಬಿವಿಪಿ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಹಾಗೂ ರೈತರು, ಅಟೋ ಚಾಲಕರ ಸಂಘ, ಕರವೇ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 