ಅತಿಥಿ ಉಪನ್ಯಾಸಕರಿಂದ ಇಂದು ಬೆಳಗಾವಿಯಲ್ಲಿ ಬೃಹತ್ ಹೋರಾಟ

ಅತಿಥಿ ಉಪನ್ಯಾಸಕರಿಂದ  ಇಂದು ಬೆಳಗಾವಿಯಲ್ಲಿ ಬೃಹತ್  ಹೋರಾಟ Massive protest by guest lecturers in Belgaum today

 ಗದಗ 12:ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮತ್ತು ಉನ್ನತ ಶಿಕ್ಷಣ ಇಲಾಖೆ ಧ್ವಂದ್ವ ನಿಲುವು ಖಂಡಿಸಿ  ಡಿ.12 ರಂದು ಬೆಳಗಾವಿಯ ಸುವರ್ಣ ಸೌಧದ ಎದುರಿಗೆ ಟೆಂಟ್ ನಂ.2 ರಲ್ಲಿ ಮುಂಜಾನೆ 10 ಘಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅತಿಥಿ ಉಪನ್ಯಾಸಕರ ರಾಜ್ಯಾಧ್ಯಕ್ಷ  ಡಾ.ಹನಮಂತಗೌಡ ಆರ್ ಕಲ್ಮನಿ ಹೇಳಿದರು.      ಈಗಾಗಲೇ ಕಾನೂನಿನ ನೆಪ ಒಡ್ಡಿ 6000ಸಾವಿರಕ್ಕು ಹೆಚ್ಚು ಅತಿಥಿ ಉಪನ್ಯಾಸಕರನ್ನು ಬೀದಿಗೆ ಹಾಕಿದೆ ಸರಕಾರ ಎಚ್ಚೆತ್ತುಕೊಂಡು ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ ನಾನ್ ಯು.ಜಿ.ಸಿ. ಉಪನ್ಯಾಸಕರನ್ನು ಸರ್ಕಾರ ಕೈ ಬಿಟ್ಟಿದ್ದು ದುರ್ದೈವದ ಸಂಗತಿ. ತಕ್ಷಣ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಅಥವಾ ಕಾನೂನು ತಿದ್ದುಪಡಿ ಮಾಡಿ ವಿಶೇಷವಾಗಿ ನಾನ್ ಯು.ಜಿ.ಸಿ ಅತಿಥಿ ಉಪನ್ಯಾಸಕರನ್ನು ಮತ್ತು ಯು.ಜಿ.ಸಿ ಮತ್ತು ನಾನ್ ಯು.ಜಿ.ಸಿ ಹೊರಗುಳಿದಂಥವರಿಗೂ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ  ಎಲ್ಲ ಜಿಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಅಪಾರ ಪ್ರಮಾಣದ ಅತಿಥಿ ಉಪನ್ಯಾಸಕರು, ಉಪನ್ಯಾಸಕಿಯರು ಕುಟುಂಬದ ಸಮೇತ ಹೋರಾಟದಲ್ಲಿ ಪಾಲಗೊಳ್ಳಲಿದ್ದಾರೆ ಎಂದು  ರಾಜ್ಯ ಅತಿಥಿ ಉಪನ್ಯಾಸಕರ ರಾಜ್ಯಾಧ್ಯಕ್ಷ  ಡಾ.ಹನಮಂತಗೌಡ ಆರ್ ಕಲ್ಮನಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.