ಯತ್ನಾಳ ಉಚ್ಚಾಟನೆ ವಿರೋಧಿಸಿ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ
ತಾಳಿಕೋಟಿ, 02; ಹಿಂದುಗಳ ರಕ್ಷಣೆ ಹಾಗೂ ಬೆಳವಣಿಗೆಗಾಗಿ ಸದಾ ಧ್ವನಿಯತ್ತುವ ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಯಡಿಯೂರ್ಪ ಹಾಗೂ ವಿಜಯೇಂದ್ರ ಬಹುದೊಡ್ಡ ತಪ್ಪು ಹೆಜ್ಜೆಯನ್ನಿಟ್ಟಿದ್ದಾರೆ, ಯತ್ನಾಳರ ಉಚ್ಚಾಟನೆ ಅಖಂಡ ಹಿಂದೂ ಸಮಾಜದ ಉಚ್ಛಾಟನೆಗೆ ಸಮವಾಗಿದೆ ಇದನ್ನು ಪಕ್ಷದ ವರಿಷ್ಠರು ಮರುಪರೀಶೀಲಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ಹಿಂದೂ ಸಮಾಜದ ವತಿಯಿಂದ ಕರೆದ ಈ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ನಾವು ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅಭಿಮಾನಿಗಳು ಎಂಬುದಕ್ಕೆ ನಮಗೆ ಗರ್ವವಿದ್ದರೆ, ಇದಕ್ಕಿಂತಲೂ ಹೆಚ್ಚು ನಮಗೆ ನಾವು ಯತ್ನಾಳರ ಅಭಿಮಾನಿಗಳೆಂಬುದಕ್ಕೆ ಗರ್ವವಿದೆ. ನಮ್ಮ ನಾಯಕ ಯತ್ನಾಳರು ಪಕ್ಷದ ವಿರುದ್ಧ ಎಂದು ಮಾತನಾಡಿಲ್ಲ ಆದರೆ ಪಕ್ಷವನ್ನು ಹಿಂದುತ್ವದಿಂದ ದೂರುಸರಿಸುತ್ತಿರುವವರ ವಿರುದ್ಧ ಮಾತನಾಡಿದ್ದಾರೆ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಹೇಳುವ ಪಕ್ಷದ ವರಿಷ್ಠರಿಗೆ ರಾಜ್ಯದಲ್ಲಿರುವ ಅಪ್ಪ ಮಕ್ಕಳ ಪಕ್ಷ ಕಾಣುವದಿಲ್ಲವೆ ಎಂದು ಹೇಳಿದ ಅವರು ಉಳಿದ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ರಾಷ್ಟ್ರಾಧ್ಯಕ್ಷರು ಕರ್ನಾಟಕದಲ್ಲೇಕೆ ಮೌನ ವಹಿಸುತ್ತಾರೆ,ಇದು ರಾಜ್ಯದಲ್ಲಿರುವ ಸಾವಿರಾರು ಹಿಂದೂ ಕಾರ್ಯಕರ್ತರ ಪ್ರಶ್ನೆಯಾಗಿದೆ, ನಾವೆಲ್ಲರೂ ಬಿಜೆಪಿ ಜೊತೆ ಹಿಂದೂತ್ವದ ಜೊತೆ ಇದ್ದೇವೆ ಆದರೆ ನಾವು ಕುಟುಂಬ ರಾಜಕಾರಣದ ವಿರುದ್ಧ ಇದ್ದೇವೆ. ಜಿಲ್ಲೆಯಲ್ಲಿರುವ ಕೆಲವು ಮಾಜಿ ಶಾಸಕರು ಯತ್ನಾಳರ ಕುರಿತು ಟೀಕಿಸುತ್ತಿದ್ದಾರೆ ಆದರೆ ಅವರಿಗೆ ಅವರ ಕುರಿತು ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದ ಅವರು ಈ ನಿರ್ಧಾರದ ಕುರಿತು ಪಕ್ಷದ ವರಿಷ್ಠರು ಮರು ಪರೀಶೀಲನೆ ಮಾಡಬೇಕು ಇಲ್ಲದೆ ಹೋದರೆ ರಾಜ್ಯದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆ ಆಗಲಿದೆ ಎಂದರು.
ನಾಗರಾಳ ಹುಲಿ ಬಸನಗೌಡ ಪಾಟೀಲ,ಜಿಪಂ ಮಾಜಿ ಉಪಾಅಧ್ಯಕ್ಷ ಪ್ರಭುಗೌಡ ದೇಸಾಯಿ, ಅಶ್ವಿನಿ ಬಿರಾದಾರ, ಕಾಶಿನಾಥ ಮುರಾಳ ಮಾತನಾಡಿ ಯತ್ನಾಳರ ಉಚ್ಚಾಟನೆಯನ್ನು ಬಲವಾಗಿ ಖಂಡಿಸಿ ಅವರನ್ನು ಪಕ್ಷಕ್ಕೆ ಮರುಸೇರೆ್ಡ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು. ತಾಳಿಕೋಟಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಯತ್ನಾಳ ಅಭಿಮಾನಿಗಳು ಪಟ್ಟಣದ ರಾಜವಾಡೆಯಲ್ಲಿರುವ ಕಿತ್ತೂರು ಚೆನ್ನಮ್ಮಳ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಅಲ್ಲಿಂದ ಕತ್ರಿ ಬಜಾರ್, ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ಬಸ್ ನಿಲ್ದಾಣ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತದವರೆಗೆ ಬಸನಗೌಡ ಪಾಟೀಲ ಯತ್ನಾಳ ಅವರ ಭಾವಚಿತ್ರ ಕೈಯಲ್ಲಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರಾದ ಸುರೇಶ ಹಜೇರಿ, ಮಡುಸಾಹುಕಾರ ಬಿರಾದಾರ, ಎಂ.ಎಂ.ಪಾಟೀಲ, ಮಹಾಂತೇಶ ಮುರಾಳ, ಪ್ರಕಾಶ ಪಾಟೀಲ ಸಾಸಾಬಾಳ, ಮಂಜು ಶೆಟ್ಟಿ, ಪ್ರಕಾಶ ಹಜೇರಿ, ಅಣ್ಣಪ್ಪ ಜಗತಾಪ, ರಾಮನಗೌಡ ಬಾಗೇವಾಡಿ, ರತನ ಸಿಂಗ ಕೊಕಟನೂರ, ನಿಂಗು ಕುಂಟೋಜಿ, ಹಣಮಂತರಾಯ ಢವಳಗಿ, ರುದ್ರಗೌಡ ಪಾಟೀಲ, ವೀರೇಶ ಬಾಗೇವಾಡಿ, ಶರಣಗೌಡ ಪಾಟೀಲ, ಗುರ್ಪಗೌಡ ಪಾಟೀಲ ಮಿಣಜಿಗಿ, ರಾಮು ಜಗತಾಪ, ತಾಳಿಕೋಟಿ ತಾಲೂಕಿನ ಮೈಲೇಶ್ವರ, ಮಸ್ಕನಾಳ, ಮಿಣಜಗಿ, ಬೊಮ್ಮನಹಳ್ಳಿ, ಫತ್ತೆಪೂರ, ತಮ್ಮದಡ್ಡಿ, ಹಿರೂರು, ಬಳಗಾನೂರ ಹಾಗೂ ಕೊಣ್ಣೂರ ಗ್ರಾಮಗಳ ಹಿಂದೂ ಕಾರ್ಯಕರ್ತರು ಇದ್ದರು.