ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮಾಜದಿಂದ ಬೃಹತ್ ಪ್ರತಿಭಟನೆ

ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮಾಜದಿಂದ ಬೃಹತ್ ಪ್ರತಿಭಟನೆ Massive protest by Banjara community against internal reservation classification

ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮಾಜದಿಂದ ಬೃಹತ್ ಪ್ರತಿಭಟನೆ

ಗದಗ 17: ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಶುಕ್ರವಾರ ಜಿಲ್ಲೆಯಲ್ಲಿ ಸಹಸ್ರಾರು ಬಂಜಾರ ಸಮೂದಾಯದವರು ರಸ್ತೆಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ನಡೆಸಿದರು.ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಅಕ್ಟೋಬರ್ 6, 2025 ರಿಂದ ಪ್ರಾರಂಭವಾದ ಬೃಹತ್ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯು ಶುಕ್ರವಾರ ಸರ್ಕಾರಕ್ಕೆ ಇನ್ನು 15 ದಿನಗಳಲ್ಲಿ ಬಂಜಾರರಿಗೆ ಮೀಸಲಾತಿ ಹೆಚ್ಚಿಸದೆ ಇದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ, ಪತ್ರದ ಮೂಲಕ ತಮ್ಮ ನಿರ್ಣಯಗಳನ್ನು ತಿಳಲಿಸುವ ಮೂಲಕ ಅಹೋರಾತ್ರಿ ಧರಣಿಯು ಅಂತ್ಯಗೊಂಡಿತು.ಶುಕ್ರವಾರ ಜಿಲ್ಲೆಯ 72 ತಾಂಡಾಗಳ ಪೈಕಿ ನಾಯಕ, ಡಾವ್, ಕಾರಭಾರಿ, ಪಂಚರು ಹಾಗೂ ವಿವಿಧ ಸಮಾಜ ಸಂಘಟೆಯ ಮುಖಂಡರುಗಳ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನರು ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಶುರುಮಾಡಿದ ಪ್ರತಿಭಟನೆಯು ಸರ್ಕಾರದ ವಿರುದ್ಧ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೂಗು ಹಾಕುತ್ತ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ತಲುಪಿತು. 

ಈ ವೇಳೆ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ ಜಿಲ್ಲೆಯಲ್ಲಿ ಸತತ 12ದಿನಗಳ ಜಿಲ್ಲೆಯ 72 ತಾಂಡಾಗಳ ಹಿರಿಯರ ನೇತೃತ್ವದಲ್ಲಿ ವಿವಿಧ ರೀತಿಯ ಪ್ರತಿಭಟನೆ ಮಾಡಲಾಯಿತು ಇಲ್ಲಿಯವರೆಗೂ ಸರ್ಕಾರದಿಂದ ಯಾವ ಪ್ರತಿಕ್ತಿಯೆಯು ಬರದಕಾರಣ ಇವತ್ತು ವಿಷೇಶವಾಗಿ ಗೋರ ನಸಾಬ್(ಮಹಾ ಪಂಚಾಯತ್) ಹಮ್ಮಿಕೊಳ್ಳಲಾಗಿದ್ದು, ಇಲ್ಲಿಯ ತಗೆದುಕೊಳ್ಳುವ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.ನಂತರ ಪ್ರತಿಭಟನೆ ಕೂರಿತು ಮಾತನಾಡಿದ ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಸರ್ಕಾರದ ಒಳಮೀಸಲಾತಿ ವರ್ಗೀಕರಣವು ಅವೈಜ್ಷಾನಿಕವಾಗಿದ್ದು ಬಂಜಾರ ಸಮಾಜದ ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಂಕಿ ಅಂಶಗಳು ವಾಸ್ತವಿಕತೆಗೆ ದೂರವಾಗಿವೆ ಎಂದು ಆಕ್ರೋಶ ವುಕ್ತಪಡಿಸಿದರು.ಕಲಬುರ್ಗಿಯ ಮಾಜಿ ಸಂಸದ ಉಮೇಶ ಜಾದವ ಮಾತನಾಡಿ ನಮ್ಮ ತಾಂಡಾದ ಜನರು ಅನ್ಯ ರಾಜ್ಯಗಳಿಗೆ ಹೋಟ್ಟೆ ಪಾಡಿಗಾಗಿ ವಲೆಸೆ ಹೋಗುತ್ತಾರೆ ಆದರು ಈ ಸರ್ಕಾರ ನಮ್ಮ ಸಮಾಜದ ಜನರಿಗೆ ಮರಣ ಶಾಸನವನ್ನು ವಿಧಿಸಿ ಮತ್ತೆ 50 ವರ್ಷ ಹಿಂದಕ್ಕೆ ದುಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿಷಯ ಮಂಡಿಸಿದರು. 

ಮಾಜಿ ಶಾಸಕ ಮತ್ತು ಮಾಜಿ ತಾಂಡಾ ನಿಗಮದ ಅಧ್ಯಕ್ಷ ಪಿ.ರಾಜೀವ ಮಾತನಾಡಿ ರಾಜ್ಯದಲ್ಲಿ ಸುಮಾರು 3300 ತಾಂಡಾಗಳಲ್ಲಿ ವಾಸಿಸುವ ಮತ್ತು 18-20 ಲಕ್ಷ ಜನಸಂಖ್ಯೆ ಇರುವ ಬಂಜಾರ ಸಮುದಾಯವು ಸರ್ಕಾರದ ಈ ನಡೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಸರ್ಕಾರದ ನಿರ್ಧಾರದಿಂದ ಬಂಜಾರ ಸಮುದಾಯದಲ್ಲಿ ಆತಂಕ ಹುಟ್ಟಿದ್ದು, ಇದು ಐತಿಹಾಸಿಕ ನಿರ್ಣಯಕ್ಕೆ ಬರುವಂತೆ ಮಾಡಿದ್ದು ನಮ್ಮ ಸಮಾಜ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದರು.ನಿವೃತ್ತ ನ್ಯಾಯಮೂರ್ತಿ ಸುಭಾಶ ರಾಠೋಡ ಮಾತನಾಡಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದನ್ನು ಬಿಟ್ಟು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಕಾಂಗ್ರೆಸ್ ಸರ್ಕಾರ ಬಂಜಾರ ಜನಾಂಗಕ್ಕೆ ಕಡಿಮೇ ಮೀಸಲಾತಿ ಕೊಟ್ಟು ಅನ್ಯಾಯವೇಸಗಿದೆ, ಕೂಡಲೆ ಸರ್ಕಾರ ಶೇಕಡ 6ಅ ಮೀಸಲಾತಿ ನೀಡಲು ಆಗ್ರಹಿಸಿದರು.ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿ ಈ ಹಿಂದೆ ಬಂಜಾರ ಸಮಾಜವು ಬಿಜೆಪಿ ಭಹಿಷ್ಕರಿಸಿ ಕಾಂಗ್ರೆಸ್ನ್ನು ಸಂಪೂರ್ಣ ಬೆಂಬಲದಿಂದ ಅಧಿಕಾರಕ್ಕೆ ತಂದೋಡ್ಡಿದೆ, ಆದರು ಈ ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದರು.ಈ ಪ್ರತಿಭಟನೆಯಲ್ಲಿ ಲಿಂಗಸ್ಗುರಿನ ಸಿದ್ದಲಿಂಗ ಮಹಾಸ್ವಾಮೀ, ಕುಮಾರ ಮಾಹಾರಾಜ, ಪ್ರಕಾಶ ಮಹಾರಾಜ, ತಿಪ್ಪೆಸ್ವಾಮೀ, ಕೊಪ್ಪಳದ ಬಾಬಾ ಗೋಸಾಯಿ, ಗಂಗಾನಾಯ್ಕ, ರಾಮಾನಾಯ್ಕ, ಸುರೇಶ ಬಳುಟಗಿ, ಭರತ್ ನಾಯ್ಕ, ಆನಂದ ಅಂಗಡಿ, ಲೋಕೆಶ್ವರ ನಾಯ್ಕ, ಸುರೇಶ ರಜಪೂತ್, ಸೋಮು ನಾಯ್ಕ, ಐ.ಎಸ್‌.ಪೂಜಾರ, ಸುರೇಶ ಮಹಾರಾಜ, ಧನ್ನುರಾಮ ತಂಬುರಿ, ಪರಮೇಶ ನಾಯ್ಕ, ಶಿವಪುತ್ರ​‍್ಪ ನಾಯ್ಕ, ಚಂದು ನಾಯ್ಕ, ಟಿ.ಡಿ ಪೂಜಾರ, ಶಿವಪ್ಪ ನಾಯಕ ಹಾಗೂ ಜಿಲ್ಲೆಯ 72 ತಾಂಡಾಗಳ ನಾಯಕ, ಡಾವ್, ಕಾರಭಾರಿ ಹಾಗೂ ವಿವಿಧ ಜಿಲ್ಲೆಯ ಬಂಜಾರ ಮುಖಂಡರು, ರಾಜಕೀಯ ದುರಿಣರು ಉಪಸ್ಥಿತರಿದ್ದರು.