ಧರ್ಮಸ್ಥಳದ ಕುರಿತು ನಡೆದ ತನಿಖೆ ಹಾಗು ನಕಲಿ ಹೋರಾಟಗಾರರ ವಿರುಧ್ಧ ಬೃಹತ ಪ್ರತಿಭಟನೆ
Massive protest against the investigation into Dharmasthala and the fake activists
ವಿಜಯಪುರ 13 : ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳ ವಿರುಧ್ಧ ಷಡ್ಯಂತ್ರ ರೂಪಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು.ತನಿಖೆಯಲ್ಲಿ ಯಾವದೇ ಅಸ್ಥಿಪಂಜರದ ಕುರುಹುಗಳು ದೊರಕದೆ ಇರುವ ಕಾರಣ ಎಸ್ ಐ ಟಿ ತನಿಖೆ ನಿಲ್ಲಿಸಿ ಅನಾಮಿಕ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಹೋರಾಟಗಾರರು ಆಗ್ರಹಿಸಿದರು..ಇಂದು ಸಿದ್ದೇಶ್ವರ ದೇವಸ್ಥಾನದಿಂದ ಧರ್ಮಸ್ಥಳದ ಕುರಿತು ನಡೆದ ತನಿಖೆ ಹಾಗು ನಕಲಿ ಹೋರಾಟಗಾರರ ವಿರುಧ್ಧ ಡಾ!! ಬಾಬಾಸಾಹೇಬ ಅಂಬೇಡ್ಕರ ವೃತ್ತದಲ್ಲಿ ಬೃಹತ ಪ್ರಮಾಣದ ಪ್ರತಿಭಟನೆಯಲ್ಲಿ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಶ್ರೀ ಅಶೋಕ ಅಲ್ಲಾಪೂರ ರವರು ಮಾತನಾಡಿದರು..ನಮ್ಮೆಲ್ಲರ ಪುಣ್ಯ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಕಳಂಕ ತಂದಿರುವರನ್ನು ಮುಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದರುಮಾಜಿ ವಿಧಾನ ಪರಿಷತ್ತಿನ ಸದಸ್ಯ ಅರುಣ ಶಹಾಪುರ ಮಾತನಾಡಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಪಪ್ರಚಾರ ಸಹಿಸುವುದಿಲ್ಲ. ಇದರಿಂದ ಕೋಟ್ಯಂತರ ಭಕ್ತರ ಭಾವನೆಗೆ ದಕ್ಕೆ ಬಂದಿದೆ. ಮುಂದುವರಿದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು...
ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮಾತನಾಡಿ ಧರ್ಮಸ್ಥಳ ಕ್ಷೇತ್ರವು ದುಡಿಯುವ ವರ್ಗಗಳಿಗೆ ಆರ್ಥಿಕ ನೆರವು ನೀಡಿ ಮಹಿಳಾ ಸಬಲೀಕರಣ ಮಾಡಿದ ಕೀರ್ತಿ ಸಲ್ಲುತ್ತದೆ. ಸಾಮಾಜಿಕ ಚಿಂತಕರಾದ ಎಸ್ ವಿ ಪಾಟೀಲ ಮಾತನಾಡಿಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ.ನ್ಯಾಯಕ್ಕೆ ಹೆಸರಾದವರು ಡಾ ವೀರೇಂದ್ರ ಹೆಗಡೆ.ಪಟ್ಟಬದ್ರ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ಮಾತನಾಡಿ ಅನಾಮಿಕ ವ್ಯಕ್ತಿಯ ನಡತೆ ಸಂಶಯ ಉಂಟುಮಾಡಿದೆ.ಸರಕಾರ ಈ ಹಂತದಲ್ಲಿ ಅವಸರ ಮಾಡಿದ್ದು ಎಸ್ ಐ ಟಿ ತನಿಖೆ ವಾಪಸ ಪಡೆದುಕೊಳ್ಳಬೇಕು ಎಂದರು..ಶಿವಾನಂದ ದೇಸಾಯಿ ರವರು ಮಾತನಾಡಿ ಧರ್ಮಸ್ಥಳದ ಅಪಪ್ರಚಾರ ನಿಲ್ಲಬೇಕು ಎಸ್ ಐ ಟಿ ತನಿಖೆಗೆ ಪುಣ್ಯ ಕ್ಷೇತ್ರ ಸಹಕಾರ ನೀಡಿದೆ ಎಂದರು.. ಪೂಜ್ಯರಾದ ಮಲ್ಲಿಕಾರ್ಜುನ ಸ್ವಾಮಿಜಿ, ಸರೂ್ಭಷಣ ಶಿವಯೋಗಿ ಬೆಂಗಳೂರು,ಕರಭಂಟನಾಳ ಶಿವಕುಮಾರ ಸ್ವಾಮೀಜಿ,ತಡವಾಲಗ ರಾಚೋಟೇಶ್ವರ ಸ್ವಾಮಿಜಿ,ಅಹಿರಸಂಗದ ಅಭಿನವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ..ಶೀತಲಕುಮಾರ್ ಓಗಿ, ಸಂಜು ಐಹೊಳ್ಳಿ,ಧರೆಪ್ಪ ಹೊನವಾಡ, ಯೋಗೇಶ ನಡುವಿನಕೇರಿ, ವಿ ಸಿ ನಾಗಠಾಣ,ರವೀಂದ್ರ ಬಿಜ್ಜರಗಿ,ಸಿದ್ರಾಮಪ್ಪ ಉಪ್ಪಿನ, ಅಪ್ಪಾಸಾಹೇಬ ಮುತ್ತಿನ, ಉಮೇಶ ಕಾರಜೋಳ, ರಾಘು ಅಣ್ಣಿಗೇರ,ಮಾಯಕ್ಕ ಚೌಧರಿ,ಮಾತನಾಡಿದರು.ಪ್ರೇಮಾನಂದ ಬಿರಾದಾರ,ರಾಹುಲ ಜಾಧವ, ಶಿವರುದ್ರ, ಬಾಗಲಕೋಟ,ರಾಜು ಜಾಧವ, ಉಮೇಶ ವಂದಾಲ,ಬಿ ಡಿ ಪಾಟೀಲ,ವಿಜಯ ಜೋಶಿ, ಶ್ರೀಮಂತ ಸಲಗರ, ಡಾ ಆನಂದ ಕುಲಕರ್ಣಿ, ಸಾತಪ್ಪ ಗೊಂಗಡಿ, ಶ್ರೀಕೃಷ್ಣ ಗೋನಾಳಕರ,ಉದಯಕುಮಾರ ಗುಮಶೆಟ್ಟಿ,ಲಕ್ಷ್ಮಿ ಕನ್ನೊಳ್ಳಿ,ದೇವನಗೌಡ ಬಿರಾದಾರ,ಪ್ರವೀಣ ಕಾಸರ,ಉಮೇಶ್ ಕೊಳಕುರ,ಸಾವಿತ್ರಿ ಕಲ್ಯಾಣಶೆಟ್ಟಿ,ಮಹಾಂತೇಶ ಆಸಂಗಿ, ಅನೇಕ ಸಂಘ ಸಂಸ್ಥೆಗಳ ಮುಂಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಧರಣಿ ಸ್ಥಳದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀ ಸೋಮಲಿಂಗ ಗೆಣ್ಣೂರ ಅವರು ಮನವಿ ಸ್ವೀಕರಿಸಿದರು...
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 