ಅನ್ನದಾತರ ಆಕ್ರೋಶ,ಪ್ರತಿಭಟನೆಗೆ ನ್ಯಾಯವಾದಿಗಳು ಸಾತ
Massive protest against sugarcane price fixing: Gurlapur
ಗುರ್ಲಾಪೂರ 31: ಗುರ್ಲಾಪೂರ ಕ್ರಾಸ್ ನಲ್ಲಿ ರಸ್ತೆ ತಡೆದು ರೈತರು. ದಿ 30 ರಢಂದಢದ ಪ್ರತಿಭಟನೆ ನಡೆಸಿದರು. ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘ ಹಾಗೂ ಇನ್ನು ಅನೇಕ ರೈತ ಸಂಘಗಳು ಪಾಲ್ಗೊಂಡು ಗುರ್ಲಾಪೂರ ಕ್ರಾಸ್ ನಲ್ಲಿ ಕಬ್ಬಿನ ಬೆಲೆ ನಿಗದಿಗಾಗಿ ಬೃಹತ್ ಪ್ರತಿಭಟನೆ ನಡೆಸಿದರು
ಅನ್ನದಾತರ ಸಹನೆಯ ಕಟ್ಟೆ ಒಡೆದ ಹಾಗೆ ಕಾಣುತ್ತದೆ.ವರ್ಷವೀಡೀ ಬೆಳೆದ ಬೆಲೆಗೆ ಸರಿಯಾದ ಬೆಲೆ ಸಿಗುತ್ತಿಲ್ಲವೆಂದು ರೈತರು ಗುರ್ಲಾಪೂರ ಕ್ರಾಸದಲ್ಲಿ ರಾಜ್ಯ ಹೆದ್ದಾರೆ(ಬಾಗಲಕೋಟೆ-ಮುಧೋಳ ರಸ್ತೆ) ಬಂದಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ರೈತರು ಸುಮಾರು ಆರು ತಾಸು ರಾಜ್ಯ ಹೆದ್ದಾರಿ ಬಂದ್ ಮಾಡಿ ಕಾರ್ಖಾನೆಗಳಿಂದ ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿದರು ಮತ್ತು ನಿಗದಿ ಮಾಡದೆ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಬಾರದು ಅಂತ ರೈತರು ಸರ್ಕಾರಕ್ಕೆ ಒಂದುರೀತಿಯಾಗಿ ಎಚ್ಚರಿಕೆ ನೀಡಿದರು?.ನಮ್ಮ ಬೇಡಿಕೆ ಇಡೇರದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಅಂತನೂ ಮತ್ತೆ ರೈತರು ಕಾರವಾಗಿ ಹೇಳಿದರು.
ಈ ರೈತರ ಹೋರಾಟದ ಸ್ವರೂಪ ಯಾವರೀತಿಯಾಗಿ ಮುಂದುವರೆಯೂತೆ ಸರ್ಕಾರದ ನಿಲುವುಗಳ ಮೇಲೆ ನಿಂತಿರುವುದು?.
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಸಕ್ಕರೆ ಆಯುಕ್ತರು ಸರ್ಕಾರಕ್ಕೆ ವರದಿ ಕೊಟ್ಟ ಪ್ರಕಾರ ಇಂದು ಟನ್ ಕಬ್ಬು ಬೆಳೆಯಲು ರೂ.4.700 ಖರ್ಚು ಬರುತ್ತದೆ ಹೀಗಾಗಿ ಟನ್ನಿಗೆ 4.500 ಬೇಡಿಕೆ ಇಡಲಾಗಿತ್ತು. ಕೊನೆಗೆ 3.500 ಆದರೂ ದರ ಕೊಡಬೇಕು ಎಂಬುದು ರೈತರ ಬೇಡಿಕೆಯಾಗಿದೆ ಎಂದರು
ಮೊನ್ನೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯವರು ಕಂಪ್ಯೂಟರ್ ಮೂಲಕ ತೂಕದಲ್ಲು ನಡೆಯುವ ಮೋಸವನ್ನು ತಡೆಯಲು ಹೇಳಿದ್ದೇವೆ. ನೂರು ಕಿಲೋಮೀಟರ್ ದಿಂದ ಕಬ್ಬನ್ನು ತರುವ ಬದಲಿಗೆ ಸಮೀಪದಲ್ಲಿಯೇ ಇರುವ ಕಬ್ಬು ಖರೀದಿ ಮಾಡಿ, ಸಾಗಾಣಿಕೆ ವೆಚ್ಚವನ್ನು ರೈತರ ತಲೆಗೆ ಕಟ್ಟಬೇಡಿ ಎಂದರೂ ಕೇಳದೆ ಕೊನೆಗೆ ರೂ. 30.50 ಅಷ್ಟೇ ಕೊಡುವುದಾಗಿ ಕಾರ್ಖಾನೆಯವರು ಹೇಳಿದ್ದರಿಂದ ಮಾತುಕತೆ ಮುರಿದುಬಿದ್ದಿದೆ ಎಂದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ, ರಾಜ್ಯ ಉಪಾಧ್ಯಕ್ಷ ಸತ್ಯಪ್ಪ ಮಲ್ಲಾಪುರೆ, ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ರಾಜ್ಯ ಸಂಚಾಲಕ ವಾಸು ಪಂಡ್ರೋಳಿ, ಜಿಲ್ಲಾ ಅಧ್ಯಕ್ಷ ಕುಮಾರ ಮರಡಿ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಜಿಲ್ಲಾ ಕರ್ಯಾಧ್ಯಕ್ಷ ಮಂಜು ಪೂಜೇರಿ, ಜಿಲ್ಲಾ ಗೌರವ ಅಧ್ಯಕ್ಷ ಗೋಪಾಲ ಕುಕೂನೂರ, ಜಿಲ್ಲಾ ಸಂಚಾಲಕ ಪ್ರಕಾಶ ತೇರದಾಳ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಶೈಲ ಅಂಗಡಿ ಹಾಗೂ ರೈತ ಮುಖಂಡರುಗಳಾದ ಬಾಬು ಗೌಡ್ರ ಪಾಟೀಲ, ಸುಭಾಸ ಶಿರಗೂರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರಢದ
ಮೂಡಲಗಿ ತಾಲೂಕಿನ ನ್ಯಾಯವಾದಿಗಳು ರೈತ ಹೋರಾಟಕ್ಕೆ ಬೆಂಬಲ ಮತ್ತು ರೈತರಿಗೆ ಯಾರೇ..ಕೇಸು ಹಾಕಿದರು, ನಾವು ಪುಗ್ಸೆಟ್ಟೆಯಾಗಿ ಅವರ ಕೇಸು ನಡೆಸಿ ಕೋಡುತ್ತೇವೆ ಅಂತ ಭರವಸೆ ನೀಡಿದರು .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 