ಮೆಕ್ಸಿಕೊ ಸಿಟಿ , ಡಿಸೆಂಬರ್ 1- ಮೆಕ್ಸಿಕೊದ ಕೊಹಹುಲಾ ರಾಜ್ಯದ ಪಟ್ಟಣವೊಂದರ ಮೇಲೆ ಸಶಸ್ತ್ರದಾರಿಗಳು ಮತ್ತು ಮೆಕ್ಸಿಕನ್ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ.
ಕೊವಾಹಿಲಾ ರಾಜ್ಯದಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಗಂಡಿನ ಕಾರ್ಯಚರಣೆಯಲ್ಲಿ ಕನಿಷ್ಠ 14 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದ್ದು ಹಲವು ಪುರಸಭೆಯ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಎಬಿಸಿ ಸುದ್ದಿ ವರದಿ ಮಾಡಿದೆ.ಸಶಸ್ತ್ರ ಗುಂಪು ಪಟ್ಟಣಕ್ಕೆ ನುಗ್ಗಿ ಸ್ಥಳೀಯ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದೆ .
ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವೀಡಿಯೊ ಚಿತ್ರಗಳು ಬಿತ್ತರವಾಗಿದೆ ಪುರಸಭೆಯ ಕಚೇರಿಯ ಮುಂಭಾಗವು ಗುಂಡುಗಳಿಂದ ವಿಕಾರಗೊಂಡಿದೆ ಶಾಂತಿ ಕಾಪಾಡಲೂ ಭದ್ರತಾ ಪಡೆಗಳು ಇನ್ನೂ ಹಲವು ದಿನ ಪಟ್ಟಣದಲ್ಲಿ ಬಿಡಾರ ಹೂಡಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.