ಸಾಮೂಹಿಕ ಇಷ್ಟಲಿಂಗ ಮಹಾಪೂಜೆ
Mass Ishtalinga Mahapuja
ನವರಾತ್ರಿ ಆಚರಣೆಯ ಅಂಗವಾಗಿ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರರಿಂದ
ಧಾರವಾಡ 29 : ವೀರಶೈವ ಧರ್ಮದ ಸಿದ್ಧಾಂತ ಪ್ರಣೀತವಾದ ಇಷ್ಟಲಿಂಗ ಪೂಜೆಯು ಒಂದು ಶ್ರೇಷ್ಠ ಮಹಾವ್ರತವಾಗಿದೆ ಎಂದು ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಉತ್ತರ್ರದೇಶದ ವಾರಾಣಾಸಿ ನಗರದ ತಮ್ಮ ಜ್ಞಾನ ಪೀಠದಲ್ಲಿ ಶರನ್ನವರಾತ್ರಿ ಆಚರಣೆಯ ಅಂಗವಾಗಿ ಸೋಮವಾರ 8ನೆಯ ದಿನದ ಶುಭಾಶೀರ್ವಾದ ಸಂದೇಶ ನೀಡಿ ಮಾತನಾಡುತ್ತಿದ್ದರು. ಪ್ರಕೃತಿಯ 84 ಲಕ್ಷ ಜೀವರಾಶಿಗಳಲ್ಲಿ ಕೊನೆಯ ಅವಸ್ಥೆ ಎಂದೇ ಪರಿಗಣಿತವಾಗಿರುವ ಮಾನವ ಜನ್ಮದಲ್ಲಿ ಮುಕ್ತಿಯನ್ನು ಸಂಪಾದಿಸಲು ಪೂರಕವಾದ ಶಿವಯೋಗಾನುಸಂಧಾನದ ಪ್ರಮುಖ ಸಾಧನಾಗಿ ಇಷ್ಟಲಿಂಗ ಪ್ರಾಪ್ತವಾಗಿದೆ ಎಂದರು. ಇಷ್ಟಲಿಂಗ ಪೂಜೆಯು ನಿತ್ಯವ್ರತ. ಇದನ್ನು ಶಿರೋವ್ರತ ಹಾಗೂ ಪಾಶುಪತ ವ್ರತ ಎಂದೂ ಸಂಬೋಧಿಸಲಾಗಿದೆ. ಇಷ್ಟಲಿಂಗ ಪೂಜಾನುಷ್ಠಾನವು ಎಲ್ಲ ವ್ರತಗಳಲ್ಲಿ ಶ್ರೇಷ್ಠವಾಗಿರುವುದರಿಂದ ಇದು ಶಿರೋವ್ರತ. ಈ ವ್ರತದ ಮೂಲಕ ಜೀವನು ಶಿವನಾಗುವುದರಿಂದ ಇದು ಪಾಶುಪತ ವ್ರತ. ಬ್ರಹ್ಮಚಾರಿಗಳು, ಗೃಹಸ್ಥರು, ವಾನಪ್ರಸ್ಥರು, ಸನ್ಯಾಸಿಗಳು, ಜೊತೆಗೆ ಯಾವುದೇ ಜಾತಿ-ಜನಾಂಗದ ಸ್ತ್ರೀ-ಪುರುಷರು ಈ ವ್ರತ ಮಾಡಬಹುದಾಗಿದೆ. ಆದಿಯಲ್ಲಿ ಸದಾಶಿವನಿಂದ ಶ್ರೀಜಗದ್ಗುರು ಪಂಚಾಚಾರ್ಯರಿಗೆ, ನಂತರದಲ್ಲಿ ಶ್ರೀಜಗದ್ಗುರು ಪಂಚಾಚಾರ್ಯರು ಸಮಸ್ತ ಮಾನವರ ಕಲ್ಯಾಣಕ್ಕಾಗಿ ಇಷ್ಟಲಿಂಗ ಪೂಜಾ ವ್ರತವನ್ನು ಬೋಧಿಸಿದ್ದು, ಮನುಷ್ಯನ ಪಾರ್ಥಿವ ಶರೀರದೊಂದಿಗೆ ಹಿಂಬಾಲಿಸುವ ವಿಶ್ವದ ಏಕೈಕ ವಸ್ತು ಮತ್ತು ಚೈತನ್ಯವೆಂದರೆ ಅದು ಇಷ್ಟಲಿಂಗ ಮಾತ್ರ ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾರ್ಮಿಕವಾಗಿ ನುಡಿದರು.
ಶರನ್ನವರಾತ್ರಿ ಅಂಗವಾಗಿ ಪ್ರಾತಃಕಾಲದಲ್ಲಿ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮತ್ತು ಆದಿಶಕ್ತಿ ಮಾತೆಗೆ ವಿಶೇಷ ಕುಂಕುಮಾರ್ಚನೆ ಜರುಗಿದವು. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಗದಗ, ವಿಜಯಪೂರ ಜಿಲ್ಲೆಗಳ ಭಕ್ತರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 