ಮಾರುತಿ ಸುಜುಕಿಯಿಂದ ಸೆಲೆರಿಯೊ ಎಸ್‍-ಸಿಎನ್‍ಜಿ ಕಾರು ಮಾರುಕಟ್ಟೆಗೆ ಬಿಡುಗಡೆ

ಮುಂಬೈ, ಜೂನ್ 12,ಭಾರತದ ಪ್ರಮುಖ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಶುಕ್ರವಾರ ಬಿಎಸ್- 6 ಮಾನದಂಡಗಳನ್ನು ಪೂರೈಸುವ ಸೆಲೆರಿಯೊ ಶ‍್ರೇಣಿಯ ಎಸ್-ಸಿಎನ್‌ಜಿ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಇದು ಮೂಲತಃ ಆಟೋ ಎಕ್ಸ್‌ಪೋ 2020 ರಲ್ಲಿ ಘೋಷಿಸಲಾದ ಕಂಪನಿಯ ಮಿಷನ್ ಗ್ರೀನ್ ಮಿಲಿಯನ್ ದೃಷ್ಟಿಗೆ ಅನುಗುಣವಾಗಿದೆ.ಸೆಲೆರಿಯೊ ನಗರ ಚಾಲನೆಗೆ ಸೂಕ್ತವಾದ ಕಾರು ಎಂಬ ಕಾರಣಕ್ಕಾಗಿ ನಮ್ಮ ಗ್ರಾಹಕರ ಆಕರ್ಷಣೆಯಾಗಿದೆ. ಚಾಲನೆ ಮಾಡಲು ಸುಲಭವಾಗಿದ್ದು, ನಗರ ಪ್ರದೇಶಗಳಲ್ಲಿ ಯುವ ದಂಪತಿಗಳಲ್ಲಿ ಜನಪ್ರಿಯವಾಗಿದೆ. ಕಾರಿನ ಆರಾಮದಾಯಕ ಸವಾರಿ, ಸುಲಭ ಕುಶಲತೆ ಮತ್ತು ಅತ್ಯುತ್ತಮ ಇಂಧನ ದಕ್ಷತೆಯಿಂದಾಗಿ ಗ್ರಾಹಕರ ಮೆಚ್ಚುಗೆ ಪಡೆದಿದೆ. ಎರಡು ಪೆಡಲ್ ತಂತ್ರಜ್ಞಾನದ ಪ್ರವರ್ತಕ ಕಂಪೆನಿಯಾಗಿ ಭಾರತದಲ್ಲಿ ಆಟೋ ಗೇರ್ ಶಿಫ್ಟ್ ತಂತ್ರಜ್ಞಾನವನ್ನು ಪರಿಚಯಿಸಿದ ಮೊದಲ ಕಾರು ಸೆಲೆರಿಯೊ ಆಗಿದ್ದು, 5 ಲಕ್ಷಕ್ಕೂ ಹೆಚ್ಚು ಗ್ರಾಹಕರು ಸೆಲೆರಿಯೊವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ ಮತ್ತು ವ್ಯಾಪಾರ) ಶ್ರೀ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.   ಬಿಎಸ್- 6 ಮಾನದಂಡಗಳೊಂದಿಗೆ ಎಸ್‌-ಸಿಎನ್‌ಜಿ ಮಾದರಿಯು ಮಿಷನ್ ಗ್ರೀನ್ ಮಿಲಿಯನ್‌ ನ ಕಂಪೆನಿಯ ಬದ್ಧತೆಯ ಭಾಗವಾಗಿ ಪರಿಚಯಿಸಲಾಗುತ್ತಿದೆ. ಮಾರುತಿ ಸುಜುಕಿ ಕಂಪೆನಿ ದೇಶದಲ್ಲಿ ಸ್ವಚ್ಛ ಪರಿಸರ ಕಾಪಾಡಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳಡಿಸಿಕೊಂಡಿದೆ. ಒಂದು ದಶಕದ ಹಿಂದೆಯೇ ಕಂಪೆನಿ ಸಿಎನ್‌ಜಿ ವಾಹನಗಳನ್ನು ಪರಿಚಯಿಸಿತ್ತು. ಸದ್ಯ ಸಿಎನ್‌ಜಿ, ಸ್ಮಾರ್ಟ್ ಹೈಬ್ರಿಡ್ ವಾಹನಗಳು ಸೇರಿದಂತೆ 10 ಲಕ್ಷ ಪರಿಸರ ಸ್ನೇಹಿ ಹಸಿರು ವಾಹನಗಳನ್ನು ಮಾರಾಟ ಮಾಡಿರುವ ಮಾರುತಿ ಸುಜುಕಿ, ತನ್ನ 'ಮಿಷನ್ ಗ್ರೀನ್ ಮಿಲಿಯನ್' ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಹತ್ತು ಲಕ್ಷ ಹಸಿರು ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.