ಮಾರುತಿ ದೇವರ ಜಾತ್ರಾ ಮಹೋತ್ಸವ ಏ.11ರವರೆಗೆ

ಮಾರುತಿ ದೇವರ ಜಾತ್ರಾ ಮಹೋತ್ಸವ ಏ.11ರವರೆಗೆ Maruti Devara Jatra Festival to continue till 11th April

ಲೋಕದರ್ಶನ ವರದಿ 

ಬೈಲಹೊಂಗಲ 07: ತಾಲೂಕಿನ ನಾವಲಗಟ್ಟಿ ಗ್ರಾಮದ ಮಾರುತಿ ದೇವರ ಜಾತ್ರಾ ಮಹೋತ್ಸವವು ಏ.11ರವರೆಗೆ ಅದ್ದೂರಿಯಿಂದ ಜರಗಲಿದೆ.  ಏ.6ರಿಂದ ಜಾತ್ರಾ ಮಹೋತ್ಸವ ಆರಂಭವಾಗಿದ್ದು. ಏ. 8ರಂದು ನಾವಲಗಟ್ಟಿ ಗ್ರಾಮದ ಮಾರುತಿ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಏ.9ರಂದು ಬೆಳಿಗ್ಗೆ 5 ಗಂಟೆಗೆ ಮಾರುತಿ ದೇವರ ರುದ್ರಾಭಿಷೇಕ ನಂತರ ಮಹಾಪ್ರಸಾದ ಜರುಗಲಿದೆ. ರಾತ್ರಿ 8 ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ಏ.10 ರಂದು ಗ್ರಾಮದೇವಿಗೆ ಉಡಿ ತುಂಬುವುದು ರಾತ್ರಿ ಮನೋರಂಜನಾ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಏ. 11ರಂದು ಪುನರ್ವಸತಿ ಕೇಂದ್ರಗಳಿಂದ ಪಲ್ಲಕ್ಕಿ ಆಗಮನ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.ಸಾಯಂಕಾಲ 4ಗಂಟೆಗೆ ಯರಗೊಪ್ಪ ಲೀಲಾಮಠದ ಶ್ರೀ ನಿತ್ಯಾನಂದ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಾರುತಿ ದೇವರ ರಥೋತ್ಸವ ಜರಗಲಿದೆ.  ಅದೇ ದಿನ ರಾತ್ರಿ 9ಗಂಟೆಗೆ ಗೋಕಾಕ ಫಾಲ್ಸನ ಪ್ರತಿಕ್ಷಾ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಸದ್ಬಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.