ದಿ. 17ರಿಂದ ತಡವಲಗಾ ಮರುಳಸಿದ್ದೇಶ್ವರ ಜಾತ್ರೆ

 ದಿ. 17ರಿಂದ  ತಡವಲಗಾ ಮರುಳಸಿದ್ದೇಶ್ವರ ಜಾತ್ರೆ  Marulasiddheshwara fair to begin from today

ಇಂಡಿ 16: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಆರಾಧ್ಯ ದೈವ ಮರುಳಸಿದ್ದೇಶ್ವರ ದೇವರ ಜಾತ್ರೆ ಪ್ರತಿ ವರ್ಷದಂತೆ ಕ್ರೋಧಿನಾಮ ಸಂವತ್ಸರ ಶಕೆ 1947 ಶ್ರಾವಣ ಬಹುಳ ರವಿವಾರ ದಿ. 17ರಿಂದ ಮಂಗಳವಾರ 19ರವರೆಗೆ ಅತಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರೆ ಕಮೀಟಿ ಅಧ್ಯಕ್ಷ ತಮ್ಮಣ್ಣಾ ಪೂಜಾರಿ ತಿಳಿಸಿದ್ದಾರೆ. 

17ರಂದು ಬೆಳಿಗ್ಗೆ 8ಗಂಟೆಯಿಂದ ಸೋಮವಾರ 18ರಂದು ಬೆಳಿಗ್ಗೆ 8ಗಂಟೆಯವರಿಗೆ ಸಪ್ತಾಹ ಹಾಗೂ ಗೂಳಿ ಬಸವೇಶ್ವರ ಭಜನಾ ಮಂಡಳಿ ಹಾಗೂ ಜೋಡಗುಡಿ ಮರುಳಸಿದ್ದೇಶ್ವರ ಭಜನಾ ಮಂಡಳಿ ಇವರಿಂದ ನಿರಂತರ ಭಜನೆ ನಡೆಯಲಿದೆ. ಸೋಮವಾರ 18ಬೆಳಿಗ್ಗೆ 10 ಘಂಟೆಗೆ ತಡವಲಗಾ ಗ್ರಾಮ ಪಂಚಾಯಿತಿ ಹಾಗೂ ತಡವಲಗಾ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಸಹಯೋಗದಲ್ಲಿ ಬಲಬೀಮ ದೇವಾಲಯದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ನಂತರ ಮಧ್ಯಾಹ್ನ 2ಗಂಟೆಗೆ  ಮರುಳುಸಿದ್ದೇಶ್ವರ ಪಲ್ಲಕ್ಕಿಗೂ ಮೂಲ ದೇವಸ್ಥಾನದಿಂದ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೋಡುಗುಡಿ ತಲುಪುವುದು. ರಾತ್ರಿ ಎಂಟು ಗಂಟೆಗೆ ಪಲ್ಲಕ್ಕಿಯು ಬಲಭೀಮ ದೇವಸ್ಥಾನದಲ್ಲಿ ವಾಸ್ತವ್ಯ ಇರಲಿದೆ. ಸಂಜೆ 7ರಿಂದ 8ರವರೆಗೆ ರಂಗು ರಂಗಿನ ಚಿತ್ರವಿಚಿತ್ರ ಮದ್ದು ಸುಡಲಾಗುವುದು ನಂತರ ರಾತ್ರಿ 10ಗಂಟೆಗೆ ಲಕ್ಷ್ಮೀಬಾಯಿ ಬ್ಯಾಡಿಹಾಳ ಸಾ.ಮಸಿಬಿನಾಳ  ತಾಲೂಕ ಬಸವನಬಾಗೇವಾಡಿ ಹಾಗೂ ಮೌಲಾಸಾಬ್ ಮಂಕದಾರ ಸಾ ಮಸಿಬಿಹಾಳ ಇವರಿಂದ ಹರದೇಶಿ -ನಾಗೇಶಿ ಗೀ ಗೀ  ಪದಗಳು ನಡೆಯಲಿವೆ.  

ಮಂಗಳವಾರ 19ರಂದು ಬೆಳಿಗ್ಗೆ 6ಗಂಟೆಗೆ ಮರುಳಸಿದ್ದೇಶ್ವರ ಪಲ್ಲಕ್ಕಿಯನ್ನು ಮೂಲ ದೇವಸ್ಥಾನಕ್ಕೆ ಪುನರಾಗಮನ ಹಾಗೂ ಪುರಾಣ ಮಾಹಾಮಂಗಲ. ಬೆಳಿಗ್ಗೆ 8ಗಂಟೆಗೆ ಗೀ ಗೀ ಪದಗಳು ಮುಂದುವರಿಯುವುದು. ಮಧ್ಯಾಹ್ನ 12ಗಂಟೆಗೆ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾರ ಎತ್ತುವ ಶಕ್ತಿ ಪ್ರದರ್ಶನ ನಡೆಯುವುದು. ಸಾಯಂಕಾಲ 4ನಾಲ್ಕು ಗಂಟೆಗೆ ಪ್ರಸಿದ್ಧ ಪೈಲ್ವಾನ್ ರಿಂದ ಜಂಗೀ ಕುಸ್ತಿಗಳು ಜರುಗುವುದು. ಅದೇ ದಿನ ರಾತ್ರಿ 10ಗಂಟೆಗೆ ಮರುಳಸಿದ್ದೇಶ್ವರ ಹವ್ಯಾಶಿ ಕಲಾ ಬಳಗ ತಡವಲಗಾ ಇವರಿಂದ ಮಾಂಗಲ್ಯ ಮಾರಿದ ಮಡದಿ ಅರ್ಥಾತ್ ಬಂಗಾರದ ಕಳಸ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯುವುದು. 

ಮರು ದಿನ ಬುಧವಾರ ದಿ. 20ರಂದು ಮರುಳಸಿದ್ದೇಶ್ವರ ಪಲ್ಲಕ್ಕಿಯ ಪಟಾಕ್ಷಿ 9.30 ಗಂಟೆಗೆ ಭಜನೆ ಪುರವಂತರ ಸೇವೆ ವಾದ್ಯ ವೈಭವಗಳೊಂದಿಗೆ ಪಟಾಕ್ಷಿ ಇಳಿಸುವುದು ಎಂದು ತಮ್ಮಣ್ಣಾ ಪೂಜಾರಿ ಅವರು ತಿಳಿಸಿದ್ದಾರೆ.