ಹುತಾತ್ಮ ಜ್ಯೋತಿ ಯಾತ್ರೆ ಚಾಲನೆ
ರಾಣೆಬೇನ್ನೂರ 24 : ಅನ್ಯಾಯದ ವಿರುದ್ಧ ಹುತಾತ್ಮರ ಹೋರಾಟದ ಕಿಚ್ಚು ಪ್ರತಿಯೊಬ್ಬರ ಮನದಲ್ಲಿ ಮಿಡಿದರೆ ಸಾವಿರಾರು ಭಗತ್ ಸಿಂಗ್ ಹುಟ್ಟುತ್ತಾರೆ - ದೇವರಾಜ ಹುಣಸಿಕಟ್ಟಿರಾಣೆಬೇನ್ನೂರ: ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ ವಿರುದ್ಧ ಭಗತ್ ಸಿಂಗ್ ಹಾಗೂ ಅವರ ಸಂಗಾತಿಗಳ ರೀತಿಯಲ್ಲಿ ಹೋರಾಟದ ಕಿಚ್ಚು ಪ್ರತಿಯೊಬ್ಬ ಮನದಲ್ಲಿ ಮಿಡಿಯಲ್ಲಿ ಆಗ ಮಾತ್ರವೇ ಸಾವಿರಾರು ಭಗತ್ ಸಿಂಗ್ ಮರು ಹುಟ್ಟುತ್ತಾರೆ ಎಂದು ಸಾಹಿತಿ ದೇವರಾಜ ಹುಣಸಿಕಟ್ಟಿ ಹೇಳಿದರು. ವಿದ್ಯಾರ್ಥಿ-ಯುವಜನರ ಸ್ಪೂರ್ತಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಕಾಮ್ರೇಡ್ ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮ ದಿನದ ಅಂಗವಾಗಿ ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಿಗಾಗಿ, ಸಾಮರಸ್ಯ, ಸೌಹಾರ್ದತೆಯ ಐಕ್ಯತೆಗಾಗಿ ವಿದ್ಯಾರ್ಥಿ-ಯುವಜನರ ನಡಿಗೆ ಶಿಕ್ಷಣ, ಉದ್ಯೋಗ, ಸೌಹಾರ್ದತೆಯೆಡೆಗೆ ಎಂಬ ಘೋಷಣೆ ಅಡಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿಯು ಪೋಸ್ಟ್ ಸರ್ಕಲ್ ನಿಂದ ಬಸ್ ನಿಲ್ದಾಣ ವರೆಗೆ ನಡೆದ ಹುತಾತ್ಮ ಜ್ಯೋತಿ ಯಾತ್ರೆ ಚಾಲನೆ ನೀಡಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಯೌವನವನು ತ್ಯಾಗ ಮಾಡಿದ ಹುತಾತ್ಮರನ್ನು ವಿದ್ಯಾರ್ಥಿ-ಯುವಜನರ ಸ್ಮರಿಸಲೇಬೇಕಾದ ದಿನ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳನ್ನು ರಚಿಸಿಕೊಂಡರು ಸರಿಯಾದ ಶಿಕ್ಷಣ ಉದ್ಯೋಗ ಸಿಗುತ್ತಿಲ್ಲದಿರುವುದು ದುರಂತವಾಗಿದೆ. ಸಮಾನವಾದ ಶಿಕ್ಷಣ, ಉದ್ಯೋಗಕ್ಕಾಗಿ ಕ್ರಾಂತಿ ಜ್ಯೋತಿ ಯಾತ್ರೆ ಚಿರಯುವಾಗಿ ಉಳಿಯಲಿ. ಸರ್ಕಾರದ ಅನ್ಯಾಯದ ವಿರುದ್ಧ ಸಾವಿರಾರು ಭಗತ್ ಸಿಂಗ್ ರಂತೆ ಹೋರಾಟ ಮುಂದವರೆಯಲ್ಲಿ ಎಂದು ವಿದ್ಯಾರ್ಥಿ-ಯುವಜನರಿಗೆ ತಿಳಿಸಿದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿಕಾರಿಗಳಾದ ಕಾಮ್ರೇಡ್ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ಮಾರ್ಚ-23. ಮಹಾನ್ ಅಪ್ಪಟ ದೇಶಪ್ರೇಮಿಗಳ ತ್ಯಾಗ ಬಲಿದಾನದ ಸ್ಮರಣೆಗೆ ಈ ದಿನವನ್ನು ಆಚರಿಸಲಾಗುತ್ತದೆ.ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23. 1931, ಸಂಜೆ 7 ಗಂಟೆ 33 ನಿಮಿಷಕ್ಕೆ ಗಲ್ಲಿಗೇರಿಸಲಾಯಿತು. ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಅವರನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅವರ ಅಂತ್ಯಕ್ರಿಯೆ ನೇರವೇರಿಸಿದರು.ಸಮಾಜವಾದ ಮತ್ತು ಸಮಾಜವಾದಿ ಕ್ರಾಂತಿಯ ಬಗೆಗಿನ ಸಾಹಿತ್ಯವನ್ನು ಅವರು ಚಿಕ್ಕ ವಯಸ್ಸಿನಲ್ಲಿಯೇ ಓದಲಾರಂಭಿಸಿದ್ದರು. ಅವರಲ್ಲಿದ ಓದಿನ ಪ್ರೀತಿ ಬದುಕಿನ ಕೊನೆಕ್ಷಣದವರೆಗೂ ಇತ್ತು. ಭಗತ್ ಸಿಂಗ್ ಪರ ವಕೀಲ ಪ್ರಾಣನಾಥ್ ಮೆಹ್ತಾ, ಕೊನೆಯದಾಗಿ ಭೇಟಿಯಾದಾಗ ಭಗತ್ ‘ನಾನು ಹೇಳಿದ್ದ ‘ಖಿಜ ಖಜತಠಣಣಠಚಿಡಿಥಿ ಟಜಟಿಟಿ’ ಪುಸ್ತಕ ತಂದಿದ್ದಿ?ರಾ?’ ಎಂದು ಕೇಳಿದ್ದರು. ಪುಸ್ತಕ ಕೈಗೆ ಬರುತ್ತಿದ್ದಂತೆ ಓದಲು ಕುಳಿತೇ ಬಿಟ್ಟರು, ನಾಳೆ ನೇಣಿಗೆ ಕೊರಳುಡ್ಡುತ್ತಿರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ? ಎಂದು ರೊ?ಮಾಂಚನಗೊಂಡ ಮೆಹ್ತಾ ದೇಶವಾಸಿಗಳಿಗೆ ನಿಮ್ಮ ಸಂದೇಶವೇನು? ಎಂದಾಗ ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ ‘ಸಾಮ್ರಾಜ್ಯಷಾಹಿಗೆ ಧಿಕ್ಕಾರ, ಇಂಕ್ವಿಲಾಬ್ ಜಿಂದಾಬಾದ್- ಈ ಎರಡು ಘೋಷಣೆಗಳನ್ನು ತಿಳಿಸಿ’ ಎಂದು ಹೇಳಿದರು ಎಂದು ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ನ್ಯಾಯವಾದಿ ಮೃತ್ಯುಂಜಯ ಗುದಿಗೇರ, ಕಲಾವಿದ ಬಸವರಾಜ ಸಾವಕ್ಕನವರ, ಕಸಾಪ ಅಧ್ಯಕ್ಷ ಪ್ರಭಾಕರ್ ಶಿಗ್ಲಿ, ಎಸ್‌ಎಫ್‌ಐ ಡಿವೈಎಫ್‌ಐ ಮುಖಂಡರಾದ ಶ್ರೀಧರ್ ಸಿ, ಗುಡ್ಡಪ್ಪ ಮಡಿವಾಳರ, ಗೌತಮ್ ಸಾವಕ್ಕನವರ, ಬಸವರಾಜ ಕೊಣಸಾಲಿ, ಮಹೇಶ್ ಮರೋಳ, ಸುನೀಲ್ ಕುಮಾರ್ ಎಲ್, ಧನುಷ್ ದೊಡ್ಡಮನಿ, ನಾಗರಾಜ್ ಕುರಿ, ಅರುಣ್ ಎಸ್ ಜೆ, ಆಕಾಶ್ ಎ, ಭರತ್ ಗೌಡ ಪಾಟೀಲ್, ವಿಜಯ ಕೆ ಸೇರಿದಂತೆ ಅನೇಕ ವಿದ್ಯಾರ್ಥಿ-ಯುವಜನರು ಪಾಲ್ಗೊಂಡಿದ್ದರು.