ಮಾರ್ತುಂಡ ಭೈರವ ರಾವುತರಾಯ ಬಂಡಿ ಉತ್ಸವ: ಅದ್ದೂರಿ ಮೆರವಣಿಗೆ

ಮಾರ್ತುಂಡ ಭೈರವ ರಾವುತರಾಯ ಬಂಡಿ ಉತ್ಸವ: ಅದ್ದೂರಿ ಮೆರವಣಿಗೆ Martunda Bhairava Rautaraya Bandi Festival: A grand procession

ದೇವರಹಿಪ್ಪರಗಿ 20 :  ಪಟ್ಟಣದ ಐತಿಹಾಸಿಕ ಮಾರ್ತುಂಡ ಭೈರವ ರಾವುತರಾಯ ದೇವರ ಅಲಂಕಾರ(ಬಣ್ಣ)ಕ್ಕಾಗಿ ಕಾರ್ಣಿಕರ ನುಡಿಯಂತೆ ಬಂಡಿ ಉತ್ಸವವನ್ನು ಪಟ್ಟಣದ ಹೊರವಲಯದಲ್ಲಿರುವ ಮಲ್ಲಯ್ಯನ ದೇವಸ್ಥಾನಕ್ಕೆ ಬಂಡಿಯಲ್ಲಿ ಡೊಳ್ಳು ವಾದ್ಯಗಳೊಂದಿಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ಉತ್ಸವವನ್ನು ಗುರುವಾರದಂದು  ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ಭಕ್ತಿ ಮೆರೆದರು.

ಬೆಳಗಿನಜಾವ ಸೂರ್ಯೋದಯಕ್ಕೂ ಮುನ್ನವೇ ರಾವುತರಾಯನ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ಶಾಸ್ತ್ರೋಕ್ತವಾಗಿ ಪ್ರಾರಂಭವಾದವು, ನಂತರತೆರೆದ ಬಂಡಿಯಲ್ಲಿ ಅಶ್ವರೂಢನಾಗಿ ಆಸೀನನಾಗುವುದರ ಮೂಲಕ ಬಂಡಿ ಮೆರವಣಿಗೆ ಛತ್ರಿ ಚಾಮರಗಳೊಂದಿಗೆ ರಾವುತರಾಯನ ದೇವಸ್ಥಾನದಿಂದ ಮಲ್ಲಯ್ಯನ ದೇವಸ್ಥಾನಕ್ಕೆ ಅದ್ದೂರಿ ಮೆರವಣಿಗೆ ಸಹಸ್ರಾರು ಭಕ್ತರ ಮಧ್ಯೆ ರಾವುತರಾಯನಿಗೆ ಜೈ. ಮಲ್ಲಯ್ಯನಿಗೆ ಜೈ. ಏಳು ಕೋಟಿ... ಏಳು ಕೋಟಿ ಉಗೇ ಉಗೇ ಎಂಬ ಜಯ ಘೋಷಣೆಗಳು ಮುಗಿಲು ಮುಟ್ಟಿದವು. ಮಾರ್ತುಂಡ ಭೈರವ ರಾವುತರಾಯನ ಕಾರ್ಣಿಕ ನುಡಿಯೇನ....? ಮನುಷ್ಯಗ ವಿನಾಶ ಕಾಲ್  ಬಂತ್, ನನ್ನಂತ ನಡದ್ರ ನಿಮ್ಮ್‌ ಮನ್ಯಗ ಬೆಳದಿಂಗಲ್ ಕೂಸ್ ಆಗಿ ಆಡತೀನಿ.  ಆಗಸ್ಯಾಗ್ ಇಧಿ ಕುಂತೈತಿ   ನಾ ತಿರುಗಿ ಬರುದ್ರಾಗ  ಊರು ಬಹಳ ಜ್ವಾಕಿ. 

ಹತ್ತು ಮಂದಿ ಕೂಡಿ ಚಂದಾಗಿ  ತಿರುಗಿ ಸಿಂಹಾಸನಕ ಹಚ್ಚಿರಿ.  ಬಣ್ಣ ಮಾಡವ್  ನಾನಾಯಿತು ಅದರಾಗ್ ಯಾರು ಪ್ರವೇಶ ಮಾಡ ಬಾರ್ದು ಹೊರಗಿ ನವರ್ ದ್ರಷ್ಠಿ ಬೀಳಬಾರ್ದು. ಮೂರನೇ ಮಹಾಯುದ್ ಇವತ್ತಿ ನಿಂದ್ ಪ್ರಾರಂಭ. ಯಾರು ಸಣ್ಣ ಮಕ್ಕಳನ್ನು ಹೊರಗಡೆ ಬಿಡಬಾರ್ದು. ಹೋದವರು ಹೋದಕಡೆ ಇದ್ದವರು ಇದ್ದಕಡೆ.  ಮುಂದಿನ ಸಾಲ ರೋಣಿ ಮೀರಾಗಕ್ ಮಂಡಿ ಕಟ್ಟಸತಿನಿ  ಪುಷ-ಪುನಾರಸು ಮಳೆಗೆ ಬಳಗುರಿಗೆ ಆಯಿತು, ಬಿಳಿ ಕಾಳ ಮೇಲಾಯಿತು. ಧರ್ಮ ಹಿಡಿದ ನಡೆದವನಿಗೆ ಅಂಗೈಯೊಳಗಿನ ಲಿಂಗದಂಗ ಸಂರಕ್ಷಣೆ ಮಾಡ್ತೀನಿ ಎಂದು ಕಾರ್ಣಿಕ ನುಡಿಯಿತು.