ಫೆಬ್ರವರಿ 3ರಿಂದ ಮುಂಡಗೋಡದಲ್ಲಿ ಮಾರಿಕಾಂಬಾ ಜಾತ್ರಾ ಮಹೋತ್ಸವ: ಐದು ಹೊರಬೀಡುಗಳ ರೋಮಾಂಚಕ ಪಯಣ
Marikamba Jatra festival to begin in Mundagoda from February 3rd: A thrilling journey through five v
ಮುಂಡಗೋಡ 11: ಪಟ್ಟಣದ ಹಳೂರ ಓಣಿಯ ಶ್ರೀ ಮಾರಿಕಾಂಬಾ (ದ್ಯಾಮವ್ವ) ದೇವಿಯ ಜಾತ್ರಾ ಮಹೋತ್ಸವವು ಫೆಬ್ರವರಿ 3ರಿಂದ 11ರವರೆಗೆ ವೈಭವೋಪೇತವಾಗಿ ನಡೆಯಲಿದೆ. ಪ್ರತಿಮೂರು ವರ್ಷಕ್ಕೆ ನಡೆಯುವ ಈ ಮಹೋತ್ಸವವು ಭಕ್ತರ ನಡುವೆ ವಿಶೇಷ ಉತ್ಸಾಹ ಮತ್ತು ಧಾರ್ಮಿಕ ಭಾವನೆಯನ್ನು ಹುಟ್ಟಿಸುತ್ತಿದೆ. ಹೊರಬೀಡುಗಳ ಉತ್ಸವ: ಜನವರಿ 13ರಿಂದ 27ರವರೆಗೆ ಮಂಗಳವಾರ ಮತ್ತು ಶುಕ್ರವಾರಗಳಂದು ಐದು ಹೊರಬೀಡು ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಬೆಳಿಗ್ಗೆ 10 ಗಂಟೆಯೊಳಗೆ ಸ್ನಾನ ಪೂಜೆ ಪೂರ್ಣಗೊಳಿಸಿ, ಊರ ಗಡಿ ದಾಟುವ ಪದ್ಧತಿಯನ್ನು ಪಾಲಿಸುವಂತೆ ಸಮಿತಿ ಸೂಚಿಸಿದೆ.
ಭಕ್ತರು ತಮ್ಮ ಅಡುಗೆ ನೈವೇದ್ಯವಾಗಿ ದೇವಿಗೆ ಸಮರ್ಿಸಿ, ನಂತರ ತಮ್ಮ ಹೊಲಗಳಿಗೆ ಅಥವಾ ಅನುಕೂಲವಿರುವ ಬೇರೆಡೆಗೆ ಹೋಗಿ ಊಟ ಮಾಡಬಹುದು.ಮಧ್ಯಾಹ್ನ 4 ಗಂಟೆಯ ನಂತರ ಮನೆಗೆ ಪುನಃ ಮರಳುವಂತೆ ಸೂಚಿಸಲಾಗಿದೆ. ಶುಭಕಾರ್ಯಗಳ ಮೇಲೆ ನಿಯಮ: ಜಾತ್ರಾ ಅವಧಿಯಲ್ಲಿ, ಜನವರಿ 13ರಿಂದ ಮಾರ್ಚ್ 19ರವರೆಗೆ ಮುಂಡಗೋಡ, ನ್ಯಾಸರ್ಗಿ ಮತ್ತು ಕಾಳಗನಕೊಪ್ಪ ವ್ಯಾಪ್ತಿಯ ಬಂಧುಗಳಿಗೆ ಯಾವುದೇ ವೈಯಕ್ತಿಕ ಶುಭಕಾರ್ಯವನ್ನು ನಡೆಸಲು ಅವಕಾಶವಿಲ್ಲ. ಸಾರ್ವಜನಿಕ ಮಾರ್ಗಸೂಚಿ: ಜಾತ್ರಾ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ದೇವಸ್ಥಾನ ಕಮಿಟಿಯಿಂದ ಪ್ರಕಟಿತ ನಿಯಮಗಳು ಎಲ್ಲಾ ಭಕ್ತರಿಗೆ ತಿಳಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 