ಮರಾಠಾ ಎಲ್‌.ಐ.ಆರ್‌.ಸಿ. 6ನೇ ಅಗ್ನಿವೀರ್‌ರ ದೀಕ್ಷಾ ಸಮಾರಂಭ

ಮರಾಠಾ ಎಲ್‌.ಐ.ಆರ್‌.ಸಿ. 6ನೇ ಅಗ್ನಿವೀರ್‌ರ ದೀಕ್ಷಾ ಸಮಾರಂಭ Maratha L.I.R.C. Initiation ceremony of 6th Agniveer


ಬೆಳಗಾವಿ 03: ಮರಾಠಾ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್, ಬೆಳಗಾವಿ ಇಲ್ಲಿ 6ನೇ ಅಗ್ನಿವೀರ್ ದೀಕ್ಷಾ ಸಮಾರಂಭ ಭವ್ಯವಾಗಿ ಆಯೋಜಿಸಲಾಯಿತು.  31 ವಾರಗಳ ಕಠಿಣ ಮತ್ತು ಶಿಸ್ತುಬದ್ಧ ಸೈನಿಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಒಟ್ಟು 484 ಅಗ್ನಿವೀರರು ದೀಕ್ಷಿತರಾದರು. ಸಮಾರಂಭವನ್ನು ಮೇಜರ್ ಜನರಲ್ ಹರಿ ಭಾಸ್ಕರನ್ ಪಿಳ್ಳೈ, ಂಆಉ ಖಜಛಿಡಿಣಣಟಿರ (ಖಣಚಿಣ) ಅವರು ಪರೀಶೀಲಿಸಿ, ಯುವ ಸೈನಿಕರ ಶಿಸ್ತಿನ ಪ್ರದರ್ಶನ, ಅದ್ಬುತ ಟರ್ನೌಟ್ ಮತ್ತು ಅತ್ಯುತ್ತಮ ಡ್ರಿಲ್‌ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 

ಅಗ್ನಿವೀರರು ರಾಷ್ಟ್ರಧ್ವಜ, ರೆಜಿಮೆಂಟಲ್ ಧ್ವಜ ಹಾಗೂ ಪವಿತ್ರ ಗ್ರಂಥಗಳ ಸಾನ್ನಿಧ್ಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವಿಶೇಷ ಕ್ಷಣವನ್ನು ಹೆಮ್ಮೆಗೊಳಿಸಿದ ಪೋಷಕರು, ನಿವೃತ್ತ ಸೈನಿಕರು, ಗಣ್ಯರು, ಎನ್‌ಸಿಸಿ ಕ್ಯಾಡೆಟ್ಸ್‌ಗಳು ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು. ಅಗ್ನಿವೀರ್ ಪವನ್ ಯಲ್ಲಕುರಿ ಅವರ ನೇತೃತ್ವದ ಪರೇಡ್ ರೆಜಿಮೆಂಟಲ್ ಸೆಂಟರ್‌ನ ಉನ್ನತ ಮಟ್ಟದ ತರಬೇತಿಯನ್ನು ಪ್ರತಿಬಿಂಬಿಸಿತು. 

ಪರೀಶೀಲನಾ ಅಧಿಕಾರಿಗಳು ಪದಕಗಳನ್ನು ಪ್ರದಾನ ಮಾಡಿದರು. ಅಗ್ನಿವೀರ್ ಸೂರಜ್ ಮೋರೇ ಅವರಿಗೆ ಅತ್ಯುತ್ತಮ ಅಗ್ನಿವೀರ ಪ್ರಶಸ್ತಿಯಾಗಿ ನಾಯಕ್ ಯಶವಂತ ಘಾಡ್ಗೆ, ವಿ.ಸಿ. ಪದಕ ಪ್ರದಾನಿಸಲಾಯಿತು. ಸಮಾರಂಭವು ಶರ್ಕತ್ ವಾರ್ ಮೆಮೋರಿಯಲ್‌ನಲ್ಲಿ ಪುಷ​‍್ಾರೆ್ಪಣ ಹಾಗೂ ಪೋಷಕರಿಗೆ ಗೌರವ ಪದಕ ಪ್ರದಾನಿಸುವ ಮೂಲಕ ಪೂರ್ಣಗೊಂಡಿತು.