ಬೆಳಗಾವಿಯಲ್ಲಿ ಮರಾಠಾ ದಿನಾಚರಣೆ

ಬೆಳಗಾವಿಯಲ್ಲಿ ಮರಾಠಾ ದಿನಾಚರಣೆ  Maratha Day celebration in Belgaum

ಬೆಳಗಾವಿ 05: ಮರಾಠಾ ದಿನವನ್ನು 04 ಫೆಬ್ರವರಿ 2026 ರಂದು ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಗಂಭೀರ ಗೌರವ ಮತ್ತು ಆಳವಾದ ರೆಜಿಮೆಂಟಲ್ ಭಾವನೆಯೊಂದಿಗೆ ಆಚರಿಸಲಾಯಿತು.  

ಕಾರ್ಯಕ್ರಮದ ಆರಂಭದಲ್ಲಿ ಶಾರ್ಕತ್ ವಾರ್ ಮೆಮೋರಿಯಲ್‌ನಲ್ಲಿ ಕಮಾಂಡಂಟ್ ಅವರ ನೇತೃತ್ವದಲ್ಲಿ ಪುಷ್ಪಚಕ್ರ ಅರೆ​‍್ಣ ಸಮಾರಂಭ ನಡೆಯಿತು. ಇದರಲ್ಲಿ ಸೇವೆಯಲ್ಲಿರುವ ಅಧಿಕಾರಿಗಳು, ಜೆಸಿಒಗಳು, ಇತರ ಹುದ್ದೆಯ ಸೈನಿಕರು ಹಾಗೂ ವೀರನಿವೃತ್ತ ಯೋಧರು ಭಾಗವಹಿಸಿದರು.  

ಈ ಸಮಾರಂಭವು ದೇಶಕ್ಕಾಗಿ ಬಲಿದಾನ ಮಾಡಿದ ವೀರರಿಗೆ ಗೌರವ ಸಲ್ಲಿಸುವ ಜೊತೆಗೆ ರೆಜಿಮೆಂಟ್‌ನ ಶೌರ್ಯ, ತ್ಯಾಗ ಮತ್ತು ಕರ್ತವ್ಯದ ಶಾಶ್ವತ ಪರಂಪರೆಯನ್ನು ಪುನರುಚ್ಚರಿಸಿತು.2. ಮುಖ್ಯ ಕಾರ್ಯಕ್ರಮವು ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ ಪಿಟಿ ಗ್ರೌಂಡ್‌ನಲ್ಲಿ ಆಯೋಜಿಸಲಾದ ಬರಾಖಾನಾ ಸಮಾರಂಭವಾಗಿತ್ತು. ಇದಕ್ಕೆ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ, ಕಮಾಂಡಂಟ್ ಹಾಗೂ ಶ್ರೀಮತಿ ಮೃಣಾಲಿನಿ ಮುಖರ್ಜಿ, ಫ್ಯಾಮಿಲಿ ವೆಲ್ಫೇರ್ ಆರ್ಗನೈಸೇಷನ್ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. ಸ್ಟೇಷನ್‌ನ ಹಿರಿಯ ಅಧಿಕಾರಿಗಳು, ನಾಗರಿಕ ಗಣ್ಯರು, ವೀರನಿವೃತ್ತ ಯೋಧರು, ಕುಟುಂಬ ಸದಸ್ಯರು ಹಾಗೂ ನಾಗರಿಕ ಸಿಬ್ಬಂದಿ ಉಪಸ್ಥಿತರಿದ್ದು, ರೆಜಿಮೆಂಟ್, ವೀರನಿವೃತ್ತರು ಮತ್ತು ನಾಗರಿಕ ಸಮುದಾಯದ ನಡುವಿನ ಬಲವಾದ ಬಾಂಧವ್ಯವನ್ನು ಪ್ರತಿಬಿಂಬಿಸಿದರು.ಕಾರ್ಯಕ್ರಮದಲ್ಲಿ ಶಿಸ್ತಿನೊಂದಿಗೆ ಸಂಯೋಜಿತ ವಿವಿಧ ಕಾರ್ಯಕ್ರಮಗಳು ನಡೆದವು. ರೆಜಿಮೆಂಟ್‌ನ ಯೋಧ ಧರ್ಮ ಮತ್ತು ಶಿಸ್ತನ್ನು ಪ್ರದರ್ಶಿಸುವ ಉನ್ನತ ಮಟ್ಟದ ಯುದ್ಧಕಲಾ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ನಂತರ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರದರ್ಶಕರು ಸನ್ಮಾನಿತರಾಗಿದ್ದು, ಬರಾಖಾನಾ ಸಮಾರಂಭವು ಪರಸ್ಪರ ಸಂವಾದ, ಸ್ನೇಹಭಾವ ಮತ್ತು ತಲೆಮಾರಿನಿಂದ ತಲೆಮಾರಿಗೆ ರೆಜಿಮೆಂಟಲ್ ಬಾಂಧವ್ಯವನ್ನು ಬಲಪಡಿಸಲು ಉತ್ತಮ ವೇದಿಕೆಯಾಗಿತ್ತು.ಮರಾಠಾ ದಿನದ ಅಂಗವಾಗಿ ಅಗ್ನಿವೀರರಿಗಾಗಿ ತುರ್ಕಮಟ್ಟಿಯಲ್ಲಿ “ಎಕ್ಸರ್ಸೈಸ್ ಪೆಹ್ಲಾ ಕಡಮ್‌” ನಡೆಸಲಾಯಿತು. 02 ರಿಂದ 04 ಫೆಬ್ರವರಿ 2026 ರವರೆಗೆ 547 ಅಗ್ನಿವೀರರು ಹಾಗೂ 05 ರಿಂದ 07 ಫೆಬ್ರವರಿ 2026 ರವರೆಗೆ 543 ಅಗ್ನಿವೀರರು ಈ ಅಭ್ಯಾಸದಲ್ಲಿ ಭಾಗವಹಿಸಿದರು.

ಈ ಅಭ್ಯಾಸವು ತುರ್ಕಮಟ್ಟಿ ಡಿಫೆನ್ಸ್‌ ಲ್ಯಾಂಡ್‌ನಿಂದ ರೆಜಿಮೆಂಟಲ್ ಸೆಂಟರ್‌ವರೆಗೆ ನಡೆದ ಶಿಸ್ತಿನ ರೂಟ್ ಮಾರ್ಚ್‌ನೊಂದಿಗೆ ಮುಕ್ತಾಯಗೊಂಡಿತು. ಇದು ಸಹನಶೀಲತೆ, ನಿಷ್ಠೆ ಮತ್ತು ತರಬೇತಿ ಹಾಗೂ ಪರಂಪರೆಯ ಸಮನ್ವಯವನ್ನು ಸಂಕೇತಿಸಿತು.