ವೈನಾಡು , ಫೆ 8 : ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪು ಶನಿವಾರ ವೈನಾಡಿನ ಮನಂತವಡಿ ಬಳಿಯ ತಲಪುಳದಲ್ಲಿರುವ ಕಂಬಮಲದಲ್ಲಿ ಹಠಾತ್ ಪ್ರತಿಭಟನಾ ಪ್ರದರ್ಶನ ನಡೆಸಿರುವ ಬಗ್ಗೆ ವರದಿಯಾಗಿದೆ.
ಮೂವರು ಮಹಿಳೆಯರು ಸೇರಿದಂತೆ ಪ್ರತ್ಯೇಕತಾವಾದಿ ಗುಂಪಿನ ಏಳು ಮಾವೋವಾದಿಗಳು ಶಸ್ತ್ರಸಜ್ಜಿತರಾಗಿ ಸಿಎಎ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಊರಿನ ಹಲವು ಕಡೆ ಶರವೇಗದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಪರಾರಿಯಾದರು ಎಂದೂ ಮೂಲಗಳು ತಿಳಿಸಿವೆ.
ಗುಂಪು ತಮ್ಮನ್ನು 'ಸಿಪಿಎಂ-ಕಬಾನಿ' ಬಣ ಎಂದು ಗುರುತಿಸಿಕೊಂಡಿದೆ. ಎಲ್ಲಾ ಸಿಎಎ ವಿರೋಧಿ ಆಂದೋಲನಗಳಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿದೆ. ಈ ಗುಂಪು ಸ್ಥಳೀಯ ಬಜಾರ್‌ನಲ್ಲಿ ತಮ್ಮ ಪ್ರತಿಭಟನೆಯ ಸಂದರ್ಭದಲ್ಲಿ ಸಿಎಎ ವಿರುದ್ಧ ಪ್ರತಿಭಟಿಸುವ ಎಲ್ಲರಿಗೂ ಮತ್ತೊಮ್ಮೆ ಬೆಂಬಲ ವ್ಯಕ್ತಪಡಿಸಿದೆ.