ಲಕ್ಕುಂಡಿ, ಜಕನಾಯ್ಕನಕೊಪ್ಪ ಗ್ರಾಮಗಳ ಅನೇಕ ಕಾಮಗಾರಿಗಳಿಗೆ ಚಾಲನೆ

ಲಕ್ಕುಂಡಿ, ಜಕನಾಯ್ಕನಕೊಪ್ಪ ಗ್ರಾಮಗಳ ಅನೇಕ ಕಾಮಗಾರಿಗಳಿಗೆ ಚಾಲನೆ Many works in Lakkundi and Jakanaikanakoppa villages launched

ನೇಸರಗಿ 20: ಇಲ್ಲಿಗೆ ಸಮೀಪದ ಜಕನಾಯ್ಕನಕೊಪ್ಪ ಗ್ರಾಮದಲ್ಲಿ ಸಿ ಸಿ ರಸ್ತೆ, ವಾಲ್ಮೀಕಿ ಭವನ ನಿರ್ಮಾಣಕ್ಕೆ ಅಂದಾಜು 43 ಲಕ್ಷ ರೂಪಾಯಿಗಳ ಅನುಧಾನದ ಕಾಮಗಾರಿಗಳಿಗೆ  ಮತ್ತು  ಲಕ್ಕುಂಡಿ  ಗ್ರಾಮದಲ್ಲಿ ಹೊಲದ ರಸ್ತೆ ಕಡಿಕರಣ, ವೀರಭದ್ರೇಶ್ವರ ದೇವಸ್ಥಾನದಿಂದ ಕಡಿಕರಣ ಮತ್ತು ಸುನದೊಳಿ ಅವರ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಸಿ ಸಿ ಚರಂಡಿ ನಿರ್ಮಾಣ ಅಂದಾಜು 45 ಲಕ್ಷ ರೂಪಾಯಿಗಳ ನಿರ್ಮಾಣ ಕಾಮಗಾರಿಗಳಿಗೆ  ಭೂಮಿಪೂಜೆಯನ್ನು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ  ನೆರವೇರಿಸಿದರು.  ಈ ಸಂದರ್ಭದಲ್ಲಿ ಜಕನಾಯ್ಕನಕೊಪ್ಪ ಮತ್ತು ಲಕ್ಕುಂಡಿ ಗ್ರಾಮಗಳ, ಗುರುಮಾತೆ, ಸಮಸ್ತ ಗುರು ಹಿರಿಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.