ಹಿಟ್ನಾಳ ಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಗೆ ಮಾನ್ವಿ ಪಾಷಾ ಒತ್ತಾಯ

ಹಿಟ್ನಾಳ ಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಗೆ ಮಾನ್ವಿ ಪಾಷಾ ಒತ್ತಾಯ Manvi Pasha urges Congress high command to give Hitnal a ministerial berth

ಕೊಪ್ಪಳ 20:  ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಕೇಂದ್ರವಾದ ಕೊಪ್ಪಳ  ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ನಮ್ಮ ಕೊಪ್ಪಳದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಈ ಬಾರಿ ಸಚಿವ ಸ್ಥಾನ  ನೀಡಬೇಕೆಂದು  ಹಾಗೂ ಮುಸ್ಲಿಂ  ಸಮುದಾಯಕ್ಕೆ ಇನ್ನೂ ಮೂರು ಸಚಿವ ಸ್ಥಾನ ನೀಡಬೇಕು ಎಂದು ಕೊಪ್ಪಳ ನಗರಸಭೆಯ ಮಾಜಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ  ಮುಖಂಡ ಮತ್ತು ಸಮಾಜ ಸೇವಾ ಕಾರ್ಯದಲ್ಲಿ  ಜನಸಾಮಾನ್ಯರಿಂದ 108 ಎಂಬ ಖ್ಯಾತಿ ಪಡೆದಿರುವ ಎಂ ಮಾನ್ವಿ ಪಾಷಾ ರವರು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿಕೊಂಡು ಒತ್ತಾಯಪಡಿಸಿದ್ದಾರೆ,

ಈ ಕುರಿತು ಹೇಳಿಕೆ ನೀಡಿದ ಅವರು  ಶೀಘ್ರವಾಗಿ ಇನ್ನುಳಿದ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಸಚಿವ ಸ್ಥಾನ ಸಿಗಲಿ, ಜಿಲ್ಲಾ ಕೇಂದ್ರ ಮತ್ತಷ್ಟು ಅಭಿವೃದ್ಧಿ ಕಾಣಲಿ ಕೊಪ್ಪಳ ವಿಧಾನ ಸಭಾ ಕ್ಷೇತ್ರಕ್ಕೆ ಮಂತ್ರಿ ಗಿರಿ ಸಿಕ್ಕಿಲ್ಲ ಎಂಬ ಶಬ್ದ ಅಳಿಯಲಿ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ  ಹೊಸ ಇತಿಹಾಸ ಸೃಷ್ಟಿಯಾಗಲೀ,  ಏಕೆಂದರೆ  ಸಾಮಾಜಿಕ ನ್ಯಾಯ ಮತ್ತು ಐತಿಹಾಸಿಕ ಬದಲಾವಣೆ ಅದು ನಮ್ಮ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಈ ದಿಸೆಯಲ್ಲಿ ಹೈಕಮಾಂಡ್ ಸೂಕ್ತ ನಿರ್ಣಯ ತೆಗೆದುಕೊಂಡು ಕೊಪ್ಪಳ ಕ್ಷೇತ್ರದಿಂದ ಮೂರನೇ ಬಾರಿಗೆ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ ನಮ್ಮ ಹ್ಯಾಟ್ರಿಕ್ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಸಚಿವ ಸ್ಥಾನ ನೀಡಿದರೆ ಸದರಿ ವಿಷಯದಲ್ಲಿಯೂ ಸಹ ಐತಿಹಾಸಿಕ ನಿರ್ಣಯ ಕಾಂಗ್ರೆಸ್ ಪಕ್ಷ ಮಾತ್ರ ತೆಗೆದುಕೊಳ್ಳಲು ಸಾಧ್ಯ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಗೆ ಇದೊಂದು ಸುವರ್ಣ ಅವಕಾಶ ಇದನ್ನು ಕಳೆದುಕೊಳ್ಳದೆ.

ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಿ ಯಾವುದೇ ಕಾರಣಕ್ಕೂ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವಲ್ಲಿ ವಂಚಿತಗೊಳ್ಳುವುದು ಬೇಡ, ಜನಸಾಮಾನ್ಯರು ಕ್ಷೇತ್ರದ ಸಾಮಾನ್ಯ ಜನರು ಮತ್ತು ಪಕ್ಷದ ಸಕ್ರಿಯ ಕಾರ್ಯಕರ್ತರು ದೃಢವಾದ ವಿಶ್ವಾಸವನ್ನು ಕಾಂಗ್ರೆಸ್ ಹೈಕಮಾಂಡ್ ಮೇಲೆ ಇಟ್ಟಿದ್ದಾರೆ, ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರು ಹಿಂದುಳಿದ ವರ್ಗಗಳ ಒಬ್ಬ ಉತ್ಸಾಹಿ ಯವ ನಾಯಕರಾಗಿದ್ದು ಎಲ್ಲಾ ಸಮಾಜದವರೊಂದಿಗೆ ಇವರು ಬೆರೆತುಕೊಂಡು ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ ಯಾಗಿರುವ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆವುಳ್ಳ ಕುರುಬ ಸಮಾಜದ  ನಮ್ಮ ಪಕ್ಷದ ಏಕೈಕ ಶಾಸಕ ಯಾಗಿದ್ದಾರೆ ಸದರಿಯವರಿಗೆ ಸಚಿವ ಸ್ಥಾನ ನೀಡಿದರೆ ಇಡೀ ಅಹಿಂದ ಸಮುದಾಯಕ್ಕೆ ಮನ್ನಣೆ ನೀಡದಂತಾಗುತ್ತದೆ,