ರಾಯಬಾಗ 06: ತಾಲೂಕಿನ ಮಂಟೂರ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ಜೋಡಟ್ಟಿ, ಭೆಂಡವಾಡ, ದೇವಾಪುರಹಟ್ಟಿ, ರೇಷ್ಮೆ ಫಾರ್ಮ, ಕಂಕಣವಾಡಿ, ನಿಪನಾಳ, ಕಟಕಬಾವಿ, ಲಕ್ಷ್ಮಿಗುಡಿ, ನಿಂಗಮ್ಮದೇವಿ ಗುಡಿ, ಪಾಟೀಲ ತೋಟ, ಪಾಮಲದಿನ್ನಿ, ಜಾಗನೂರು, ಬ್ಯಾಕೂಡ ಗ್ರಾಮಗಳಿಗೆ ಮಾ.7 ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ವಾಯ್.ಎಸ್.ಸನಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.