ಇವಿಎಂ ಗೆ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೊಸ ನಾಮಕರಣ.!

ನವದೆಹಲಿ, ಅ, 17:     ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಗೆ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೊಸ ನಾಮಕರಣ ಮಾಡಿ ವಿವಾದ ಮೈಮೇಲೆ  ಎಳೆದುಕೊಂಡಿದ್ದಾರೆ. ವಾಸ್ತವವಾಗಿ ಇವಿಎಂ ಎಂದರೆ ಎವೆರಿ ವೋಟ್ ಫಾರ್ ಮೋದಿ" ಮತ್ತು "ಎವೆರಿ ವೋಟ್ ಫಾರ್ ಮನೋಹರ್" ಎಂದು ಅವರು ಟ್ವೀಟ್ ಮಾಡಿದ್ದಾರೆ. 

 ಇವಿಎಂ ಎಂದರೆ ನಿಜವಾಗಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಎಂಬ ಅರ್ಥ. ಯಾವುದೇ ಮತಪತ್ರ ಅಥವಾ ಮತಪೆಟ್ಟಿಗೆಯ ಅಗತ್ಯವಿಲ್ಲದೇ ಮತ ಚಲಾಯಿಸಬಹುದಾದ ಒಂದು ಸಲಭ ಸರಳ ವಿದ್ಯುನ್ಮಾನ ಮತಯಂತ್ರ  ಎಂಬುದು  ಎಲ್ಲರಿಗೂ ಗೊತ್ತಿರುವ ವಿಚಾರ.  ಅದರೂ ಅವರು  ಈ ರೀತಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. 

ಚುನಾವಣಾ ಸಭೆಯಲ್ಲಿ  ಖಟ್ಟರ್ ಈ ಹೊಸ ವ್ಯಾಖ್ಯಾನ ಮಾಡುತ್ತಿರುವ ವೀಡಿಯೊ ತುಣುಕಿನ ಸಹಿತ ಮಾಡಿದ ಟ್ವೀಟ್ ಅನ್ನು ಸಾರ್ವಜನಿಕರ ಆಕ್ರೋಶದ ನಂತರ  ಡಿಲೀಟ್ ಮಾಡಲಾಗಿದೆ. "ಯಂತ್ರದ ಹೆಸರು ಇವಿಎಂ. ಇದನ್ನು ಎವೆರಿ ವೋಟ್ ಫಾರ್ ಮೋದಿ ಎಂದು ವಿಸ್ತರಿಸಿ ಹೇಳಬಹುದು ಎಂದು ಹೇಳಿದ್ದಾರೆ.  

ರಾಜ್ಯ  ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ; ಲೋಕಸಭೆಗೆ ಅಲ್ಲ ಎಂದು ಯಾರಾದರೂ ಕೇಳಿದರೆ , ಅದನ್ನು ಎವೆರಿ ವೋಟ್ ಫಾರ್ ಮನೋಹರ್ ಎಂದು ಮಾರ್ಪಡಿಸಬಹುದು. ಮೋದಿಗಾದರೂ ಮತ ನೀಡಿ; ಮನೋಹರ್ಗಾದರೂ ಮತ ನೀಡಿ, ನೀವು ಒತ್ತಬೇಕಾಗಿರುವ ಗುಂಡಿ ಕಮಲದ ಚಿಹ್ನೆ ಎಂಬುದನ್ನು ಮರೆಯಬೇಡಿ ಎಂದು  ಖಟ್ಟರ್ ಹೇಳಿದ್ದಾರೆ.