ಮುಂಬೈ, ಡಿ 11: ಬಿಜೆಪಿ ಹಾಗೂ ಶಿವಸೇನೆ ನಡುವೆ ಮರು ಮೈತ್ರಿ ಕುರಿತು ಪಕ್ಷದ ಹಿರಿಯ ನಾಯಕ ಮನೋಹರ್ ಜೋಷಿ ಅವರು ನೀಡಿರುವ ಹೇಳಿಕೆ ಶಿವಸೇನೆಯ ಅಧಿಕೃತ ನಿಲುವಲ್ಲ, ಅದು ಅವರ ವ್ಯಕ್ತಿಗತ ಹೇಳಿಕೆ ಎಂದು ಶಿವಸೇನೆ ಬುಧವಾರ ಸ್ಪಷ್ಟನೆ ನೀಡಿದೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಪಕ್ಷದ ಹಿರಿಯ ನಾಯಕ ಮನೋಹರ್ ಜೋಷಿ, ಶೀಘ್ರದಲ್ಲಿಯೇ ಬಿಜೆಪಿ ಹಾಗೂ ಶಿವಸೇನೆ ಒಂದು ಗೂಡಲಿವೆ ಎಂದು ಮಂಗಳವಾರ ಹೇಳಿದ್ದರು.
ಈ ನಡುವೆ ಶಿವಸೇನೆ ಹಿರಿಯ ನಾಯಕ ನೀಲಂ ಗೋರೆ ಬುಧವಾರ ಹೇಳಿಕೆ ನೀಡಿ, ಶಿವಸೇನೆ ಮತ್ತು ಬಿಜೆಪಿ ಸದ್ಯದಲ್ಲೇ ಒಂದುಗೂಡಲಿವೆ ಎಂಬ ಹಿರಿಯ ನಾಯಕ ಮನೋಹರ್ ಜೋಷಿ ನೀಡಿರುವ ಹೇಳಿಕೆ ಅವರ ವ್ಯಕ್ತಿಗತವಾದ ಹೇಳಿಕೆ, ಅದು ಶಿವಸೇನೆಯ ಅಧಿಕೃತ ನಿಲುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ತಲೆಮಾರಿನ ನಾಯಕರಲ್ಲಿ ಇಂತಹ ಭಾವನೆಗಳು ಮೂಡುವುದು ಸ್ವಾಭಾವಿಕ ಎಂದು ಗೋರೆ ಹೇಳಿದ್ದಾರೆ.