ಮಂಜೇಶ್ವರ : ಕಾಂಗ್ರೆಸ್ ಮೈತ್ರಿ ಕೂಟ ಗೆಲುವು

ಮಂಗಳೂರು,  ಅ, 24:    ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುಣಾವಣೆಯಲ್ಲಿ  ಕಾಂಗ್ರೆಸ್  ನೇತೃತ್ವದ ಮೈತ್ರಿಕೂಟ ಯು.ಡಿ.ಎಫ್ ಅಭ್ಯರ್ಥಿ ಕಮರುದ್ದೀನ್ ಗೆಲುವು ಸಾಧಿಸಿದ್ದಾರೆ. 

ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನೊಂದಿಗೆ ತನ್ನ ಗಡಿ ಪ್ರದೇಶವನ್ನು ಹಂಚಿಕೊಂಡಿರುವ ಮಂಜೇಶ್ವರ ಕ್ಷೇತ್ರ ಕರ್ನಾಟಕದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೇರಳದ ಪ್ರದೇಶವಾಗಿದೆ. 

ಚುಣಾವಣಾ ಪ್ರಚಾರಕ್ಕಾಗಿ ಕರ್ನಾಟಕದಿಂದ ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಮಂಜೇಶ್ವರಕ್ಕೆ ಆಗಮಿಸಿದ್ದರು. ಮಂಜೇಶ್ವರದಲ್ಲಿ ತ್ರಿಕೋನ ಸ್ಪರ್ಧೆ ಇತ್ತು. 

ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್. ಅಭ್ಯರ್ಥಿ ಕಮರುದ್ದೀನ್ 65408 ಮತ ಪಡೆದು ಎಂಟು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಬಿಜೆಪಿಯ ರವೀಶ್ ತಂತ್ರಿ 57484 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.  ಕಮ್ಯುನಿಸ್ಟ್ ಪಕ್ಷದ ಶಂಕರ್ ಮಾಸ್ತರ್ ಅವರು 38233 ಮತ ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.